ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಮಕ್ಕಳ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳ ನಡುವೆಯೇ ಇಲ್ಲೊಂದು ಮಕ್ಕಳ ಸಿನಿಮಾ ತಯಾರಾಗುತ್ತಿದೆ. ಅಂದಹಾಗೆೆ, ಆ ಸಿನಿಮಾದ ಹೆಸರು ‘ಕರಡಿಗುಡ್ಡ’ ‘ಬಿಳಿಗಿರಿ ಫಿಲಂಸ್’ ಹಾಗೂ ‘ಸಿದ್ಧಿ ಕಾರಕ ಫಿಲಂಸ್’ ಸಂಸ್ಥೆ ಅಡಿಯಲ್ಲಿ ನಿರ್ಮಾಪಕರಾದ ವೀಣಾ ವೆಂಕಟೇಶ್. ವಿ , ಅಂಬಿಕಾ ಚಂದ್ರಪ್ ನಿರ್ಮಾಣ ಮಾಡುತ್ತಿರುವ ‘ಕರಡಿಗುಡ್ಡ’ ಸಿನಿಮಾದ ಶೀರ್ಷಿಕೆ ಮತ್ತು ಕಾನ್ಸೆಪ್ಟ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಪಂಚಮುಖಿ ವಿನಾಯಕ ದೇವಸ್ಥಾನದಲ್ಲಿ ಡಾ. ವಿ ನಾಗೇಂದ್ರ ಪ್ರಸಾದ್ ‘ಕರಡಿಗುಡ್ಡ’ ಸಿನಿಮಾದ ಶೀರ್ಷಿಕೆ ಮತ್ತು ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈಗಾಗಲೇ ‘ಹವಾಲಾ’ ಹಾಗೂ ‘ಯಾದ್ಭಾವಂ ತದ್ಭವತಿ’ ಚಿತ್ರ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿರುವ ಅಮಿತ್ ರಾವ್ ಮೂರನೇ ನಿರ್ದೇಶನದ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಜಯಂತ್ ಚಂದ್ರಪ್ಪ ಕಥೆ ಇದ್ದು, ಮಕ್ಕಳ ಸಾಹಸಮಯ ಚಿತ್ರ ಇದಾಗಿರುತ್ತದೆ. ಹೊಸ ಪ್ರತಿಭೆಗಳಾದ ವಿಶೇಷ ವೆಂಕಟೇಶ್, ವೆಂಕಟೇಶ್ ಗೌಡ, ನಾಗೇಂದ್ರ ಅರಸ್, ಭವಾನಿ ಪ್ರಕಾಶ್, ಮಂಜುನಾಥ ದೈವಜ್ಞ ಮತ್ತು ಅನೇಕ ಪುಟಾಣಿ ಮಕ್ಕಳು ಕಲಾವಿದರಾಗಿ ‘ಕರಡಿಗುಡ್ಡ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲಕಾಡಿನ ಸುತ್ತಮುತ್ತಲಿನ ತಾಣಗಳಲ್ಲಿ ‘ಕರಡಿಗುಡ್ಡ’ ಚಿತ್ರೀಕರಣ ನಡೆಯಲಿದೆ.





