ಬಿಡುಗಡೆಗೂ ಮೊದಲೇ ಒಂದಷ್ಟು ನಿರೀಕ್ಷೆೆ ಮೂಡಿಸಿದ್ದ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯದ ‘ಓ ಮೈ ಗಾಡ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆೆ ಮುಗ್ಗರಿಸಿದೆ. ಇನ್ನು ದೇವರ ಹೆಸರಿನಲ್ಲಿ ತೆರೆಗೆ ಬಂದಿರುವ ‘ಓ ಮೈ ಗಾಡ್ 2’ ಸಿನಿಮಾದಲ್ಲಿ ಲೈಂಗಿಕತೆಯ ಬಗ್ಗೆೆ ಪಾಠ ಮಾಡಲಾಗಿದೆ. ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಲೈಂಗಿಕತೆಯ ಕುರಿತು ಹೇಳಿಸಲಾಗಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸಿದೆ ಎಂಬ ದೂರುಗಳು ಕೇಳಿಬಂದಿದ್ದು, ಸಿನಿಮಾ ಬಿಡುಗಡೆಯಾದ ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಗುಜರಾತ್ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಯನ್ನೂ ಮಾಡಲಾಗುತ್ತಿದೆ.
ಅನೇಕ ಹಿಂದೂಪರ ಸಂಘಟನೆಗಳು ‘ಓ ಮೈ ಗಾಡ್ 2’ ಸಿನಿಮಾವನ್ನು ಹಿಂಪಡೆಯಬೇಕು ಎಂದು ಸೆನ್ಸಾರ್ ಮಂಡಳಿಗೆ ಒತ್ತಾಯಿಸಿದರೆ, ಇನ್ನು ಕೆಲವೆಡೆ ಚಿತ್ರಮಂದಿರಗಳ ಮುಂದೆ ಹಾಕಲಾಗಿದ್ದ ಅಕ್ಷಯ್ ಕುಮಾರ್ ಅವರ ಕಟೌಟ್‌ಗಳನ್ನು ದಹಿಸಿ, ಪೋಸ್ಟರ್‌ಗಳನ್ನು ಹರಿದು ಹಾಕಲಾಗಿದೆ. ಅನೇಕ ಕಡೆಗಳಲ್ಲಿ ಪ್ರತಿಭಟನೆಯ ಹೆದರಿಕೆಯಿಂದ ‘ಓ ಮೈ ಗಾಡ್ 2’ ಸಿನಿಮಾ ಪ್ರದರ್ಶನಕ್ಕೆೆ ಪ್ರದರ್ಶಕರೂ ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಸಿನಿಮಾ ನೋಡಿದ ಪ್ರೇಕ್ಷಕರಿಂದಲೂ ‘ಓ ಮೈ ಗಾಡ್ 2’ ಸಿನಿಮಾಕ್ಕೆೆ ಹೇಳಿಕೊಳ್ಳುವ ಪ್ರತಿಕ್ರಿಯೆ ಸಿಗದಿದ್ದರಿಂದ, ಬಾಕ್ಸಾಫೀಸ್‌ನಲ್ಲೂ ಸಿನಿಮಾದ ಗಳಿಕೆ ಕುಸಿತ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾದ ಅತಿದೊಡ್ಡ ಸೋಲು ಇದಾಗಿದೆ ಎಂದು ಬಾಲಿವುಡ್ ನಲ್ಲಿ ವಿಶ್ಲೇಷಿಸಲಾಗುತ್ತಿದೆ.