ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ ಸಿಂಧೂ ಗೌಡ ಎಂಬ ಹೊಸ ಹೆಸರು ಸೇರ್ಪಡೆಯಾಗುತ್ತಿದೆ. ಅಂದಹಾಗೆ, ಸಿಂಧೂ ಗೌಡ ಕನ್ನಡದ ಹಿರಿಯ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ. ಕನ್ನಡದಲ್ಲಿ ಹಲವು ಸದಭಿರುಚಿ ಸಿನಿಮಾಗಳನ್ನು ನಿರ್ದೇಶಿಸಿದ ಹಿರಿಯ ನಿರ್ದೇಶಕ ರಾಜ್ ಕಿಶೋರ್ ಅವರಿಂದ ಪ್ರೇರಣೆ ಪಡೆದಿರುವ ಅವರ ಪುತ್ರಿ ಸಿಂಧೂ ಗೌಡ ತಂದೆಯಂತೆಯೇ ನಿರ್ದೇಶಕರಾಗಿ ಮಿಂಚುವ ಕನಸ್ಸಿನಲ್ಲಿದ್ದಾರೆ.
ಈಗಾಗಲೇ ಈ ನಿಟ್ಟಿನಲ್ಲಿ ಒಂದು ಹೆಜ್ಜೆೆ ಮುಂದಿಟ್ಟಿರುವ ಸಿಂಧೂಗೌಡ, ‘ಆಪಲ್ ಕಟ್’ ಎಂಬ ಸಿನಿಮಾಕ್ಕೆೆ ಆ್ಯಕ್ಷನ್-ಕಟ್ ಹೇಳಿದ್ದಾಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ವೇಳೆ ‘ಆಪಲ್ ಕಟ್’ ಸಿನಿಮಾದ ಬಗ್ಗೆೆ ಮಾತನಾಡಿರುವ ಸಿಂಧೂ ಗೌಡ, ‘ಇದೊಂದು ಸಸ್ಪೆೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಈ ಸಿನಿಮಾಕ್ಕೆೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ನಾನು ಕಳೆದ 10 ವರ್ಷದಲ್ಲಿ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಈ ಮೊದಲು ಒಂದು ಶಾರ್ಟ್ ಫಿಲಂ ಕೂಡ ನಿರ್ದೇಶಿಸಿದ್ದು, ಹಿರಿತೆರೆಯಲ್ಲಿ ಇದು ನನ್ನ ಮೊದಲ ಸಿನಿಮಾ. ಒಮ್ಮೆ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವಾಗ ಭೇಟಿಯಾದ ಶಿಲ್ಪಾ ಪ್ರಸನ್ನ ಈ ಸಿನಿಮಾದ ಕಥೆಯನ್ನು ಕೇಳಿ ನಿರ್ಮಾಣಕ್ಕೆೆ ಮುಂದಾದರು. ‘ಆಪಲ್ ಕಟ್’, ಐವರು ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ಒಂದು ಮರ್ಡರ್ ಮಿಸ್ಟರಿ ಜೊತೆಗೆ ಮಾನವಶಾಸ್ತ್ರದ ವಿಷಯದ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎಂದು ಸಿನಿಮಾದ ಕಥಾಹಂದರ ಬಿಚ್ಚಿಡುತ್ತಾರೆ.
‘ಮೊದಲಿನಿಂದಲೂ ನಾನು ತಂದೆಯ ಜೊತೆ ಶೂಟಿಂಗ್‌ಗೆ ಹೋಗುತ್ತಿದ್ದೆ. ಹೀಗಾಗಿ ಸಿನಿಮಾ ಆಸಕ್ತಿ ಬೆಳೆಯುತ್ತಾಾ ಬಂತು. ತಂದೆಯನ್ನು ಪ್ರೇರಣೆಯಾಗಿಟ್ಟುಕೊಂಡು ಸಿನಿಮಾಕ್ಕೆೆ ಬಂದಿದ್ದೇನೆ. ಸದ್ಯ ‘ಆಪಲ್ ಕಟ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷಕ್ಕೆೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎನ್ನುತ್ತಾರೆ ಸಿಂಧೂ ಗೌಡ. ‘ಸಾನ್ವಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಶಿಲ್ಪಾ ಪ್ರಸನ್ನ ನಿರ್ಮಿಸಿರುವ ‘ಆಪಲ್ ಕಟ್’ ಸಿನಿಮಾದಲ್ಲಿ ಸೂರ್ಯ ಗೌಡ ನಾಯಕನಾಗಿ, ಅಶ್ವಿನಿ ಪೋಲೆಪಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ, ಬಲರಾಜವಾಡಿ, ಅಭಿಜಿತ್, ಮೀನಾಕ್ಷಿ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.