ಗುರುವಾರ, ಜುಲೈ 10, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಸಲಾರ್’ ಹೆಸರಲ್ಲಿ ಸ್ಪೆಷಲ್ ಪೂಜೆ ಸಲ್ಲಿಸಿ ಪೂರ್ವಜರ ಬಳಿ ಬೇಡಿದ್ದೇನು ಪ್ರಶಾಂತ್ ನೀಲ್?

Vishalakshi Pby Vishalakshi P
08/09/2023
in Majja Special
Reading Time: 1 min read
`ಸಲಾರ್’ ಹೆಸರಲ್ಲಿ ಸ್ಪೆಷಲ್ ಪೂಜೆ ಸಲ್ಲಿಸಿ ಪೂರ್ವಜರ ಬಳಿ ಬೇಡಿದ್ದೇನು ಪ್ರಶಾಂತ್ ನೀಲ್?

ಸಲಾರ್ ಸಿನಿಮಾದ ಸಾರಥಿ ಸ್ಪೆಷಲ್ ಪೂಜೆ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ಸಲ್ಲಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಕುಟುಂಬಸ್ಥರ ನಾಮಧೇಮದ ಜೊತೆಗೆ ಸಲಾರ್ ಹೆಸರಲಿನಲ್ಲೂ ಅರ್ಚನೆ ಮಾಡಿಸಿದ್ದಾರೆ. ಅದೇ ದಿನ ತಮ್ಮ ಪೂರ್ವಿಕರ ಸಮಾಧಿಗೂ ಭೇಟಿಕೊಟ್ಟಿದ್ದಾರೆ. ಪುಣ್ಯಭೂಮಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಬೇಡಿದ್ದಾರೆ. ಇದೆಲ್ಲಾ ಆ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಆಸ್ತಿಕರು. ದೈವಶಕ್ತಿಯನ್ನು ನಂಬುತ್ತಾರೆ. ಪೂಜೆ-ಪುನಸ್ಕಾರ, ಆಚಾರ-ವಿಚಾರಗಳನ್ನು ಪಾಲಿಸ್ತಾರೆ. ಶುಭಕಾರ್ಯಕ್ಕಾಗಿ, ವಿಘ್ನನಿವಾರಣೆಗಾಗಿ ದೇವರ ಮೊರೆ ಹೋಗ್ತಾರೆ. ಹಾಗೆಯೇ ಪೂರ್ವಜರ ಆಶೀರ್ವಾದವನ್ನೂ ಬೇಡುವ ಸಂಪ್ರದಾಯವನ್ನು ರೂಡಿಸಿಕೊಂಡು ಬಂದಿದ್ದಾರೆ. ಇವರ ನಿರ್ದೇಶನದ ಸಲಾರ್ ಗಾಗಿ ಇಡೀ ವಿಶ್ವಸಿನಿದುನಿಯಾವೇ ಕಾದು ಕುಳಿತಿದೆ. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ಅಡೆತಡೆಗಳು ಎದುರಾಗುತ್ತಲೇ ಇವೆ. ಬಹುಷಃ ಈ ಕಾರಣಕ್ಕಾಗಿಯೇ ನೀಲ್ ದೇವರ ಮೊರೆ ಹೋದರಾ ಅಥವಾ ತನ್ನ ಕನಸಿನ ಮಗದೊಂದು ಕೂಸಾದ `ಸಲಾರ್’ಗೆ ಮುಂದ್ಯಾವ ವಿಘ್ನಗಳು ಎದುರಾಗದಿರಲೆಂಬ ಕಾರಣಕ್ಕೆ ದೈವಸನ್ನಿಧಿಗೆ ತೆರಳಿದ್ರಾ ಗೊತ್ತಿಲ್ಲ. ಕೃಷ್ಣ ಜನ್ಮಾಷ್ಟಮಿಯಂದು ಕುಟುಂಬ ಸಮೇತ ಸತ್ಯಸಾಯಿ ಜಿಲ್ಲೆಯ ನೀಲಕಂಠಪುರಕ್ಕೆ ತೆರಳಿದ್ದರು. ಅಲ್ಲಿನ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದವರ ಹೆಸರಿನೊಟ್ಟಿಗೆ ಸಲಾರ್ ಹೆಸರನ್ನೂ ಸೇರಿಸಿ ಅರ್ಚನೆ ಮಾಡಿಸಿದ್ದಾರೆ. ಅಲ್ಲಿಂದ ತಮ್ಮ ಪೂರ್ವಜರ ಪುಣ್ಯಭೂಮಿಗೂ ಭೇಟಿಕೊಟ್ಟು ಅಲ್ಲೂ ಪೂಜೆ ಮಾಡಿ ಕೆಲಕಾಲ ಕುಳಿತಿದ್ದಾರೆ. ಹಿರಿಯರನ್ನ ಸದಾ ಗೌರವಿಸುವ ನೀಲ್ ಎರಡು ಕೈ ಮುಗಿದು `ಸಲಾರ್’ ಗೆ ಒಳ್ಳೆದಾಗುವಂತೆ ಕೋರಿಕೊಂಡಿರುವುದರಲ್ಲಿ ಅನುಮಾನವಿಲ್ಲ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದ ಯಶಸ್ಸಿಗಾಗಿ ದೈವಶಕ್ತಿ ಹಾಗೂ ಪೂರ್ವಜರ ಆಶೀರ್ವಾದ ಬೇಡಿದ ನೀಲ್ ಸಾಹೇಬ್ರ ಮೇಲೆ ಪ್ರಭಾಸ್ ಫ್ಯಾನ್ಸ್ ಗೆ ಗೌರವ ಹೆಚ್ಚಾಗಿದೆ.

#PrashanthNeel is telling His Film #Salaar name with his Family members names to "pujari". He visited his Father's Grave in Neelakantapuram, Satyasai District,He'll be participating in the Krishnashtami celebrations along with villagers#prabhas #SalaarTrailer #salaaronsep28th pic.twitter.com/PWOk7dRKvK

— Rebel Cameron (@CrazyError9) September 7, 2023

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಲಾರ್-ಸೀಜ್‍ಫೈರ್ ಇದೇ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂದುಕೊಂಡ ಟೈಮ್‍ಗೆ ಮುಗಿಯದೇ ಇರುವುದರಿಂದ ಮತ್ತೆ ಸಲಾರ್ ರಿಲೀಸ್ ಡೇಟ್‍ನ ಮುಂದೂಡುವಂತಹ ಪರಿಸ್ಥಿತಿ ಎದುರಾಯ್ತು. ಇದರಿಂದ ಅಭಿಮಾನಿಗಳು ಸೇರಿದಂತೆ ಚಿತ್ರಪ್ರೇಮಿಗಳಿಗೂ ಕೊಂಚ ನಿರಾಸೆಯಾಗಿರುವುದಂತೂ ಸತ್ಯ. ಆದರೆ, ಲೇಟಾದ್ರೂ ಲೇಟೆಸ್ಟ್ ಆಗಿ ಬರುತ್ತೆಂಬ ಕಾರಣಕ್ಕೆ ಪ್ರಭಾಸ್ ಫ್ಯಾನ್ಸ್ ಹಾದಿಯಾಗಿ ಆಲ್ ಓವರ್ ಇಂಡಿಯಾ ಪ್ರೇಕ್ಷಕರು ಕಾಯುತ್ತಿದ್ದಾರೆ. `ಸಲಾರ್’ ಮೇಲೆ ನೂರೆಂಟು ನಿರೀಕ್ಷೆಗಳನ್ನಿಟ್ಟುಕೊಂಡು ಲೆಕ್ಕಚ್ಚಾರ ಹಾಕಿಕೊಳ್ತಿರುವ ಫ್ಯಾನ್ಸ್, ಟ್ರೇಲರ್ ಆದ್ರೂ ರಿಲೀಸ್ ಮಾಡಿ ಅಂತ ರಿಕ್ವೆಸ್ಟ್ ಲೆಟರ್ ಹಾಕ್ತಿದ್ದಾರೆ. ಆದರೆ, `ಸಲಾರ್’ ಸಾರಥಿ ಪ್ಲಸ್ ಅಧಿಪತಿ ಟ್ರೇಲರ್‍ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಮಿಸ್ ಆದರೂ ದಸರಾ ಹಬ್ಬಕ್ಕಂತೂ ಮಿಸ್ ಮಾಡದೇ ಟ್ರೇಲರ್ ತೋರಿಸಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೇಗಿರಬಹುದು ಟ್ರೇಲರ್ ಎನ್ನುವ ಕುತೂಹಲದ ಜೊತೆಗೆ ಸಲಾರ್ ಜೊತೆ ಮಾನ್‍ಸ್ಟರ್ ಎಂಟ್ರಿ ಪಕ್ಕಾನಾ? ಹೀಗೊಂದು ಕೌತುಕವೂ ಕಲಾಭಿಮಾನಿಗಳನ್ನೂ ಕಾಡ್ತಿದೆ.

ಹೌದು, ಇತ್ತೀಚೆಗೆ `ಸಲಾರ್’ ಅಖಾಡದಲ್ಲಿ 5 ನಿಮಿಷ ತೂಫಾನ್ ಹೇಳಲಿದೆ, ಡೈನೋಸಾರ್ (ಪ್ರಭಾಸ್) ಜೊತೆಗೆ ಮಾನ್‍ಸ್ಟರ್(ಯಶ್) ಎಂಟ್ರಿಯಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಇದಕ್ಕೆ ಫಿಲ್ಮ್‍ಟೀಮ್ ಸ್ಪಷ್ಟನೆ ಕೊಡದಿದ್ರೂ ಕೂಡ ಸೋಷಿಯಲ್ ಸಾಮ್ರಾಜ್ಯದಲ್ಲಿ ಈ ಸುದ್ದಿ ಸುನಾಮಿ ಎಬ್ಬಿಸಿತ್ತು. ಹೀಗಾಗಿ, ಡೈನೋಸಾರ್ ಹಾಗೂ ಮಾನ್‍ಸ್ಟರ್ ಮೇಲಿನ ನಿರೀಕ್ಷೆ ಸಪ್ತಸಾಗರ ದಾಟಿದೆ. ಅಂದ್ಹಾಗೇ, ಸಲಾರ್ ಸೆಟ್ಟೇರಿದಾಗಿನಿಂದಲೂ ಯಶ್ ಸ್ಪೆಷಲ್ ಅಪಿಯರೆನ್ಸ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ, ಇಲ್ಲಿತನಕ ಆ ಬಗ್ಗೆ ಯಾವುದೇ ಹಿಂಟ್ ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದ್ದರಿಂದ ಕುತೂಹಲ ಹೆಚ್ಚಾಗ್ತಿದೆ. ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಇರಬಹುದಾ? ಇಲ್ಲವಾ ಎನ್ನುವ ಸಂಶಯವೇ ಸುನಾಮಿ ಎಬ್ಬಿಸುತ್ತಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಟಿನ್ನು ಆನಂದ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಗರುಡ ರಾಮ್, ಮಧುಗುರುಸ್ವಾಮಿ, ಪ್ರಮೋದ್ ಸೇರಿದಂತೆ ಇನ್ನೂ ಕೆಲ ಕನ್ನಡದ ಕಲಾವಿದರೂ ಇದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ರವಿಬಸ್ರೂರ್ ಹುಟ್ಟೂರು ಬಸ್ರೂರಿನಲ್ಲಿ ರೀರೆಕಾರ್ಡಿಂಗ್ ಕೆಲಸಗಳು ನಡೀತಿದೆ. ಈ ಮಧ್ಯೆ ಫ್ರೀ ಮಾಡ್ಕೊಂಡು ನೀಲ್ ಸಾಹೇಬ್ರು ಡಿವೈನ್ ಪವರ್ ಗಾಗಿ ಓಡಾಡ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಪಿಕ್ಚರ್ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಅಂದ್ಹಾಗೇ,ಸಲಾರ್-ಸೀಜ್ ಫೈರ್ ಬಹುಭಾಷೆಯಲ್ಲಿ ತಯ್ಯಾರಾಗಿದೆ. ಕೆಜಿಎಫ್ ಕಾಂತಾರ ನಂತರ ಹೊಂಬಾಳೆ ನಿರ್ಮಾಣದ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗುತ್ತಿದೆ. ಇನ್ಯಾವುದೇ ಅಡೆತಡೆ ಇಲ್ಲದೇ ಹೋದರೆ ದೀಪಾವಳಿಗೆ ಗ್ರ್ಯಾಂಡ್ ಎಂಟ್ರಿಕೊಡಲಿದೆ. ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವಲ್ರ್ಡ್ ಕಬ್ಜ ಮಾಡುವ ಶಕ್ತಿಯಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 200 ರಿಂದ 250 ಕೋಟಿಯಲ್ಲಿ ಕ್ಯಾಪ್ಚರ್ ಆಗಿರೋ ಸಲಾರ್ ಹೇಗಿರಬಹುದು ಜಸ್ಟ್ ವೇಯ್ಟ್ ಅಂಡ್ ವಾಚ್.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಹಿಂದಿಯಲ್ಲಿ ‘ರೈಡರ್’ 100 ಮಿಲಿಯನ್ ವೀಕ್ಷಣೆ; ನಿಖಿಲ್ ಕುಮಾರ್ ಸಿನಿಮಾಕ್ಕೆ ಹಿಂದಿಯಲ್ಲೂ ಮನ್ನಣೆ

ಹಿಂದಿಯಲ್ಲಿ ‘ರೈಡರ್’ 100 ಮಿಲಿಯನ್ ವೀಕ್ಷಣೆ; ನಿಖಿಲ್ ಕುಮಾರ್ ಸಿನಿಮಾಕ್ಕೆ ಹಿಂದಿಯಲ್ಲೂ ಮನ್ನಣೆ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.