ನಟಿ ತಮನ್ನಾ ಭಾಟಿಯಾ ಕಳೆದ ವರ್ಷ 18 ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿರುವ ನಟಿ. ತೆಲುಗು, ತಮಿಳು, ಹಿಂದಿ ಹೀಗೆ ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿರುವ ತಮನ್ನಾ ಈಗ ತಮ್ಮ ಬೋಲ್ಡ್ಲುಕ್, ಲಿಪ್ಲಾಕ್ ಇಂಥದ್ದೇ ವಿಷಯಗಳಿಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ‘ಲಸ್ಟ್ ಸ್ಟೊರಿ 2’, ‘ಜೀ ಕರ್ದಾ’ ಪ್ರಾಜೆಕ್ಟ್ನಲ್ಲಿ ತಮನ್ನಾ ಅವರ ಈ ಗೆಟಪ್ ನೋಡಿ ಅವರ ಅಭಿಮಾನಿಗಳೇ ಶಾಕ್ ಆಗಿದ್ದಾರೆ.
‘ನೋ ಲಿಪ್ ಲಾಕ್’ ಎಂಬ ತಮ್ಮ ರೂಲ್ಸ್ ಬ್ರೇಕ್ ಮಾಡಿ ಸಖತ್ ಹಾಟ್ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಇದೇ ವಿಷಯಕ್ಕೆೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿಯಾಗುತ್ತಿದ್ದಾರೆ.
ಅಂದಹಾಗೆ, ತಮನ್ನಾ ಭಾಟಿಯಾ ಹೀಗೆ ಯಾಕೆ ಮಾಡುತ್ತಿದ್ದಾರೆ? ಎಂಬುದಕ್ಕೆೆ ಸಂದರ್ಶನವೊಂದರಲ್ಲಿ ಅವರೇ ಉತ್ತರಿಸಿದ್ದಾರೆ. ತಾವು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಬಾಯ್ಬಿಟ್ಟಿದ್ದಾರೆ.
‘ನಾವು ಬದಲಾಗದಿದ್ದರೆ ಎಲ್ಲಿ ಆರಂಭಿಸಿದ್ದೆವೋ ಅಲ್ಲೇ ನಿಂತುಬಿಡುತ್ತೇವೆ. ಆ ರೀತಿ ನಿಂತು ಬಿಡಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ. ಎಲ್ಲರೂ ಕೆರಿಯರ್ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿ ಪ್ರಮೋಷನ್ ಇದ್ದಂತೆ ನಮ್ಮ ಕೆಲಸದಲ್ಲೂ ಇದೆ. ಪ್ರಮೋಷನ್ಗಾಗಿ ಸ್ವಲ್ಪ ಬ್ರಾಡ್ ಆಗಿ ಆಲೋಚಿಸಬೇಕು. ಹೊಸ ಹೊಸ ಪ್ರಯತ್ನ ಮಾಡಬೇಕು. ಆಗ ಮಾತ್ರ ಜರ್ನಿ ಮತ್ತಷ್ಟು ಸುದೀರ್ಘವಾಗಿ ಚೆನ್ನಾಗಿ ಇರುತ್ತದೆ’ ಎಂದಿದ್ದಾರೆ ತಮನ್ನಾ. ಹೀಗೆ ತಮ್ಮ ಕೆರಿಯರ್ನಲ್ಲಿ ಪ್ರಚಾರ ಬೇಕು ಅಂದ್ರೆೆ ಇದನ್ನೆೆಲ್ಲಾ ಮಾಡಬೇಕು ಅಂಥ ತಮನ್ನಾ ಪ್ರಚಾರ ಸೂತ್ರ ತೆರೆದಿಟ್ಟಿದ್ದಾರೆ.