ತಂದೆ ಮಗನ ನಡುವಿನ ಪ್ರೀತಿ, ಬಾಂಧವ್ಯದ ಕಥಾಹಂದರ ಹೊಂದಿರುವ ‘ಹರ್ಷ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಸೋಮಶೇಖರ್ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಕ್ಕೆ ರಾಘವೇಂದ್ರ ಬಿ. ಮೈಸೂರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಸಹ ನಿರ್ದೇಶನ ಮಾಡಿದ್ದಾರೆ. ಇಂದಿನ ಪ್ರೇಕ್ಷಕ ವರ್ಗಕ್ಕೆ ಇಷ್ಟವಾಗುವಂತಹ ಕೌಟುಂಬಿಕ ಕಥಾಹಂದರದ ಕಥೆಯನ್ನು ಪರಿಣಾಮಕಾರಿಯಾಗಿ ಮತ್ತು ಮನರಂಜನಾತ್ಮಕವಾಗಿ ಪ್ರೇಕ್ಷಕರ ಮುಂದಿಡಲಾಗುತ್ತಿದೆ ಎಂಬುದು ಚಿತ್ರತಂಡದ ಮಾತು. ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಹರ್ಷ ಕಾಣಿಸಿಕೊಂಡಿದ್ದು, ಈ ಪಾತ್ರದ ಸುತ್ತ ಇಡೀ ಕಥೆ ಸಾಗುತ್ತದೆ. ತಂದೆಯ ಪಾತ್ರದಲ್ಲಿ ಹಿರಿಯನಟ ಶಂಕರ್ ಅಶ್ವಥ್ ನಟಿಸಿದ್ದಾರೆ.
ಚಿತ್ರದ ನಾಯಕನಾಗಿ ಪ್ರಪುಲ್ ಸುರೇಂದ್ರ ನಟಿಸಿದ್ದು, ನಾಯಕಿ ಪಾತ್ರದಲ್ಲಿ ಮಾನಸಗೌಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಂಗೀತಾ, ಮೈತ್ರಿ, ಸುನಿಲ್ ಬನವಾಶಿ, ಸಂಜು, ಮಾದೇಗೌಡ ಹೆಗ್ಗಡದೇವನಕೋಟೆ, ಮನೋಜ್ ಷಡಕ್ಷರಿ, ರವಿಕುಮಾರ್ ಎಸ್. ಗೆಂಡೆ, ದೀಪಾ, ಖುಷಿ, ಸೇರಿದಂತೆ ಸಾಕಷ್ಟು ಯುವ ಕಲಾವಿದರು ಸಿನಿಮಾದ ಇಕರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಮೃದ್ಧಿ ರಾಘವೇಂದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಶಿಧರ್ ಎ. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಕೊಟ್ರೇಶ್. ಪಾ. ಅರುಣಾ ಛಾಯಾಗ್ರಹಣ. ಮಾದೇಗೌಡ ಹೆಗ್ಗಡದೇವನ ಕೋಟೆ, ಮನೋಜ್ ಷಡಕ್ಷರಿ. ರವಿ ಶೇರ್ ಬಹದ್ದೂರ್ ಅವರ ಸಹಾಯಕ ನಿರ್ದೇಶನ, ಅತೀಶಯ್ ಜೈನ್ ಅವರ ಸಂಗೀತ ನಿರ್ದೇಶನ, ಗಿರೀಶ್.ಎ.ಪಿ ಅವರ ಸಾಹಸ, ಸುಧಾಕರ್ ಗಂಗಾವತಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಈ ವರ್ಷದ ಕೊನೆಗೆ ‘ಹರ್ಷ’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ.