ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೆನ್ಸೇಷನ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಕೈ ಜೋಡಿಸುವ ಬಗ್ಗೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರುವ ಬಗ್ಗೆ ಸಾಕಷ್ಟು ದಿನಗಳಿಂದ ಸುದ್ದಿಯಾಗುತ್ತಲೇ ಇತ್ತು. ಕೊನೆಗೂ ಈ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಇವರಿಬ್ಬರ ಜುಗಲ್‍ಬಂಧಿಯ ಸಿನಿಮಾವನ್ನು ಸನ್‍ಪಿಕ್ಚರ್ಸ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಲೈವರ್-171 ಚಿತ್ರದ ಕುರಿತು ಅಪ್‍ಡೇಟ್ ನೀಡಿದೆ

ತಲೈವಾ ಹಾಗೂ ಲೋಕೇಶ್ ಕನಗರಾಜ್ ಒಂದಾಗಿ ಸಿನಿಮಾ ಮಾಡಬೇಕು ಎಂಬುದು ಅವರಿಬ್ಬರ ಅಭಿಮಾನಿಗಳ ಬಯಕೆ ಮಾತ್ರವಲ್ಲ ಸ್ವತಃ ಲೋಕೇಶ್ ಕೂಡ ಪಡೆಯಪ್ಪನಿಗೆ ಆ್ಯಕ್ಷನ್ ಕಟ್ ಹೇಳುವ ಮಹತ್ತರ ಕನಸು ಕಂಡಿದ್ದರು. ಆ ಕನಸು ನನಸಾಗಿದೆ. ಕೈಥಿ, ಮಾಸ್ಟರ್, ವಿಕ್ರಮ್ ನಂತಹ ಬ್ಲಾಕ್‍ಬಸ್ಟರ್ ಹಿಟ್ ಚಿತ್ರ ಕೊಟ್ಟಿರುವ ಲೋಕೇಶ್‍ಗೆ ಶಿವಾಜಿ ಕಾಲ್‍ಶೀಟ್ ಸಿಕ್ಕಿದೆ. ಕಾರ್ತಿ, ದಳಪತಿ ವಿಜಯ್, ಕಮಲ್ ಹಾಸನ್, ಸೂರ್ಯ, ಫಹಾದ್ ಫಾಸಿಲ್ ರನ್ನು ನಯಾ ಅವತಾರದಲ್ಲಿ ತೋರಿಸಿ ಸಂಚಲನ ಮೂಡಿಸಿದ ಲೋಕೇಶ್ ಕನಗರಾಜ್, ಭಾಷಾನಾ ಅದೆಷ್ಟು ವಿಭಿನ್ನವಾಗಿ ತೋರಿಸಬಹುದು ಎನ್ನುವ ಲೆಕ್ಕಚ್ಚಾರ ಅಭಿಮಾನಿ ವಲಯದಲ್ಲಿ ಈಗಾಗಲೇ ಶುರುವಾಗಿದೆ. ಈ ಡೆಡ್ಲಿ ಕಾಂಬಿನೇಷನ್ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್‍ಪಿಕ್ಚರ್ಸ್ ಬಂಡವಾಳ ಹೂಡ್ತಿದೆ. ಜೈಲರ್ ಮ್ಯಾಸೀವ್ ಹಿಟ್ ಆದ ಬೆನ್ನಲ್ಲೇ ಟೈಗರ್ ಮುತ್ತುವೇಲ್ ಪಾಂಡಿಯನ್ ಜೊತೆ ಕೈಜೋಡಿಸಿರುವ ಸನ್‍ಪಿಕ್ಚರ್ಸ್, ತಲೈವಾ ನಟನೆಯ 171 ಸಿನಿಮಾವನ್ನ ಅಧಿಕೃತವಾಗಿ ಘೋಷಣೆ ಮಾಡಿದೆ.
ಸದ್ಯ ತಲೈವಾ 170 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ಡೈರೆಕ್ಷನ್ ಮಾಡ್ತಿದ್ದು, ಲೈಕಾ ಸಂಸ್ಥೆ ಬಂಡವಾಳ ಹೂಡಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಫಹಾದ್ ಫಾಸಿಲ್ ಸೇರಿದಂತೆ ಸೌತ್-ನಾರ್ತ್ ಸೂಪರ್ ಸ್ಟಾರ್ ಗಳ ಸಮಾಗಮ ಆಗ್ತಿದೆ. ಇದರ ಜೊತೆಗೆ 171 ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ತಲೈವಾ, ಮಾಸ್ಟರ್ ಡೈರೆಕ್ಟರ್ ಗೆ ಕಾಲ್‍ಶೀಟ್ ನೀಡಿದ್ದಾರೆ. ಇತ್ತ ಲೋಕೇಶ್ ಕನಗರಾಜ್ `ಲಿಯೋ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಲಿಯೋ ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ. ಮಾಸ್ಟರ್ ನಂತರ ಈ ಕಾಂಬೋ ರಿಪೀಟ್ ಆಗಿದ್ದು `ಲಿಯೋ’ ಗಾಗಿ ಕಲಾಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಅಚ್ಚರಿ ಅಂದರೆ ಈ ಆ್ಯಕ್ಷನ್-ಥ್ರಿಲ್ಲರ್ ಲಿಯೋ ಈಗಾಗಲೇ ಅಮೇರಿಕಾದಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರ ಬಿಡುಗಡೆಗೆ 42 ದಿನ ಬಾಕಿಯಿರುವಾಗಲೇ ಯುಕೆನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾದ ಇಂಡಿಯಾದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇವಲ 24 ಗಂಟೆಯಲ್ಲಿ 10000 ಟಿಕೆಟ್ ಸೋಲ್ಡ್ ಆಗಿದ್ದು, ಯುನೈಟೆಡ್ ಕಿಂಗ್‍ಡಮ್ ಬಾಕ್ಸ್ ಆಫೀಸ್‍ನಲ್ಲಿ `ಲಿಯೋ’ ಚಿತ್ರದಿಂದ ಹಿಸ್ಟ್ರಿ ಕ್ರಿಯೇಟ್ ಆಗಿದೆ. ಇದೇ ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ತುಂಬೆಲ್ಲಾ ಲಿಯೋ ಆಟ ಶುರುವಾಗಲಿದೆ.

ವಿಶೇಷ ಅಂದರೆ ನಿರ್ದೇಶಕ ಲೋಕೇಶ್ ಕನಗರಾಜ್, `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಕಾನ್ಸೆಪ್ಟ್ ಮೂಲಕ ಸಿನಿದುನಿಯಾದಲ್ಲಿ ತಮ್ಮದೊಂದು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಕೈಥಿ ಕಥೆ ಮತ್ತು ಪಾತ್ರಗಳನ್ನು ವಿಕ್ರಮ್ ಸಿನಿಮಾದಲ್ಲಿ ತಂದ ಲೋಕೇಶ್ ಈಗ `ಲಿಯೋ’ ಸಿನಿಮಾದಲ್ಲೂ ಕಂಟಿನ್ಯೂ ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ಏಜೆಂಟ್ ಅಮರ್ ಫಹಾದ್, ರೊಲೆಕ್ಸ್ ಸೂರ್ಯ ಸ್ಪೆಷಲ್ ಎಂಟ್ರಿ ಆಗಿರೋದ್ರಿಂದ ಸಿನಿಮಾಪ್ರೇಮಿಗಳು `ಲಿಯೋ’ ನೋಡಲು ಕುತೂಹಲಭರಿತರಾಗಿದ್ದಾರೆ. ಕಥೆ ಚಿತ್ರಕಥೆ ರಚಿಸಿ ಲೋಕೇಶ್ ಈ ಸಿನಿಮಾ ಡೈರೆಕ್ಟ್ ಮಾಡಿದ್ದು, ಎಸ್ಎಸ್ ಲಲಿತ್ ಕು ಮಾರ್, ಜಗದೀಶ್ ಪಳನಿಸ್ವಾಮಿಯವರು ಬಂಡವಾಳ ಹೂಡಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಅನಿರುದ್ ರವಿಚಂದರ್ ಸಂಗೀತವಿದೆ. ಈಗಾಗಲೇ ರಿಲೀಸ್ ಆಗಿರುವ `ನಾ ರೆಡಿದಾ ವರವಾ’ ಹಾಗೂ ಬ್ಲಡಿ ಸ್ವೀಟ್ ಹಾಡುಗಳು ಕಲಾಭಿಮಾನಿಗಳಿಗೆ ಕಿಕ್ಕೊಟ್ಟಿವೆ. ಲಿಯೋಗೆ ಹೆವಿ ಕ್ರೇಜ್ ಕ್ರಿಯೇಟ್ ಆಗಿದ್ದು, ಮಾಸ್ಟರ್ ಕಾಂಬೋ ಕ್ಲಿಕ್ ಆಗುತ್ತಾ? ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ನಿಂದ ಕೋಟಿ ಕೋಟಿ ಲೂಟಿ ಮಾಡಿ ಕಿಂಗ್ ಖಾನ್ ಜವಾನ್ನ ಹಿಂದಿಕ್ಕುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್





