ಸುನಾಮಿ…ಸುಂಟರಗಾಳಿ…ಬಿರುಗಾಳಿ…ಎಲ್ಲಾ ಯಾವಾಗ್ಲೋ ಒಂದ್ಸಲಾನೇ ಬರೋದು. ಅದು ಬರುತ್ತೆ ಎನ್ನಬೇಕಾದರೆ ಒಂದು ಭಯ ಇರುತ್ತೆ. ಬಂದು ಹೋದ್ಮೇಲೆ ಅದರ ಹವಾ ಇರುತ್ತೆ. ಇದು ರಾಕಿಂಗ್ ಸ್ಟಾರ್ ಯಶ್ ಅವರ ಫೇಮಸ್ ಡೈಲಾಗ್. ನಾವು ಈ ಕ್ಷಣ ರಾಕಿ ಡೈಲಾಗ್‍ನ ನೆನಪು ಮಾಡಿಕೊಳ್ಳುವುದಕ್ಕೆ ಕಾರಣಯಿದೆ. ಸಮುದ್ರದ ಒಡಲಲ್ಲಿ ಸುನಾಮಿ ಏಳೋದಕ್ಕೂ ಮೊದಲೇ ಸೋಷಿಯಲ್ ಸಾಮ್ರಾಜ್ಯದಲ್ಲಿ ಅದೊಂದು ಸುದ್ದಿ ಸುನಾಮಿ ಎಬ್ಬಿಸಿದೆ. ಸಲಾರ್ ಅಖಾಡದಲ್ಲಿ ನರಾಚಿ ಹೀರೋಯಿಂದಾಗಿ ಬರೀ ಐದೇ ಐದು ನಿಮಿಷ ಏಳಲಿರುವ ತೂಫಾನ್ ಎಷ್ಟು ಭೀಕರ ಮತ್ತು ರಣಭಯಂಕರವಾಗಿರುತ್ತೆ ಅನ್ನೋದರ ಮುನ್ಸೂಚನೆ ಹೊರಡಿಸಿದೆ. `ಲಯನ್, ಚೀತಾ, ಟೈಗರ್, ಎಲಿಫೆಂಟ್ ಗಿಂತ ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಎಂಟ್ರಿಯಾಗುವ ಸೂಚನೆ ಸಿಕ್ಕಿದೆ. ಹೀಗಾಗಿಯೇ ಫ್ಯಾನ್ಸ್ ಫುಲ್ ಅಲರ್ಟ್ ಆಗಿದ್ದಾರೆ. ತೂಫಾನ್ ಹೊಡೆತಕ್ಕೆ ಸಿಲುಕೋರ್ಯಾರು ಅನ್ನೋದ್ರ ಜೊತೆಗೆ ಇಂಡಿಯನ್ ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಕಮಾಯಿ ಆಗ್ಬೋದು ಎಂತಲೂ ಪ್ರಿಡಿಕ್ಟ್ ಮಾಡಿದ್ದಾರೆ. ಆ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಸಲಾರ್ ಈ ಮೂರೇ ಮೂರು ಅಕ್ಷರದ ಸಿನಿಮಾಗೆ ವಿಶ್ವ ಸಿನಿದುನಿಯಾವೇ ಕಣ್ಣರಳಿಸಿದೆ. ಅಮರೇಂದ್ರ ಬಾಹುಬಲಿಯ ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ `ಕೆಜಿಎಫ್’ ಸೃಷ್ಟಿಕರ್ತ ಪ್ರಶಾಂತ್ ನೀಲ್ ಕೈಚಳಕದಲ್ಲಿ ಮೂಡಿಬಂದಿರುವ ಚಿತ್ರ ಎನ್ನುವ ಕಾರಣಕ್ಕೆ ಚಾತಕ ಪಕ್ಷಿಯಂತೆ ಕಾದು ಕುಳಿತಿದೆ. ಹೀಗೆ ಕಣ್ಣಿಗೆ ಎಣ್ಣೆಬಿಟ್ಕೊಂಡು ಕುಂತಿರೋ ವಿಶ್ವಸಿನಿಪ್ರೇಮಿಗಳು ದಡಕ್ಕನೇ ಎದ್ದುಕೂರುವ ಸುದ್ದಿಯೊಂದು ಹೊರಬಿದ್ದಿದೆ. ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಎಂಟ್ರಿಯಾಗೋದು ಪಕ್ಕಾ ಅಂತೇಳಲಾಗ್ತಿದೆ.
ಲಯನ್, ಚೀತಾ, ಟೈಗರ್, ಎಲಿಫೆಂಟ್.. ವೆರಿ ಡೇಂಜರಸ್. ಬಟ್, ನಾಟ್ ಇನ್ ಜುರಾಸಿಕ್ ಪಾರ್ಕ್. ಬಿಕಾಸ್ ಇನ್ ದಟ್ ಪಾರ್ಕ್.. ಇಷ್ಟನ್ನ ನೀವು `ಸಲಾರ್’ ಟೀಸರ್‍ನಲ್ಲಿ ಕೇಳಿಸಿಕೊಂಡಿದ್ದೀರಾ. ಹಾಗಾದ್ರೆ, ಜುರಾಸಿಕ್ ಪಾರ್ಕ್‍ನಲ್ಲಿ ಡೇಂಜರಸ್ ಪ್ರಾಣಿ ಯಾವುದಿರಬಹುದು ಎಂತಲೂ ತಲೆಕೆಡಿಸಿಕೊಂಡಿರ್ತೀರಿ. ಆದರೆ, ರೆಬೆಲ್ ಸ್ಟಾರ್ ಪ್ರಭಾಸ್ ಫ್ಯಾನ್ಸ್ ಆಲ್‍ರೆಡಿ ಪ್ರಿಡಿಕ್ಟ್ ಮಾಡಿದ್ದಾರೆ. ಭೂಮಿಯನ್ನಾಳಿದ ದೈತ್ಯ ಪ್ರಾಣಿ ಹಾಗೂ ಭಯಾನಕ ಜೀವಿ ಡೇಂಜರಸ್ ಡೈನೋಸಾರ್ ಸಲಾರ್‍ನಲ್ಲಿರೋದು ಕನ್ಫರ್ಮ್ ಎಂದಿದ್ದಾರೆ. `ಸಲಾರ್’ ಕ್ಯಾರೆಕ್ಟರ್‍ನ ಭೀಕರ-ರಣಭಯಂಕರ ಪ್ರಾಣಿಗೆ ಹೋಲಿಸಿರುವುದು ಪಕ್ಕಾ ಎನ್ನುತ್ತಿದ್ದಾರೆ. ಇಷ್ಟೇ ಅಲ್ಲ ನಮ್ಮ ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಎಂಟ್ರಿಕೊಡಲಿದ್ದು ಸಿನಿದುನಿಯಾದಲ್ಲಿ ಭಯಾನಕ ತೂಫಾನ್ ಏಳಲಿದೆ. ಆ ತೂಫಾನ್ ಹೊಡೆತಕ್ಕೆ ಹಲವರು ಕೊಚ್ಕೊಂಡು ಹೋಗ್ತಾರೆ. ಇಂಡಿಯನ್ ಬಾಕ್ಸ್ ಆಫೀಸ್ ಪೀಸ್ ಪೀಸ್ ಆಗಲಿದ್ದು, ಭಾರತೀಯ ಚಿತ್ರರಂಗ ಹಿಂದೆಂದೂ ಕಂಡು-ಕೇಳರಿಯದ ಕಲೆಕ್ಷನ್ ಆಗುತ್ತೆ. 200 ಕೋಟಿಯಲ್ಲಿ ನಿರ್ಮಾಣಗೊಂಡಿರುವ ಸಲಾರ್, 1500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯುತ್ತೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ.
ಹಾಗಾದ್ರೆ, ಫ್ಯಾನ್ಸ್ ಪ್ರಿಡಿಕ್ಷನ್ ನಿಜಾನಾ? ಈ ಪ್ರಶ್ನೆಗೆ ಯಸ್ ಎಂತಲೂ, ನೋ ಎಂತಲೂ ಹೇಳೋಕೆ ಸಾಧ್ಯ ಇಲ್ಲ. ಯಾಕಂದ್ರೆ, 100 ಕೋಟಿ ಬಂಡವಾಳ ಹೂಡಿರೋ ಕೆಲ ಸ್ಟಾರ್ ಸಿನಿಮಾಗಳು 10 ಕೋಟಿ ಬಾಚಿಕೊಳ್ಳೋಕೆ ತಿಣುಕಾಡಿವೆ. ಇನ್ನೂ ಕೆಲ ಸ್ಟಾರ್ ಸಿನಿಮಾಗಳು 10 ಕೋಟಿ 100 ಕೋಟಿ ಕ್ಲಬ್ ಸೇರಿವೆ. ಹೀಗಾಗಿ, ಪ್ರಿ ರಿಲೀಸ್ ಪ್ರಿಡಿಕ್ಷನ್ ರಾಂಗ್ ಆಗಬಹುದು. ಬಟ್, ಫ್ಯಾನ್ಸ್ ಊಹಿಸಿದಂತೆ, ಬಜಾರ್‍ನಲ್ಲಿ ಈಗಾಗಲೇ ಕೇಳಿಬಂದಿರುವಂತೆ `ಸಲಾರ್’ ಚಿತ್ರದಲ್ಲಿ ಯಶ್ ಅಭಿನಯಿಸಿರುವುದೇ ನಿಜ ಆದರೆ ಸಿಲ್ವರ್ ಸ್ಕ್ರೀನ್ ಶೇಕ್ ಆಗೋದು, ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಏಳೋದು ಗ್ಯಾರಂಟಿ. ಯಾಕಂದ್ರೆ, ವಲ್ರ್ಡ್ ವೈಡ್ ತುಂಬಾ ಹಂಗೈತಿ ಯಶ್ ಹವಾ. ಹೌದು, ಕೆಜಿಎಫ್ ಮೂಲಕ ವಿಶ್ವದ ಮೂಲೆ ಮೂಲೆ ತಲುಪಿರೋ ರಾಕಿಭಾಯ್ ಜನಪ್ರಿಯತೆ ಜೊತೆಗೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವ್ರೆಲ್ಲರೂ ಕೂಡ ಯಶ್ ಅಪ್‍ಕಮ್ಮಿಂಗ್ ಸಿನಿಮಾಗಾಗಿ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಒಂದ್ವೇಳೆ ಸಲಾರ್ ಸಿನಿಮಾದಲ್ಲಿ 5 ನಿಮಿಷ ಕಾಣಿಸಿಕೊಂಡ್ರೂ ಕೂಡ ಆಲ್ ಓವರ್ ಇಂಡಿಯಾ ಫ್ಯಾನ್ಸ್, ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡೋದು ಗ್ಯಾರಂಟಿ. ಗಲ್ಲಾಪೆಟ್ಟಿಗೆ ಕೋಟಿ ನೋಟು ಹೊತ್ಕೊಂಡು ಕುಣಿಯೋದು ಗ್ಯಾರಂಟಿ
ಅಂದ್ಹಾಗೇ, ಸಲಾರ್ ಸೆಟ್ಟೇರಿದಾಗಿನಿಂದಲೂ ಯಶ್ ಸ್ಪೆಷಲ್ ಅಪಿಯರೆನ್ಸ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ, ಇಲ್ಲಿತನಕ ಆ ಬಗ್ಗೆ ಯಾವುದೇ ಹಿಂಟ್‍ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದ್ದರಿಂದ ಕುತೂಹಲ ಹೆಚ್ಚಾಗ್ತಿದೆ. ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಇರಬಹುದಾ? ಇಲ್ಲವಾ ಎನ್ನುವ ಸಂಶಯವೇ ಸುನಾಮಿ ಎಬ್ಬಿಸುತ್ತಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಟಿನ್ನು ಆನಂದ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಗರುಡ ರಾಮ್, ಮಧುಗುರುಸ್ವಾಮಿ, ಪ್ರಮೋದ್ ಸೇರಿದಂತೆ ಇನ್ನೂ ಕೆಲ ಕನ್ನಡದ ಕಲಾವಿದರೂ ಇದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ರವಿಬಸ್ರೂರ್ ಹುಟ್ಟೂರು ಬಸ್ರೂರಿನಲ್ಲಿ ರೀರೆಕಾರ್ಡಿಂಗ್ ಕೆಲಸಗಳು ನಡೀತಿದೆ. ಸೆಪ್ಟೆಂಬರ್ 28ಕ್ಕೆ ಸಲಾರ್ ಮೊದಲ ಭಾಗ ಅಂದರೆ ಸಲಾರ್-ಸೀಜ್ ಫೈರ್ ಬಹುಭಾಷೆಯಲ್ಲಿ ಬಿಡುಗಡೆಯಾಗ್ತಿದೆ. ಕೆಜಿಎಫ್ ಕಾಂತಾರ ನಂತರ ಹೊಂಬಾಳೆ ನಿರ್ಮಾಣದ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ರೆಡಿಯಾಗಿದೆ. ಸೋ ಎಲ್ಲರೂ ದಿ ಮೋಸ್ಟ್ ವೈಲೆಂಟ್ ಮ್ಯಾನ್ `ಸಲಾರ್’ ಉರುಫ್ ಡೇಂಜರಸ್ ಡೈನೋಸಾರ್ ನ ಸ್ವಾಗತಿಸೋಕೆ ಸಜ್ಜಾಗಿ.