ಸೌತ್ ಸಿನಿಮಾ ಇಂಡಸ್ಟ್ರಿಯ ಸಖತ್ ಬ್ಯೂಟಿ, ನಮ್ಮೆಲ್ಲರ ಸ್ವೀಟಿ ಸಪ್ತಪದಿ ತುಳಿಯೋದು ಯಾವಾಗ? ಆಲ್ ರೆಡಿ 40ಕ್ರಾಸ್ ಆಯ್ತು ಹಸೆಮಣೆ ಏರುವ ಬಗ್ಗೆ ಸುದ್ದಿನೇ ಇಲ್ಲ. ಬ್ಯಾಚುಲರ್ ಲೈಫ್‍ಗೆ ಗುಡ್ ಬೈ ಹೇಳಿ, ದಾಂಪತ್ಯ ಜೀವನಕ್ಕೆ ಅಡಿಯಿಡುವ ಬಗ್ಗೆ ದೇವಸೇನಾ ಮಾತೇ ಆಡ್ತಿಲ್ಲ. ಅಷ್ಟಕ್ಕೂ, ಏನಾಗ್ತಿದೆ ಅರುಂಧತಿ ಬಾಳಲ್ಲಿ? ಭಾಗಮತಿ ಸೌಭಾಗ್ಯವತಿಯಾಗೋದು ಯಾವಾಗ? ಜೇಜಮ್ಮನಿಗೆ ಕಂಕಣ ಬಲದ ಸಮಸ್ಯೆ ಏನಾದ್ರೂ ಇದೆಯಾ? ಹೀಗೆ ಅನೇಕ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಅವರ ಅಭಿಮಾನಿಗಳು ಆಕಾಶ ನೋಡುತ್ತಿದ್ದರು. ಕೊನೆಗೂ, ಅವರೆಲ್ಲರ ಪ್ರಶ್ನೆಗಳಿಗೆ ಸ್ವೀಟಿ ಉತ್ತರ ಕೊಟ್ಟಿದ್ದಾರೆ. ಮದುವೆಯಾಗುವ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
“ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ” ಎಂದಿದ್ದಾರೆ. ಇದು ನಟಿ ಅನುಷ್ಕಾಶೆಟ್ಟಿಯ ಮಾತು. ಮತ್ತು ಮದುವೆ ಬಗ್ಗೆ ಆಕೆಗಿರುವ ಅಭಿಪ್ರಾಯ. ಅಂದ್ಹಾಗೇ, ಅವರು ಹೇಳ್ತಿರುವುದು ಸರಿಯಾಗಿಯೇ ಇದೆ. ಯಾರದ್ದೋ ಒತ್ತಡಕ್ಕೆ ಒಳಗಾಗಿ ಮದುವೆಯಾದರೆ ಅದು ಮೂರು ದಿನದ ಸಂತೆಯಾಗುವ ಸಾಧ್ಯತೆಗಳೇ ಹೆಚ್ಚು. ಇದನ್ನರಿತುಕೊಂಡಿರುವ ಸ್ವೀಟಿ, ಕಾಲ ಕೂಡಿಬರಲಿ, ಕಂಕಣಭಾಗ್ಯ ಒದಗಿಬರಲಿ ಎಂದು ಕಾಯುತ್ತಿದ್ದಾರೆ. ಒಮ್ಮೆ ಅಶ್ವಿನಿ ದೇವತೆಗಳು ಅಸ್ತು ಎಂದರೆ ಮುಗೀತು ದೇವಸೇನಾ ಮದುವಣಗಿತ್ತಿಯಾಗಿ ಮೆರವಣಿಗೆ ಹೊರಡ್ತಾರೆ. ಆ ಕ್ಷಣ ಬರುವವರೆಗೂ ಆ ಮಹಾನಟಿಯ ಜೊತೆಗೆ ನಾವು-ನೀವೆಲ್ಲರೂ ಕಾಯ್ಲೆಬೇಕು.
ವಿಶೇಷ ಅಂದರೆ ಮದುವೆ ಹೆಣ್ಣಾಗಿ ದಿಬ್ಬಣ ಹೊರಡುವ ಮೊದಲು, ಮತ್ತೊಮ್ಮೆ ನಾಯಕಿಯಾಗಿ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೋಗ್ತಿದ್ದಾರೆ. ಹೌದು, ನಾಳೆ ಸ್ವೀಟಿ ನಟನೆಯ `ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರ ವಲ್ಡ್‍ವೈಡ್ ರಿಲೀಸ್ ಆಗ್ತಿದೆ. ಕಳೆದ ಮೂರು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವಿದ್ದ ಕರಾವಳಿ ಬೆಡಗಿ, `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಮೂಲಕ ಬಿಗ್‍ಸ್ಕ್ರೀನ್‍ಗೆ ಕಂಬ್ಯಾಕ್ ಮಾಡ್ತಿದ್ದಾರೆ. ನಟ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿದ್ದು, ಇಬ್ಬರ ಕೆಮಿಸ್ಟ್ರಿ ಭರ್ಜರಿಯಾಗಿ ವರ್ಕೌಟ್ ಆಗುವ ಸೂಚನೆ ಸಿಕ್ಕಿದೆ.
ಎನಿವೇ 3 ವರ್ಷದ ನಂತರ ಸಿಲ್ವರ್ ಸ್ಕ್ರೀನ್‍ಗೆ ಬರ್ತಿರೋ ಸ್ವೀಟಿನಾ ಸ್ವಾಗತಿಸೋಣ. ಟೀಸರ್ ನಿಂದಲೇ ಹಲ್ ಚಲ್ ಎಬ್ಬಿಸಿರೋ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ನಾ ಗ್ರ್ಯಾಂಡ್ ಆಗಿ ವೆಲ್‍ಕಮ್ ಮಾಡೋಣ. ಅಚ್ಚರಿ ಅಂದರೆ ಕಿಂಗ್ ಖಾನ್ ಜವಾನ್ ಎದುರು ತಮ್ಮ ಚಿತ್ರ ರಿಲೀಸ್ ಮಾಡ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರ ಇದಾಗಿದ್ದು, ಮಹೇಶ್ ಬಾಬು ಡೈರೆಕ್ಷನ್ ಮಾಡಿದ್ದಾರೆ. ಯು.ವಿ ಕ್ರಿಯೇಷನ್ ಸಂಸ್ಥೆ ಈ ಸಿನಿಮಾ ನಿರ್ಮಿಸಿದ್ದು, ಸ್ಟ್ಯಾಂಡಪ್ ಕಾಮಿಡಿಯನ್ ಪಾತ್ರದಲ್ಲಿ ನವೀನ್ ಪೋಲಿಶೆಟ್ಟಿ, ಮಾಸ್ಟರ್ ಚೆಫ್ ಆಗಿ ಅನುಷ್ಕಾ ಶೆಟ್ಟಿ ಮಿಂಚಿದ್ದಾರೆ. ಜೀವನದ ಬಗ್ಗೆ ಡಿಫರೆಂಟ್ ಆಫ್ ಒಪಿನಿಯನ್ ಇರುವ ಎರಡು ಪಾತ್ರಗಳನ್ನು ನಿರ್ದೇಶಕ ಮಹೇಶ್‍ಬಾಬು ಅದ್ಭುತವಾಗಿ ತೆರೆಮೇಲೆ ತೋರಿಸಿದ್ದಾರೆ. ಹ್ಯೂಮರ್ ಜೊತೆ ಎಮೋಷನ್ ನ ಬ್ಲೆಂಡ್ ಮಾಡಿ ಸಿನಿಮಾ ತಯ್ಯಾರಿಸಿದ್ದಾರೆ. ತುಳಸಿ, ಜಯಸುಧಾ, ಮುರುಳಿ ಶರ್ಮಾ, ಅಭಿನವ್ ಗೌತಮ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲೆಯಾಳಂಗೆ ಡಬ್ ಆಗಿ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿದೆ.