ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‍ನಲ್ಲೂ ಹೀರೋ ಅನ್ನೋದನ್ನ ಆಗಾಗ ಪ್ರೂ ಮಾಡುತ್ತಲೇ ಇರುತ್ತಾರೆ. ಸದ್ಯ, ಖುಷಿ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ ವಿಜಯ್, 100 ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿಯಂತೆ ಚೆಕ್ ನೀಡುವುದಾಗಿ ಘೋಷಿಸಿದ್ದಾರೆ. ಕೇವಲ ಹತ್ತು ದಿನಗೊಳಗಾಗಿ ದುಡ್ಡು ನಿಮ್ಮ ಕೈ ಸೇರಲಿದೆ ಎಂದು ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ನೆಚ್ಚಿನ ನಟನ ದಾನ-ಧರ್ಮದ ಗುಣ ಕಂಡು ಅಭಿಮಾನಿ ದೇವರುಗಳು ಉಘೇ ಉಘೇ ಎನ್ನುತ್ತಿದ್ದಾರೆ.
ನನ್ನ ಖುಷಿನಾ, ನನ್ನ ಸಕ್ಸಸ್‍ನ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಅದರಂತೇ ಈಗ `ಖುಷಿ’ ಸಿನಿಮಾದಿಂದ ಬಂದಿರುವ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನ ನಿಮ್ಮ ಜೊತೆ ಹಂಚಿಕೊಳ್ಳಲು ಬಯಸಿದ್ದೇನೆ. ಕಷ್ಟದಲ್ಲಿರುವ, ಹಣದ ಅವಶ್ಯಕತೆ ಇರುವ 100 ಕುಟುಂಬವನ್ನ ಗುರ್ತಿಸಿ ಅವರಿಗೆ ತಲಾ ಒಂದು ಲಕ್ಷ ರೂಪಾಯಿಯ ಚೆಕ್‍ನ ಹಸ್ತಾಂತರ ಮಾಡಲು ನಿರ್ಧರಿಸಿದ್ದೇನೆ. ಯಾರಿಗೆಲ್ಲ ಅಗತ್ಯವಿದೆಯೋ ಅವರು ನನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಆಗುವ ಫಾರ್ಮ್‍ನ ಭರ್ತಿ ಮಾಡಿ ಎಂದಿದ್ದಾರೆ ನಟ ವಿಜಯ್ ದೇವರಕೊಂಡ
Just IN: Vijay Deverakonda to give ₹1 lac each to 100 families in the next 10 days.
Total – ₹ 1 cr
||#Kushi | #VijayDeverakonda|| pic.twitter.com/mpvGfO2t8H
— Manobala Vijayabalan (@ManobalaV) September 4, 2023
ಅಂದ್ಹಾಗೇ, `ಖುಷಿ’ ಸಿನಿಮಾ ನಿರೀಕ್ಷೆ ಮೀರಿ ಸಂಪಾದನೆ ಮಾಡದಿದ್ರೂ ಕೂಡ ಒಂದು ಹಂತದ ಯಶಸ್ಸು ಚಿತ್ರತಂಡಕ್ಕೆ ಸಿಕ್ಕಿದೆ. ಲೈಗರ್ ಸಿನಿಮಾದಿಂದ ರೌಡಿಬಾಯ್ ಸೋಲಿಗೆ ಸುಳಿಗೆ ಸಿಲುಕಿದ್ದರು. ಪುಷ್ಪ ಸಿನಿಮಾ ನಂತರ ಮಾಡಿದ ಸಮಂತಾ ಸಿನಿಮಾಗಳು ಅಷ್ಟೇನು ಗೆಲುವು ಕಂಡಿರಲಿಲ್ಲ. ಆದ್ರೀಗ, ಇವರಿಬ್ಬರ ಕೆಮಿಸ್ಟ್ರಿ `ಖುಷಿ’ ಚಿತ್ರದಲ್ಲಿ ವರ್ಕೌಟ್ ಆಗಿದ್ದು ಸಕ್ಸಸ್ ಸಿಕ್ಕಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಜೊತೆಗೆ ಬಾಕ್ಸ್ ಆಫೀಸ್‍ನಲ್ಲೂ ಕಮಾಯಿ ಆಗ್ತಿದೆ. 50 ಕೋಟಿಯಲ್ಲಿ ನಿರ್ಮಾಣಗೊಂಡ `ಖುಷಿ’ ಈಗಾಗಲೇ ಗಲ್ಲಾಪೆಟ್ಟಿಗೆಯಿಂದ 70 ಕೋಟಿ ಲೂಟಿ ಮಾಡಿದೆ. ಈ ಚಿತ್ರಕ್ಕೆ ಶಿವನಿರ್ವಾಣ ನಿರ್ದೇಶನವಿದ್ದು, ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿತ್ತು. ತೆಲುಗು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.