ಶನಿವಾರ, ಜುಲೈ 18, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಸಲಾರ್’ ಡಿಜಿಟಲ್ ರೈಟ್ಸ್ ಸೋಲ್ಡ್ ಔಟ್ ! ದುಬಾರಿ ಬೆಲೆಗೆ ನೆಟ್ ಫ್ಲಿಕ್ಸ್ ಗೆ ಮಾರಾಟ?

Vishalakshi Pby Vishalakshi P
13/09/2023
in Majja Special
Reading Time: 1 min read
`ಸಲಾರ್’ ಡಿಜಿಟಲ್ ರೈಟ್ಸ್  ಸೋಲ್ಡ್ ಔಟ್ ! ದುಬಾರಿ ಬೆಲೆಗೆ ನೆಟ್ ಫ್ಲಿಕ್ಸ್ ಗೆ ಮಾರಾಟ?

`ಸಲಾರ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡಿದ ಬೆನ್ನಲ್ಲೇ ಡಿಜಿಟಲ್ ರೈಟ್ಸ್ ಬಗ್ಗೆ ಬಿಗ್‍ಬ್ರೇಕಿಂಗ್ ನ್ಯೂಸ್‍ವೊಂದು ಹೊರಬಿದ್ದಿದೆ. ಹೈವೋಲ್ಟೇಜ್ ಆ್ಯಕ್ಷನ್ `ಸಲಾರ್’ನ ಥಿಯಾರಿಟಕಲ್ ರೈಟ್ಸ್ ಸೋಲ್ಡ್ ಔಟ್ ಆಗಿದ್ದು, ನೆಟ್‍ಫ್ಲಿಕ್ಸ್ ಸಂಸ್ಥೆ ದುಬಾರಿ ಮೊತ್ತ ಕೊಟ್ಟು ಓಟಿಟಿ ಹಕ್ಕುಗಳನ್ನ ಖರೀದಿಸಿದೆ ಎನ್ನಲಾಗಿದೆ.

ಈಗಾಗಲೇ ಆಡಿಯೋ ರೈಟ್ಸ್, ಸ್ಯಾಟ್‍ಲೈಟ್ ರೈಟ್ಸ್ ಗಳು ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ವು. ಡಿಜಿಟಲ್ ರೈಟ್ಸ್ ಗಾಗಿ ಓಟಿಟಿ ಫ್ಲಾಟ್‍ಫಾರ್ಮ್‍ಗಳ ನಡುವೆ ಪೈಪೋಟಿ ನಡೆಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಕೊನೆಗೆ, ಭಾರೀ ಮೊತ್ತ ಭರಿಸಿ ನೆಟ್‍ಫ್ಲಿಕ್ಸ್ ಸಂಸ್ಥೆ `ಸಲಾರ್’ ರೈಟ್ಸ್‍ನ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಗ್ಗೆ ಬಡಾ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಬಗ್ಗೆ ಸಿನಿಮಾ ಟೀಮ್ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವ್ರು ಮಾಡಿರುವ ಟ್ವೀಟ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಅಂದ್ಹಾಗೇ, ಸಲಾರ್ ಚಿತ್ರಕ್ಕಾಗಿ ಬರೀ ಸೌತ್ ಮಾತ್ರವಲ್ಲ ವಿಶ್ವ ಸಿನಿದುನಿಯಾವೇ ಎದುರುನೋಡ್ತಿದೆ. ಬಾಹುಬಲಿ ಹೀರೋ ಚಿತ್ರ ಎನ್ನುವುದಕ್ಕಿಂತ ಕೆಜಿಎಫ್ ಕ್ಯಾಪ್ಟನ್ ಕೆತ್ತಿರೋ ಹೊಸ ಶಿಲೆ ಎನ್ನುವ ಕಾರಣಕ್ಕೆ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಲಾರ್-ಸೀಜ್‍ಫೈರ್ ಇದೇ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂದುಕೊಂಡ ಟೈಮ್‍ಗೆ ಮುಗಿಯದೇ ಇರುವುದರಿಂದ ಮತ್ತೆ ಸಲಾರ್ ರಿಲೀಸ್ ಡೇಟ್‍ನ ಮುಂದೂಡಲಾಗಿದೆ. ಇಲ್ಲಿತನಕ ಅಂತೆಕಂತೆ ಸುದ್ದಿಗಳು ಓಡಾಡ್ತಿದ್ವು. ಫೈನಲೀ, ಇವತ್ತು ಸಲಾರ್ ನಿರ್ಮಾಣ ಸಂಸ್ಥೆ ಹೊಂಬಾಳೆ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸಿನಿಮಾ ಬಿಡುಗಡೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಹೊಂಬಾಳೆ ಫಿಲ್ಮಸ್, ‘ನಾವು ಅತ್ಯುತ್ತಮವಾದ ಸಿನಿಮಾವನ್ನು ಕೊಡಲು ಸಿದ್ಧವಾಗುತ್ತಿದ್ದೇವೆ. ನಾನಾ ಕಾರಣಗಳಿಂದಾಗಿ ಸೆ.28ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಬರೆದುಕೊಂಡಿದ್ದಾರೆ.ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಹೇಳಿದೆ.

ಕೆಜಿಎಫ್, ಕಾಂತಾರ ಸಿನಿಮಾ ಮೂಲಕ ಜಗತ್ತಿನ ಪ್ರೇಕ್ಷಕರನ್ನು ಕನ್ನಡ ಸಿನಿಮಾ ರಂಗದತ್ತ ಸೆಳೆದ ಕೀರ್ತಿ ಹೊಂಬಾಳೆ ಫಿಲ್ಮ್ಸ್ ಗೆ ಸಲ್ಲುತ್ತದೆ. ಈ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರಗಳಿಗೆ ಒಂದು ಮಾರುಕಟ್ಟೆ ಸೃಷ್ಟಿಯಾಗಿದೆ. ಚಿತ್ರಗಳನ್ನು ಕಾದು ನೋಡಲಾಗುತ್ತದೆ. ಪ್ರೇಕ್ಷಕರಿಗೆ ಯಾವುದೇ ನಿರಾಸೆ ಮಾಡದೇ ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನು ನೀಡುವುದಕ್ಕಾಗಿಯೇ ಸಲಾರ್ ಬಿಡುಗಡೆ ಮುಂದೂಡಲಾಗಿದೆ.ಸಲಾರ್ ಸಿನಿಮಾವನ್ನು ನೋಡಲು ಪ್ರಭಾಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈ ತಿಂಗಳು ಸಿನಿಮಾ ರಿಲೀಸ್ ಆಗದೇ ಇರುವುದು ಅವರಿಗೆ ಕಂಡಿತಾ ನಿರಾಸೆ ಆಗಿರುತ್ತದೆ. ಆದರೆ, ನಿರಾಸೆಯನ್ನು ಹೋಗಲಾಡಿಸುವಂತಹ ಚಿತ್ರವನ್ನು ಕೊಡುವ ಪ್ರಾಮೀಸ್ ಹೊಂಬಾಳೆ ಸಂಸ್ಥೆಯದ್ದು.

ಇನ್ನೂ ಇತ್ತೀಚೆಗೆ `ಸಲಾರ್’ ಅಖಾಡದಲ್ಲಿ 5 ನಿಮಿಷ ತೂಫಾನ್ ಹೇಳಲಿದೆ, ಡೈನೋಸಾರ್ (ಪ್ರಭಾಸ್) ಜೊತೆಗೆ ಮಾನ್‍ಸ್ಟರ್(ಯಶ್) ಎಂಟ್ರಿಯಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಇದಕ್ಕೆ ಫಿಲ್ಮ್‍ ಟೀಮ್ ಸ್ಪಷ್ಟನೆ ಕೊಡದಿದ್ರೂ ಕೂಡ ಸೋಷಿಯಲ್ ಸಾಮ್ರಾಜ್ಯದಲ್ಲಿ ಈ ಸುದ್ದಿ ಸುನಾಮಿ ಎಬ್ಬಿಸಿತ್ತು. ಹೀಗಾಗಿ, ಡೈನೋಸಾರ್ ಹಾಗೂ ಮಾನ್‍ಸ್ಟರ್ ಮೇಲಿನ ನಿರೀಕ್ಷೆ ಸಪ್ತಸಾಗರ ದಾಟಿದೆ. ಅಂದ್ಹಾಗೇ, ಸಲಾರ್ ಸೆಟ್ಟೇರಿದಾಗಿನಿಂದಲೂ ಯಶ್ ಸ್ಪೆಷಲ್ ಅಪಿಯರೆನ್ಸ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ, ಇಲ್ಲಿತನಕ ಆ ಬಗ್ಗೆ ಯಾವುದೇ ಹಿಂಟ್ ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲವಾದ್ದರಿಂದ ಕುತೂಹಲ ಹೆಚ್ಚಾಗ್ತಿದೆ. ಡೇಂಜರಸ್ ಡೈನೋಸಾರ್ ಜೊತೆ ಮಾನ್‍ಸ್ಟರ್ ಇರಬಹುದಾ? ಇಲ್ಲವಾ ಎನ್ನುವ ಸಂಶಯವೇ ಸುನಾಮಿ ಎಬ್ಬಿಸುತ್ತಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಟಿನ್ನು ಆನಂದ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಗರುಡ ರಾಮ್, ಮಧುಗುರುಸ್ವಾಮಿ, ಪ್ರಮೋದ್ ಸೇರಿದಂತೆ ಇನ್ನೂ ಕೆಲ ಕನ್ನಡದ ಕಲಾವಿದರೂ ಇದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ರವಿಬಸ್ರೂರ್ ಹುಟ್ಟೂರು ಬಸ್ರೂರಿನಲ್ಲಿ ರೀರೆಕಾರ್ಡಿಂಗ್ ಕೆಲಸಗಳು ನಡೀತಿದೆ. ಈ ಮಧ್ಯೆ ಫ್ರೀ ಮಾಡ್ಕೊಂಡು ನೀಲ್ ಸಾಹೇಬ್ರು ಡಿವೈನ್ ಪವರ್ ಗಾಗಿ ಓಡಾಡ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಪಿಕ್ಚರ್ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಅಂದ್ಹಾಗೇ,ಸಲಾರ್-ಸೀಜ್ ಫೈರ್ ಬಹುಭಾಷೆಯಲ್ಲಿ ತಯ್ಯಾರಾಗಿದೆ. ಕೆಜಿಎಫ್ ಕಾಂತಾರ ನಂತರ ಹೊಂಬಾಳೆ ನಿರ್ಮಾಣದ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗುತ್ತಿದೆ. ಇನ್ಯಾವುದೇ ಅಡೆತಡೆ ಇಲ್ಲದೇ ಹೋದರೆ ದೀಪಾವಳಿಗೆ ಗ್ರ್ಯಾಂಡ್ ಎಂಟ್ರಿಕೊಡಲಿದೆ. ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವಲ್ರ್ಡ್ ಕಬ್ಜ ಮಾಡುವ ಶಕ್ತಿಯಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 200 ರಿಂದ 250 ಕೋಟಿಯಲ್ಲಿ ಕ್ಯಾಪ್ಚರ್ ಆಗಿರೋ ಸಲಾರ್ ಹೇಗಿರಬಹುದು ಜಸ್ಟ್ ವೇಯ್ಟ್ ಅಂಡ್ ವಾಚ್.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
 ಕನ್ನಡದಲ್ಲೊಂದು ‘ಕಾಗೆ’ ಕುರಿತಾದ ಚಿತ್ರ! ವಿಭಿನ್ನ ಕಥೆಯ ‘ರಾವೆನ್’ ಆರಂಭ

 ಕನ್ನಡದಲ್ಲೊಂದು ‘ಕಾಗೆ’ ಕುರಿತಾದ ಚಿತ್ರ! ವಿಭಿನ್ನ ಕಥೆಯ ‘ರಾವೆನ್’ ಆರಂಭ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.