ಸೋಮವಾರ, ಜುಲೈ 7, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಮಾಣಿಕ್ಯನ ಮಗಳೀಗ ನಾಯಕಿ; ರಿಯಲ್ ಅಲ್ಲ ರೀಲ್!

Vishalakshi Pby Vishalakshi P
19/08/2023
in Majja Special
Reading Time: 1 min read
ಮಾಣಿಕ್ಯನ ಮಗಳೀಗ ನಾಯಕಿ; ರಿಯಲ್ ಅಲ್ಲ ರೀಲ್!

ಹೆಡ್ಡಿಂಗ್ ನೋಡಿದಾಕ್ಷಣ ಕುತೂಹಲದ ಜೊತೆಗೆ ಕೊಂಚ ಕನ್‍ಫ್ಯೂಶನ್ ಆಗೋದು ಸಹಜ. ಯಾಕಂದ್ರೆ, ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರ ಏಕಮಾತ್ರ ಪುತ್ರಿ ಸಾನ್ವಿ ಸುದೀಪ್ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಚಿತ್ರ `ಜಿಮ್ಮಿ’ ಕ್ಯಾರೆಕ್ಟರ್ ಟೀಸರ್‍ಗೆ ಸಾನ್ವಿ ಸುದೀಪ್ ಸ್ಪೆಷಲ್ಲಾಗಿ ಸಾಂಗ್‍ವೊಂದನ್ನ ರೆಡಿಮಾಡಿದ್ದರು. ಲಿರಿಕ್ಸ್ ಬರೆಯೋದ್ರ ಜೊತೆಗೆ ಅವರೇ ಕಂಠದಾನ ಕೂಡ ಮಾಡಿದ್ದರು. ಹೀಗಾಗಿ, `ಮಾಣಿಕ್ಯನ ಮಗಳೀಗ ನಾಯಕಿ’ ಎಂದಾಗ ನೀವೆಲ್ಲರೂ ಅಚ್ಚರಿಗೊಳ್ಳೋದು ಸಹಜ. ಆದರೆ, ನಾವು ಹೇಳ್ತಿರೋದು ಸುದೀಪ್ ಅವ್ರ ರಿಯಲ್ ಪುತ್ರಿ ಸಾನ್ವಿ ಬಗ್ಗೆ ಅಲ್ಲ ರೀಲ್ ಪುತ್ರಿ ಜೆರುಶಾ ಕ್ರಿಸ್ಟೋಫರ್ ಕುರಿತು

ಯಾರಿದು ಜೆರುಶಾ ಕ್ರಿಸ್ಟೋಫರ್? ಬಹುಷಃ ಈ ಹೆಸರು ಕೇಳಿದಾಕ್ಷಣ ನೀವೆಲ್ಲರೂ ಮೊಬೈಲ್ ಕೈಗೆತ್ತಿಕೊಂಡು ಹೇ ಸಿರಿ `who is jerushachristopher’ ಅಂತ ಪ್ರಶ್ನೆ ಮಾಡೋದ್ರಲ್ಲಿ ಬ್ಯುಸಿ ಆಗಿರ್ತೀರಿ. ಆದರೆ, ಸಿರಿ ಆಕೆ ಮಾಡೆಲ್ ಮತ್ತು ಆ್ಯಕ್ಟ್ರೆಸ್ ಅಂತ ಹೇಳ್ತಾಳೆ ಬಿಟ್ಟರೆ `ಮಾಣಿಕ್ಯನ ಮಗಳೀಗ ನಾಯಕಿ’ ಹೆಡ್ಡಿಂಗ್‍ನ ಕಂಪ್ಲೀಟ್ ಕಥೆ ಹೇಳಲ್ಲ. ಹೀಗಾಗಿ, ನೀವೆಲ್ಲರೂ ಈ ಸ್ಟೋರಿನಾ ಕಂಪ್ಲೀಟ್ ಆಗಿ ಓದ್ಲೆಬೇಕು. ಹಾಗಾದ್ರೆ ಮಾತ್ರವೇ ಆಕೆ ಯಾರು? ಕಿಚ್ಚನ ಮಗಳು ಹೇಗಾದ್ಳು ಎಂಬ ಅಸಲಿ ವಿಚಾರ ತಿಳಿಯೋದು.

ಜೆರುಶಾ ಕ್ರಿಸ್ಟೋಫರ್ ಮೂಲತಃ ಬೆಂಗಳೂರಿನವರು. ಬಾಲ್ಯದಿಂದಲೂ ಬಣ್ಣದ ಜಗತ್ತನಲ್ಲಿ ಈಕೆ ಸಕ್ರಿಯವಾಗಿದ್ದಾಳೆ. ಇಂಟ್ರೆಸ್ಟಿಂಗ್ ಅಂದರೆ ಈಕೆ `ವೀರ ಮದಕರಿ’ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳಾಗಿ ಮಿಂಚಿದ್ದಳು. ಮುತ್ತತ್ತಿ ಸತ್ಯರಾಜ್‍ಗೆ ಕೈ ತುತ್ತು ಹಾಕಿದ್ದಳು. ಬಹುಷಃ ಅವತ್ತಿಗೆ ಆಕೆ ಐದಾರು ವರ್ಷದ ಪುಟ್ಟ ಬಾಲಕಿ ಅನ್ಸುತ್ತೆ. ಆದ್ರೀಗ ಬೆಳೆದು ದೊಡ್ಡವಳಾಗಿದ್ದಾಳೆ. ಎಷ್ಟರ ಮಟ್ಟಿಗೆ ಅಂದರೆ ಸ್ಯಾಂಡಲ್‍ವುಡ್ ಬಾದ್‍ಷಾಗೆ ನಾಯಕಿಯಾಗಿ ಬಗಲಲ್ಲಿ ನಿಲ್ಲುವಷ್ಟರ ಮಟ್ಟಿಗೆ. ಈಕೆಯನ್ನ ನೋಡಿದರೆ ನೀವೆಲ್ಲರೂ ಅಚ್ಚರಿಗೊಳ್ಳುತ್ತೀರಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ವರ್ಯಪಡುತ್ತೀರಿ.

ಇಲ್ಲಿವರೆಗೂ ಯಾರಿಗೂ ಕೂಡ ಈಕೆ `ವೀರ ಮದಕರಿ’ ಸಿನಿಮಾದಲ್ಲಿ ಕಿಚ್ಚನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು ಎಂಬ ವಿಚಾರ ಗೊತ್ತಿರಲಿಲ್ಲ. ಆದರೆ, ಅದೊಂದು ಸಂದರ್ಶನದಲ್ಲಿ ಮಾತನಾಡುತ್ತಾ ಖುದ್ದು ಜೆರುಶಾನೇ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾಳೆ. ನಾನು ಚೈಲ್ಡ್ ಆರ್ಟಿಸ್ಟ್ ಕೂಡ ಹೌದು. `ವೀರ ಮದಕರಿ’ ಚಿತ್ರದಲ್ಲಿ ಸುದೀಪ್ ಸರ್ ಮಗಳ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಎನ್ನುವ ವಿಚಾರವನ್ನ ಹೇಳಿಕೊಂಡಿದ್ದಾಳೆ. ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಇಂಟರ್ ವ್ಯೂ  ಝಲಕ್‍ನ ಹಂಚಿಕೊಂಡಿದ್ದು, ಕಿಚ್ಚನ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.

ಇತ್ತೀಚೆಗೆ ಜೆರುಶಾ ಲೂಸಿಯಾ ಪವನ್ ಕುಮಾರ್ ನಿರ್ದೇಶನದ `ಧೂಮಂ’ ಚಿತ್ರದಲ್ಲಿ ಮಿಂಚಿದ್ದರು.

ಜೆರುಶಾ ಅವರು 50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ‘ನಾನು ಏನು ಮಾಡುತ್ತೇನೋ ಅದಕ್ಕೆ ನನ್ನ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದಾರೆ. ಅವರು ನನ್ನ ಆಧಾರಸ್ಥಂಭ’ ಎಂದು ಜೆರುಶಾ ಸಂತೋಷ ಹೊರಹಾಕಿದ್ದಾರೆ. ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಕನಸು ಅವರಿಗೆ ಇದೆ. ಈ ವಿಡಿಯೋಗೆ ಬಗೆಬಗೆಯ ಕಮೆಂಟ್​ಗಳು ಬರುತ್ತಿವೆ. ‘ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕಾಣಿಸಿಕೊಂಡಿದ್ದರು. ಈಗ ಸುದೀಪ್​ಗೆ ನಾಯಕಿ ಆಗಿ ಅವರು ಕಾಣಿಸಿಕೊಳ್ಳಬಹುದು. ಅಷ್ಟು ಸುಂದರವಾಗಿ ಬೆಳೆದಿದ್ದಾರೆ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಅವರು ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲಿ ಎಂದು ಅನೇಕರು ಹಾರೈಸುತ್ತಿದ್ದಾರೆ. ಜೆರುಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 19 ಸಾವಿರ ಜನ ಹಿಂಬಾಲಕರಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
’ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗಾ’; ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ಲಾಂಚ್!

’ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು 'ವೇಗಾ'; ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ಲಾಂಚ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.