ಇಲ್ಲಿಯವರೆಗೆ ಬಾಲಿವುಡ್‌ನಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಮಿಂಚಿದ್ದ ನಟಿ ಕಿಯಾರಾ ಅಡ್ವಾಣಿ ಈಗ ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಹೀರೋಯಿನ್ ಆಗಿ ಮಿಂಚುತ್ತಿದ್ದ ಕಿಯಾರಾ ಇತ್ತೀಚೆಗಷ್ಟೇ ಸಿದ್ದಾರ್ಥ್ ಮಲ್ಹೊತ್ರ ಜೊತೆ ಹಸೆಮಣೆ ಏರಿದ್ದು, ಮದುವೆಯ ಬಳಿಕ ಕಿಯಾರಾ ಈಗ ವಿಲನ್ ಪಾತ್ರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.
ಬಾಲಿವುಡ್ ಮೂಲಗಳ ಪ್ರಕಾರ, ರಣ್ವೀರ್ ಸಿಂಗ್ ‘ಡಾನ್ 3’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಕಿಯಾರಾ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಿಂದೆ ‘ಡಾನ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಪ್ರಿಯಾಂಕಾ ಚೋಪ್ರಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಡಾನ್ 3’ ಚಿತ್ರದಲ್ಲಿ ಪಾತ್ರವರ್ಗ ಬದಲಾಗುತ್ತಿದ್ದು, ಶಾರುಖ್ ಖಾನ್ ಬದಲು ರಣವೀರ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಕಿಯಾರಾಗೆ ಪ್ರಮುಖ ವಿಲನ್ ಪಾತ್ರವನ್ನು ನೀಡಲಾಗಿದೆ ಎನ್ನಲಾಗುತ್ತಿದೆ.
ಇನ್ನು ‘ಡಾನ್’ ಸರಣಿಯ ಮುಂದುವರೆದ ಭಾಗ ಎಂದೇ ಹೇಳಲಾಗುತ್ತಿರುವ ‘ಡಾನ್ 3’ ಸಿನಿಮಾದಲ್ಲಿ ಅನೇಕ ಪಾತ್ರಗಳು ಬದಲಾವಣೆಯಾಗಲಿದೆ. ಪ್ರಿಯಾಂಕಾ ಚೋಪ್ರಾ ಪಾತ್ರಕ್ಕೆೆ ಮತ್ತೊಬ್ಬ ಖ್ಯಾತ ನಟಿಯ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ತಾರಾಗಣದ ಪಟ್ಟಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಸದ್ಯ ಕಿಯಾರಾ ಅಡ್ವಾಣಿ ವಿಲನ್ ಪಾತ್ರಕ್ಕೆೆ ಗ್ನೀನ್ ಸಿಗ್ನಲ್ ಕೊಟ್ಟಿದ್ದು, ತಮ್ಮ ಹೊಸ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆೆ ಇಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.