ನಟ ಗಣೇಶ್ ನಾಯಕರಾಗಿರುವ ‘ಬಾನದಾರಿಯಲಿ’ ಚಿತ್ರ ಬಿಡುಗಡೆಯ ಹಂತಕ್ಕೆೆ ಬಂದಿದೆ. ಕಳೆದ ಕೆಲ ದಿನಗಳಿಂದ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದ ‘ಬಾನದಾರಿಯಲಿ’ ಚಿತ್ರತಂಡ, ಸಿನಿಮಾವನ್ನು ಇದೇ ಸೆಪ್ಟೆೆಂಬರ್ 15ಕ್ಕೆೆ ತೆರೆಗೆ ತರುವುದಾಗಿ ಘೋಷಿಸಿಕೊಂಡಿತ್ತು.
ಆದರೆ ಇದೀಗ ‘ಬಾನದಾರಿಯಲಿ’ ಸಿನಿಮಾದ ಬಿಡುಗಡೆಯ ದಿನಾಂಕದಲ್ಲಿ ಕೊಂಚ ಬದಲಾವಣೆಯಾಗಿದೆ. ಆರಂಭದಲ್ಲಿ ಚಿತ್ರತಂಡ ತಿಳಿಸಿದ್ದಂತೆ, ಸೆಪ್ಟೆೆಂಬರ್ 15ರ ಬದಲು ಸೆಪ್ಟೆೆಂಬರ್ 28ರಂದು ‘ಬಾನದಾರಿಯಲಿ’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಈ ಮೊದಲು ಸೆಪ್ಟೆೆಂಬರ್ 28ರಂದು ನಟ ಪ್ರಭಾಸ್ ಅಭಿನಯದ ಮತ್ತು ಪ್ರಶಾಂತ್ ನೀಲ್ ಅಭಿನಯದ, ‘ಹೊಂಬಾಳೆ ಫಿಲಂಸ್’ ನಿರ್ಮಾಣದ ಬಹುನಿರೀಕ್ಷಿತ ‘ಸಲಾರ್’ ಸಿನಿಮಾ ತೆರೆಗೆ ಬರುವುದಾಗಿ ಹೇಳಿಕೊಂಡಿತ್ತು. ಆದರೆ ಸದ್ಯ ‘ಸಲಾರ್’ ಸಿನಿಮಾದ ಕೆಲ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಇನ್ನೂ ಕಾಲಾವಕಾಶ ಬೇಕಾಗಿರುವುದರಿಂದ, ಅಂದುಕೊಂಡಂತೆ ಸೆ. 28ಕ್ಕೆೆ ‘ಸಲಾರ್’ ತೆರೆ ಕಾಣುತ್ತಿಲ್ಲ. ಹೀಗಾಗಿ ಸೆಪ್ಟೆೆಂಬರ್ 15ರ ಬದಲು ಹೊಸ ಡೇಟ್ ಹುಡುಕಿಕೊಂಡಿರುವ ‘ಬಾನದಾರಿಯಲಿ’ ಚಿತ್ರತಂಡ, ಸೆಪ್ಟೆೆಂಬರ್ 28ರಂದು ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ.