ವಿಶ್ವ ಸಿನಿದುನಿಯಾ ಕಣ್ಣರಳಿಸಿ ಕಾಯ್ತಿರೋ ಕ್ಷಣಕ್ಕೆ ಗೌರಿ-ಗಣೇಶನ ಹಬ್ಬ ಸಾಕ್ಷಿಯಾಗುತ್ತಾ? ಈ ವಿಶೇಷ ದಿನದಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅನೌನ್ಸ್ ಆಗುತ್ತಾ? ಕಳೆದ ಒಂದೂವರೆ ವರ್ಷಗಳಿಂದ ಕಣ್ಣರಳಿಸಿ ಕಾಯುವಂತೆ ಮಾಡಿರೋ ರಾಕಿಭಾಯ್, ಕಲಾರಸಿರಕರ ಕುತೂಹಲಕ್ಕೆ ಬಿಗ್ ಬ್ರೇಕ್ ಹಾಕ್ತಾರಾ? ಹಬ್ಬದ ದಿನ ಯಶ್-19 ಅಪ್ಡೇಟ್ ಕೊಟ್ಟು ಆಲ್ ಓವರ್ ಇಂಡಿಯಾ ಸುನಾಮಿ ಎಬ್ಬಿಸ್ತಾರಾ? ಹೀಗೆ ಒಂದಿಷ್ಟು ಪ್ರಶ್ನೆಗಳನ್ನ ತಮಗೆ ತಾವೇ ಹಾಕಿಕೊಳ್ತಿರೋ ಫ್ಯಾನ್ಸ್ ಪ್ಲಸ್ ಆಡಿಯನ್ಸ್, ಸೆಪ್ಟೆಂಬರ್ 18ಕ್ಕೆ `ಯಶ್-19′ ಬಿಗ್ ಅನೌನ್ಸ್ ಮೆಂಟ್ ಫಿಕ್ಸು ಅಂತ ಮಾತನಾಡಿಕೊಳ್ತಿದ್ದಾರೆ.
ಈ ಹಬ್ಬ ಹರಿದಿನಗಳು ಬಂದಾಗ ಸ್ಟಾರ್ ನಟರುಗಳ ಅಭಿಮಾನಿಗಳು ಅವರ ನೆಚ್ಚಿನ ನಟರ ಸಿನಿಮಾಗಳ ಅಪ್ಡೇಟ್ ಎಕ್ಸ್ ಪೆಕ್ಟ್ ಮಾಡೋದು ಸಹಜ. ಅದರಂತೇ, ಗೌರಿ-ಗಣೇಶ ಹಬ್ಬಕ್ಕಾದರೂ ರಾಕಿಭಾಯ್ ಹೊಸ ಪಿಕ್ಚರ್ ಅನೌನ್ಸ್ ಮಾಡಬಹುದು ಅಂತ ನಿರೀಕ್ಷೆ ಇಟ್ಕೊಂಡು ಕಾಯ್ತಿದ್ದಾರೆ. ಅಭಿಮಾನಿ ದೇವರುಗಳ ಕಾಯುವಿಕೆಗೆ ಫಲ ಸಿಗುತ್ತಾ? ಕೆಜಿಎಫ್ ಕಿಂಗ್ ಕಡೆಯಿಂದ ಬಿಗ್ ಅಪ್ಡೇಟ್ ಸಿಗುತ್ತಾ? ಎಂಬ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರವಿಲ್ಲ. ಯಾಕಂದ್ರೆ, ಸೆಲ್ಫ್ ಮೇಡ್ ಷೆಹಜಾದನ ಗುರಿ ಮತ್ತು ದಾರಿ ಬಗ್ಗೆ ಪ್ರಿಡಿಕ್ಟ್ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಹಿಂದೊಮ್ಮೆ ಯಶ್ ಗುರಿ ಬಗ್ಗೆ ಮಾತನಾಡುತ್ತಾ ತಮ್ಮದೊಂದು ವ್ಯಾಖ್ಯಾನವನ್ನ ಜಗತ್ತಿನ ಮುಂದೆ ಹರವಿಟ್ಟಿದ್ದರು. ಗುರಿ ಬಗ್ಗೆ ಕೇಳಿದ್ರೇನೇ ಜನ ಬೆಚ್ಚಿಬೀಳಬೇಕು ಎಂದಿದ್ದರು ಜೊತೆಗೆ ತಮ್ಮ ರೆಸ್ಟ್ ಆಫ್ ವಲ್ರ್ಡ್ ಕನಸಿನ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದರು. ಅದನ್ನು `ಯಶ್-19′ ಸಿನಿಮಾ ಮೂಲಕವೇ ಸಾಧಿಸಿ ತೋರಿಸುವ ಪಣತೊಟ್ಟಿರೋ ರಾಕಿಭಾಯ್, ಕಳೆದ 16 ತಿಂಗಳಿಂದ ಅದಕ್ಕಾಗಿ ಪಟ್ಟಿರೋ ಶ್ರಮ ಇದೆಯಲ್ಲ ಅದು ಫಸ್ಟ್ ಲುಕ್ ಮೂಲಕವೇ ಅನಾವರಣಗೊಳ್ಳಲಿದೆ. ಅದನ್ನು ನೋಡುವ ಕ್ಷಣಕ್ಕಾಗಿ ನೀವೆಲ್ಲರೂ ಇನ್ನಷ್ಟು ಕಾತುರರಾಗಬೇಕಿದೆ. ಜಗದಗಲದ ನಿರೀಕ್ಷೆಯನ್ನು ಫುಲ್ ಫಿಲ್ ಮಾಡ್ತೀನಿ ಅಂತ ಪ್ರತಿಜ್ಷೆ ಮಾಡಿರುವ ಸೆಲ್ಫ್ ಮೇಡ್ ಷೆಹಜಾದನಿಗೆ ನೀವೆಲ್ಲರೂ ಸಾಥ್ ನೀಡಬೇಕಿದೆ.
ಹಾಗಾದ್ರೆ ಇನ್ನೆಷ್ಟು ದಿನ ಕಾಯಬೇಕು? ಇನ್ನೊಂದು ವಾರ? ಹದಿನೈದು ದಿನ? ತಿಂಗಳು? ಅಥವಾ ಎರಡು ತಿಂಗಳಾದರೂ ಆಗಬಹುದು? ಬಟ್ ಈ ಭಾರಿ ನೀವಷ್ಟೆ ಅಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದೆಮುಟ್ಟಿ ಹೇಳಿಕೊಳ್ಳುವಂತಹ ಸಿನಿಮಾಗೆ ಅಣ್ತಮ್ಮ ಬಣ್ಣ ಹಚ್ಚೋದು ಮಾತ್ರ ಖರ್ರೆ. ಅಷ್ಟಕ್ಕೂ, ಆ ಸಿನಿಮಾ ಕೆಜಿಎಫ್-3 ಆಗಿರಲಿದೆಯಾ ಅಥವಾ ಕೆಜಿಎಫ್3 ಗಿಂತ ದೊಡ್ಡ ಸ್ಕೇಲ್ ನಲ್ಲಿ ನಿರ್ಮಾಣಗೊಳ್ಳಲಿದೆಯಾ? ಈ ಕುತೂಹಲದ ಪ್ರಶ್ನೆಯ ಜೊತೆಗೆ ನ್ಯಾಷನಲ್ ಸ್ಟಾರ್ ಯಶ್ಗೆ ಆ್ಯಕ್ಷನ್ ಕಟ್ ಹೇಳುವವರ್ಯಾರು ಎಂಬುದು ಮಿಲಿಯನ್ ಡಾಲರ್ ಸ್ವರೂಪ ಪಡೆದಿದೆ. ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಮಾಸ್ಟರ್ ಪೀಸ್ ಪಿಕ್ಚರ್ಗೆ ಹಗಲು-ರಾತ್ರಿ ಶ್ರಮವಹಿಸ್ತಿದ್ದಾರೆನ್ನುವ ಸುದ್ದಿಯಿದೆ. `ಯಶ್-19′ ಡೈರೆಕ್ಟ್ ಮಾಡೋದು ಹಂಡ್ರೆಂಡ್ ಪರ್ಸೆಂಟ್ ಇವ್ರೇ ಅಂತಲೂ ಹೇಳಲಾಗ್ತಿದೆ.
ಆದರೆ, ಯಶ್-19 ಡೈರೆಕ್ಷನ್ಗೆ ಸಂಬಂಧಪಟ್ಟಂತೆ ಹಲವು ನಿರ್ದೇಶಕರ ಹೆಸರು ಕೇಳಿಬಂದಿತ್ತು. ಕಾಶ್ಮೋರ ಸಿನಿಮಾ ಖ್ಯಾತಿಯ ಗೋಕುಲ್, ಇರುಂಬುತಿರೈ ಸಿನಿಮಾದ ನಿರ್ದೇಶಕ ಮಿತ್ರನ್, ದಂಗಲ್ಡೈರೆಕ್ಟರ್ ನಿತೀಶ್ ತಿವಾರಿ ಸೇರಿದಂತೆ ಹಲವರು ಸುದ್ದಿಯಾಗಿದ್ದರು. ಈ ಮಧ್ಯೆ ಇವರ್ಯಾರು ಅಲ್ಲ ಪ್ರಶಾಂತ್ ನೀಲ್ ಅವರೇ ಡೈರೆಕ್ಟ್ ಮಾಡ್ತಾರೆ. ನೆಕ್ಸ್ಟ್ ಪಿಕ್ಚರ್ ಕೆಜಿಎಫ್-3ನೇ ಆಗಿರಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಒಂದ್ವೇಳೆ ಈ ಸುದ್ದಿ ನಿಜ ಆದರೆ ಇಡೀ ಜಗತ್ತಿಗೆ ಜಗತ್ತೇ ಕಣ್ಣುಜ್ಜಿಕೊಂಡು ದಢಕ್ಕನೇ ಎದ್ದುಕೂರುತ್ತೆ. ಪ್ಯಾನ್ ಇಂಡಿಯಾದ ಸಿನಿಮಾ ಮಂದಿ ಜೊತೆಗೆ ಪ್ಯಾನ್ ವಲ್ರ್ಡ್ನವರು ಅಲರ್ಟ್ ಆಗ್ತಾರೆ. ಯಾಕಂದ್ರೆ, ಹಂಗೈತಿ ಕೆಜಿಎಫ್ ಸೀರೀಸ್ ಹವಾ. ನೋಡೋಣ ಇಷ್ಟು ದಿನಾನೇ ಕಾದಿದ್ದೇವೆ. ಇನ್ನೊಂದಿಷ್ಟು ದಿನ ತಳ್ಳೋಣ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ಶ್ರೀಲಂಕಾ, ದುಬೈ, ಮಲೇಷಿಯಾ ಅಂತ ಅಣ್ತಮ್ಮ ಸುತ್ತಿದ್ದು, ಹಾಲಿಡೇ ಎಂಜಾಯ್ ಮಾಡಲಿಕ್ಕಾ ಅಥವಾ ಕೆಜಿಎಫ್ ಪಾರ್ಟ್3 ಗೆ ಲೊಕೇಷನ್ ಫೈನಲ್ ಮಾಡಲಿಕ್ಕಾ ಅನ್ನೋದನ್ನ ತಿಳಿಯುತ್ತೆ.