ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಲಿಯೋ’ ಬುಕ್ಕಿಂಗ್‍ಗೆ ಮುಗಿಬಿದ್ದ ಅಮೇರಿಕನ್ಸ್! 25 ಸಾವಿರ ಟಿಕೆಟ್ ಸೋಲ್ಡ್ ಔಟ್- ದಳಪತಿ ರೆಕಾಡ್ರ್ಸ್

Vishalakshi Pby Vishalakshi P
22/09/2023
in Majja Special
Reading Time: 1 min read
`ಲಿಯೋ’ ಬುಕ್ಕಿಂಗ್‍ಗೆ ಮುಗಿಬಿದ್ದ ಅಮೇರಿಕನ್ಸ್! 25 ಸಾವಿರ ಟಿಕೆಟ್ ಸೋಲ್ಡ್ ಔಟ್- ದಳಪತಿ ರೆಕಾಡ್ರ್ಸ್

ಕಾಲಿವುಡ್ ಸೂಪರ್ ಸ್ಟಾರ್, ಸೌತ್ ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಪಾಪ್ಯೂಲರ್ ಆ್ಯಕ್ಟರ್ ದಳಪತಿ ವಿಜಯ್ ಅಭಿನಯದ `ಲಿಯೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 19ರಂದು ಲಿಯೋ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಬಿಡುಗಡೆಗೆ ಮೊದಲೇ ಹಲವು ದಾಖಲೆಗಳಿಗೆ ಪಾತ್ರವಾಗಿರೋ ವಿಜಯ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಚಿತ್ರ, ಈಗ ಅಡ್ವಾನ್ಸ್ ಬುಕ್ಕಿಂಗ್‍ನಲ್ಲೂ ನಯಾ ದಾಖಲೆ ಬರೆಯುತ್ತಿದೆ. 24 ಗಂಟೆಯಲ್ಲಿ 10 ಸಾವಿರ ಟಿಕೆಟ್ ಸೋಲ್ಡ್ ಆಗುವ ಮೂಲಕ ಅಮೇರಿಕಾದಲ್ಲಿ ಲಿಯೋ ರೆಕಾರ್ಡ್ ಕ್ರಿಯೇಟ್ ಮಾಡಿತ್ತು. ಇದೀಗ, ಒಟ್ಟು 25000 ಟಿಕೆಟ್‍ಗಳು ಸೇಲ್ ಆಗಿದ್ದು ಯುನೈಟೆಡ್ ಕಿಂಗ್‍ಡಂ ಗಲ್ಲಾಪೆಟ್ಟಿಗೆ ಗಹಗಹಿಸುತ್ತಿದೆ. ಯಾರೂ ತಿಕ್ಕಿ ಅಳಿಸಲಾಗದ ಚರಿತ್ರೆಗೆ ಇಳಯ ದಳಪತಿ ವಿಜಯ್ ನಟನೆಯ ಲಿಯೋ ಸಾಕ್ಷಿಯಾಗಿದೆ.

ಲಿಯೋ… ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ. ಈ ಚಿತ್ರಕ್ಕಾಗಿ ಈ ಭಾರಿ ತಮಿಳು ಪ್ರೇಕ್ಷಕರು ಮಾತ್ರವಲ್ಲ ಪ್ಯಾನ್ ಇಂಡಿಯಾ ಪ್ರೇಮಿಗಳು ಕೂಡ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಅದಕ್ಕೆ ಕಾರಣ ಲಿಯೋ ಸಾರಥಿ (ಲೋಕೇಶ್) ಪ್ಲಸ್ ಅಧಿಪತಿ (ವಿಜಯ್) ಜೊತೆಗೆ ಲಿಯೋ ತಾರಾಗಣ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಹೌದು, ಲಿಯೋ ಚಿತ್ರದಲ್ಲಿ ಸೂಪರ್ ಸ್ಟಾರ್ ಗಳ ದಂಡೇ ಇದೆ. ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ತ್ ಆ್ಯಂಟನಿ ದಾಸ್ ಆಗಿ ದಳಪತಿ ಎದುರು ಧಗಧಗಿಸಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ, ಫಹಾದ್ ಫಾಸಿಲ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ತ್ರಿಷಾ, ಪ್ರಿಯಾ ಆನಂದ್ ಹೀಗೆ ಘಟಾನುಘಟಿ ತಾರೆಯರ ಸಮಾಗಮ ಇಲ್ಲಾಗಿದ್ದು, `ಲಿಯೋ’ ಮೇಲೆ ಇಂಡಿಯನ್ ಸಿನಿದುನಿಯಾದ ಕಣ್ಣುಬಿದ್ದಿದೆ. ಈಗಾಗಲೇ ಲಿಯೋ ಚಿತ್ರ ಯುನೈಟೆಡ್ ಕಿಂಗ್‍ಡಂನ ಕಬ್ಜ ಮಾಡಿಕೊಂಡು ಕೇಕೆಹಾಕ್ತಿದೆ.

ಹೌದು, `ಯುಕೆ’ನಲ್ಲಿ ಲಿಯೋ ಅಬ್ಬರ ಆರ್ಭಟ ಜೋರಾಗಿದೆ. ಬಿಡುಗಡೆಗೆ 40 ದಿನ ಬಾಕಿಯಿರುವಾಗಲೇ ಯುಕೆನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ತೆರೆಯಲಾಗಿತ್ತು. ಕೇವಲ 24 ಗಂಟೆಗಳಲ್ಲಿ 10000 ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಈ ಮೂಲಕ ಯುಕೆ ಬಾಕ್ಸ್ ಆಫೀಸ್ ನಲ್ಲಿ ಹಿಸ್ಟ್ರಿ ಕ್ರಿಯೇಟ್ ಆಗಿತ್ತು. ಒಂದೇ ಏಟಿಗೆ ಹಳೆಯ ದಾಖಲೆಗಳನ್ನೆಲ್ಲಾ ಕುಟ್ಟಿ ಪುಡಿ ಮಾಡಿದ `ಲಿಯೋ’ ನಯಾ ಇತಿಹಾಸಕ್ಕೆ ನಾಂದಿ ಹಾಡಿತ್ತು. ಸಿನಿಮಾ ರಿಲೀಸ್ ಗೆ 6 ವಾರ ಬಾಕಿ ಇರುವಾಗ ಯುಕೆ ಅಖಾಡದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆದ ಇಂಡಿಯಾದ ಮೊದಲ ಸಿನಿಮಾ ಎನ್ನುವ ಖ್ಯಾತಿಗೆ ಲಿಯೋ ಪಾತ್ರವಾಗಿತ್ತು. ಈಗ ಅಲ್ಲಿ 25000 ಟಿಕೆಟ್‍ಗಳು ಸೇಲಾಗಿದ್ದು, ಮೊದಲ ದಿನವೇ ಅಮೇರಿಕನ್ ಬಾಕ್ಸ್ ಆಫೀಸ್‍ನಲ್ಲಿ ಬಂಗಾರದ ಬೆಳೆ ಬರುವುದು ಖಚಿತವಾಗಿದೆ. ಯುಕೆ ಅಂಡ್ ಯುರೋಪ್‍ನಲ್ಲಿ ಸಿನಿಮಾ ವಿತರಣೆ ಮಾಡುವ ಜವಬ್ದಾರಿಯನ್ನ ತನ್ನ ಹೆಗಲಿಗೆ ಹಾಕ್ಕೊಂಡಿರುವ ಅಹಿಂಸಾ ಎಂಟರ್ ಟೈನ್ಮೆಂಟ್ ಸಂಸ್ಥೆ, ಗ್ಲೋಬಲ್ ಮಾರ್ಕೆಟ್ ಮೇಲೆ ಕಣ್ಣಿಟ್ಟಿದೆ. ಮೊದಲು ಯುಕೆನಾ ಕಬ್ಜ ಮಾಡಿಕೊಳ್ಳುವ ಅಹಿಂಸಾ ಕನಸು ನನಸಾಗಿದ್ದು, ಜಾಗತಿಕ ಮಾರುಕಟ್ಟೆಯ ಮೇಲೆ ಲಿಯೋ ಪ್ರಾಬಲ್ಯ ಸಾಧಿಸುವ ಸೂಚನೆ ಸಿಗ್ತಾಯಿದೆ.

ಅಂದ್ಹಾಗೇ, ಲಿಯೋ ಸಾರಥಿ (ಲೋಕೇಶ್ ಕನಗರಾಜ್) ಹಾಗೂ ಲಿಯೋ ಅಧಿಪತಿ (ವಿಜಯ್ ದಳಪತಿ) ಇಬ್ಬರು ಕೂಡ ಕಾಲಿವುಡ್ ಬಾಕ್ಸ್ಆಫೀಸ್ ಬಾಸ್ಗಳು. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದಂತಹ ಮಾಸ್ಟರ್ ಸಿನಿಮಾ ಬರೀ ತಮಿಳುನಾಡಿನಲ್ಲೇ ನೂರಾರು ಕೋಟಿ ಬ್ಯುಸಿನೆಸ್ ಮಾಡಿತ್ತು. ಒಂದೇ ಭಾಷೆಯಲ್ಲಿ ತೆರೆಕಂಡು 250 ರಿಂದ 300 ಕೋಟಿ ಲೂಟಿ ಹೊಡೆದಿತ್ತು. ಇದೀಗ `ಲಿಯೋ’ 250 ರಿಂದ 300 ಕೋಟಿ ಬಜೆಟ್ನಲ್ಲಿ ತಯ್ಯಾರಾಗಿ ಶಿಲೆಯಾಗಿ ನಿಂತಿದೆ. ಐದೈದು ಭಾಷೆಯಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಗೆ ಸಜ್ಜಾಗಿದ್ದು, ಇದೇ ಅಕ್ಟೋಬರ್ 19ರಂದು ದಸರಾ ಹಬ್ಬಕ್ಕೆ ಅದ್ದೂರಿಯಾಗಿ ಥಿಯೇಟರ್ ಗೆ ಲಗ್ಗೆ ಇಡ್ತಿದೆ. ಈ ಡೆಡ್ಲಿ ಜೋಡಿಯ ಜುಗಲ್ಬಂಧಿ ವರ್ಕ್ ಆಗುತ್ತೆ, ಮಾಸ್ಟರ್ಗಳ ನಯಾ ಮೇನಿಯಾ ಸೃಷ್ಟಿಯಾಗುತ್ತೆನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿದೆ.

ಇನ್ನೂ `ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಕಾನ್ಸೆಪ್ಟ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್, ಕೈಥಿ, ವಿಕ್ರಮ್ ಚಿತ್ರದ ಕಥೆ ಮತ್ತು ಪಾತ್ರಗಳನ್ನು ಲಿಯೋದಲ್ಲಿ ತಂದು ನಿರೀಕ್ಷೆ ಹೆಚ್ಚಿಸಿದ್ದಾರೆ. ಏಜೆಂಟ್ ಅಮರ್ ಫಹಾದ್, ರೊಲೆಕ್ಸ್ ಸೂರ್ಯ ಸ್ಪೆಷಲ್ ಎಂಟ್ರಿ ಆಗಿರೋದ್ರಿಂದ ಸಿನಿಮಾಪ್ರೇಮಿಗಳು `ಲಿಯೋ’ ನೋಡಲು ಕುತೂಹಲಭರಿತರಾಗಿದ್ದಾರೆ. ಕಥೆ ಚಿತ್ರಕಥೆ ರಚಿಸಿ ಲೋಕೇಶ್ ಈ ಸಿನಿಮಾ ಡೈರೆಕ್ಟ್ ಮಾಡಿದ್ದು, ಎಸ್ಎಸ್ ಲಲಿತ್ಕುಮಾರ್, ಜಗದೀಶ್ ಪಳನಿಸ್ವಾಮಿಯವರು ಬಂಡವಾಳ ಹೂಡಿದ್ದಾರೆ. ಲಿಯೋ ಸಿನಿಮಾದ ರನ್‌ಟೈಮ್‌2 ಗಂಟೆ 39 ನಿಮಿಷಗಳ ಕಾಲ ಇರಲಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಅನಿರುದ್ ರವಿಚಂದರ್ ಸಂಗೀತವಿದೆ. ಈಗಾಗಲೇ ರಿಲೀಸ್ ಆಗಿರುವ `ನಾ ರೆಡಿದಾ ವರವಾ’ ಹಾಗೂ ಬ್ಲಡಿ ಸ್ವೀಟ್ ಹಾಡುಗಳು ಕಲಾಭಿಮಾನಿಗಳಿಗೆ ಕಿಕ್ಕೊಟ್ಟಿವೆ. ಲಿಯೋಗೆ ಹೆವಿ ಕ್ರೇಜ್ ಕ್ರಿಯೇಟ್ ಆಗಿದ್ದು, ಮಾಸ್ಟರ್ ಕಾಂಬೋ ಕ್ಲಿಕ್ ಆಗುತ್ತಾ? ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ನಿಂದ ಕೋಟಿ ಕೋಟಿ ಲೂಟಿ ಮಾಡಿ ಕಿಂಗ್ ಖಾನ್ ಜವಾನ್ನ ಹಿಂದಿಕ್ಕುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅಶುತೋಷ್ ಗೋವಾರಿಕರ್-ಡಿವೈನ್‍ಸ್ಟಾರ್ ಭೇಟಿ ರಹಸ್ಯ ಬಯಲು! `ಆದಿ ಶಂಕರಾಚಾರ್ಯ’ರ ಸಿನಿಮಾ ಘೋಷಿಸಿದ ಲಗಾನ್ ಡೈರೆಕ್ಟರ್!

ಅಶುತೋಷ್ ಗೋವಾರಿಕರ್-ಡಿವೈನ್‍ಸ್ಟಾರ್ ಭೇಟಿ ರಹಸ್ಯ ಬಯಲು! `ಆದಿ ಶಂಕರಾಚಾರ್ಯ'ರ ಸಿನಿಮಾ ಘೋಷಿಸಿದ ಲಗಾನ್ ಡೈರೆಕ್ಟರ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.