ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

 ಕೈಯಲ್ಲಿ ‘ತಲ್ವಾರ್’ ಹಿಡಿದ ಧರ್ಮ; ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರಿ ಬಾಯ್!

Vishalakshi Pby Vishalakshi P
22/08/2023
in Majja Special
Reading Time: 1 min read
 ಕೈಯಲ್ಲಿ ‘ತಲ್ವಾರ್’ ಹಿಡಿದ ಧರ್ಮ; ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರಿ ಬಾಯ್!

ನಟ ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಅಭಿನಯದ ‘ತಲ್ವಾರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ‘ತಲ್ವಾರ್’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ ಕ್ಯಾಟ್ಬರಿ ಬಾಯ್ ಎಂದೇ ಕರೆಸಿಕೊಳ್ಳುವ ನಟ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.

ಈ ಹಿಂದೆ ‘ಮುಮ್ತಾಜ್’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ರಾಘವ ಮುರಳಿ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದಾಗಿದ್ದು, ‘ಮಜಾಭಾರತ’ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು.

‘ಟಚ್ ಸ್ಟೊನ್ ಪಿಕ್ಚರ್’ ಬ್ಯಾನರ್ ನಲ್ಲಿ ಸುರೇಶ್ ಬೈರಸಂದ್ರ ಬಂಡವಾಳ ಹಾಕಿ ಈ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾದ ನಾಲ್ಕು ಹಾಡುಗಳಿಗೆ ಕೆ. ಬಿ. ಪ್ರವೀಣ್ ಸಂಗೀತ ನೀಡಿದ್ದು, ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ‘ಯು/ಎ ‘ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ ರಿಲೀಸ್ ಆಗಲು ತಯಾರಿ ನಡೆಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅರ್ಧ ಶತಕ ಬಾರಿಸಿದ ‘ಅಗ್ರಸೇನಾ’; 50 ದಿನಗಳನ್ನು ಫೂರೈಸಿದ ಖುಷಿಯಲ್ಲಿ ಚಿತ್ರತಂಡ!

ಅರ್ಧ ಶತಕ ಬಾರಿಸಿದ ‘ಅಗ್ರಸೇನಾ’; 50 ದಿನಗಳನ್ನು ಫೂರೈಸಿದ ಖುಷಿಯಲ್ಲಿ ಚಿತ್ರತಂಡ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.