`ಜೈಲರ್’ ಹುಕುಂ ಹಾಡಿಗೆ ಕೋಳಿ ಹುಂಜ ಸ್ಪೂರ್ತಿನಾ? ಈಗೊಂದು ಸುದ್ದಿ ಕೇಳಿದಾಕ್ಷಣ ನಿಮಗೂ ಸರ್ಪೈಸ್ ಆಗಿರುತ್ತೆ. ಅದ್ಹೇಗೆ? ಏನು? ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಹುಟ್ಟಿರುತ್ತೆ. ಆ ನಿಮ್ಮ ಕೌತುಕ ತಣಿಸಬೇಕು ಅಂದರೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಕೋಳಿ ಹುಂಜದ ವಿಡಿಯೋವನ್ನ ನಿಮ್ಮ ಮುಂದೆ ಪ್ರಸ್ತುಪಡಿಸಲೇಬೇಕು.
ಜೈಲರ್ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೀತು. ಆದರೆ, ಜೈಲರ್ ಹವಾ ಇಂದಿಗೂ ಕಡಿಮೆಯಾಗಿಲ್ಲ. ಅದ್ರಲ್ಲೂ, ಹುಕುಂ.. ಟೈಗರ್ ಕಾ ಹುಕುಂ ಡೈಲಾಗ್ ಪ್ಲಸ್ ಸಾಂಗ್ ಕ್ರೇಜ್ ಇದೆಯಲ್ಲ ಅದು ನೆಕ್ಸ್ಟ್ ಲೆವೆಲ್. ಇವತ್ತು `ಜೈಲರ್’ ಬಾಕ್ಸ್ ಆಫೀಸ್ನಲ್ಲಿ 600 ಕೋಟಿಗೂ ಮೀರಿ ದುಡ್ಡು ಮಾಡೋದಕ್ಕೆ ಈ ಹಾಡಿನ ಪಾತ್ರ ಬಹಳಷ್ಟಿದೆ. ಇಂತಹ ಸಾಂಗ್ನ ಕಟ್ಟಿಕೊಡುವುದಕ್ಕೆ ಸಂಗೀತ ನಿರ್ದೇಶಕ ಅನಿರುದ್ ಅದೆಷ್ಟು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದಾರೋ, ಇದೊಂದು ಹಾಡಿಗಾಗಿ ಅದೆಷ್ಟು ಶ್ರಮಪಟ್ಟು ದುಡಿದಿದ್ದಾರೋ ಗೊತ್ತಿಲ್ಲ. ಆದರೆ, ಅವರ ಶ್ರಮಕ್ಕೆ ಒಳ್ಳೆ ಪ್ರತಿಫಲ ಸಿಗ್ತು. ಹುಕುಂ.. ಟೈಗರ್ ಕಾ ಹುಕುಂ ಡೈಲಾಗ್ ಜೊತೆಗೆ ಸಾಂಗ್ ಕೂಡ ಕ್ಲಿಕ್ ಆಯ್ತು. ತಲೈವಾ ಕಂಬ್ಯಾಕ್ ಗೆ ಪ್ಲಸ್ ಆಯ್ತು. ಸೇಮ್ ಟೈಮ್ ಅನಿರುದ್ದ್ಗೆ ಬೇಡಿಕೆನೂ ಹೆಚ್ಚಾಯಿತು.
https://www.youtube.com/watch?v=qemFLxbGcKM
ಎಲ್ಲಾ ಓಕೆ, ಹುಕುಂ ಹಾಡಿಗೆ ಕೋಳಿ ಹುಂಜ ಸ್ಪೂರ್ತಿ ಅಂದ್ರಲ್ಲವಾ? ಅದೇನ್ ಕಥೆ ಹೇಳಿ ಅನ್ನೋರಿಗೆ ಈ ಕಥೆ ಹೇಳಲೇಬೇಕು. ಯಸ್, ಜೈಲರ್ ಸಿನಿಮಾದ ಹುಕುಂ ಸಾಂಗ್ ಎಷ್ಟು ಫೇವರೆಟ್ ಆಗಿದೆ ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವರಂತೂ ಹುಕುಂ ಮ್ಯೂಸಿಕ್ ಹುಟ್ಟಿರೋದೇ ಕೋಳಿ ಸೌಂಡ್ನಿಂದ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕೋಳಿ ಕೂಗೋ ಸೌಂಡ್ಗೂ ಜೈಲರ್ಸಿನಿಮಾದ ಮ್ಯೂಸಿಕ್ ಗೂ ಸಾಮ್ಯತೆ ಇರೋದು ಅಚ್ಚರಿಯಾಗಿದೆ. ಈ ವೈರಲ್ ವಿಡಿಯೋಗಳನ್ನು ನೋಡಿದ ಅಭಿಮಾನಿಗಳಂತೂ ಸಖತ್ ಎಂಜಾಯ್ ಮಾಡ್ತಿರೋದಂತೂ ಸುಳ್ಳಲ್ಲ.





