ನೀಲಿ ಚಿತ್ರಗಳ ಮಾಜಿ ರಾಣಿ, ಪಡ್ಡೆಹೈಕ್ಳ ಮನದನ್ನೆ, ಬಾಲಿವುಡ್‍ನ ಹಾಟ್ ಬ್ಯೂಟಿ ಸನ್ನಿಲಿಯೋನ್ `ತೆಲುಗು ಮೀಡಿಯಂ ಸ್ಕೂಲ್’ ಸೇರಿದ್ದಾರೆ. ಅರ್ರೇ ಇದೇನಿದು, ಸೇಸಮ್ಮ ತೆಲುಗು ಕಲಿಯೋಕೆ ಸ್ಕೂಲ್‍ಗೆ ಹೊರಟರಾ ಅಂತ ಗಾಬರಿಯಾಗ್ಬೇಡಿ. `ತೆಲುಗು ಮೀಡಿಯಂ ಸ್ಕೂಲ್’ ಹೆಸರಲ್ಲಿ ಬರಲಿರುವ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಮೂಲಕ ತೆಲುಗು ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ.
ಮಂಚು ಮನೋಜ್ ಅಭಿನಯದ `ಕರೆಂಟ್ ತೀಗಾ’ ಸಿನಿಮಾದ ಮೂಲಕ ಟಾಲಿವುಡ್ ಬಿಗ್‍ಸ್ಕ್ರೀನ್‍ಗೆ ಬೇಬಿ ಡಾಲ್ ಸನ್ನಿ ಪರಿಚಯಗೊಂಡಿದ್ದರು. ಈಗ `ತೆಲುಗು ಮೀಡಿಯಂ ಸ್ಕೂಲ್’ ಮೂಲಕ ಕಿರುಪರದೆಯಲ್ಲಿ ಮೆರವಣಿಗೆ ಹೊರಡಲು ಸಜ್ಜಾಗಿದ್ದಾರೆ. ಪಿಂಕ್ ಕಲರ್ ಸೀರೆಯುಟ್ಟು, ಸಿಂಪಲ್ ಜ್ಯೂಯಲರಿ ತೊಟ್ಟಿರುವ ಬಿಟೌನ್ ಲೈಲಾ, ಪಕ್ಕಾ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದು ತೆಲುಗು ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕೆನಡಾ ಬ್ಯೂಟಿ ಬಾಯಲ್ಲಿ ತೆಲುಗು ಭಾಷೆ ಕೇಳಲಿಕ್ಕೆ ಕಾತುರರಾಗಿದ್ದಾರೆ.

ಜೀ ತೆಲುಗು ಚಾನಲ್‍ನಲ್ಲಿ `ತೆಲುಗು ಮೀಡಿಯಂ ಸ್ಕೂಲ್’ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಸದ್ಯ ಪ್ರೋಮೋ ಅಷ್ಟೇ ರಿಲೀಸ್ ಆಗಿದೆ. ಇಂತಹ ರಿಯಾಲಿಟಿ ಶೋನ ನೀವು ನೋಡರಲಿಕ್ಕೆ ಸಾಧ್ಯವಿಲ್ಲ ಅಂತೇಳಿರುವ ಸೇಸಮ್ಮ ಈ ಶೋ ಮೇಲಿರುವ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದ್ದಾಳೆ. ಈಗಾಗಲೇ ಹಿಂದಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ನಿರೂಪಕಿಯಾಗಿ ಕಮಾಲ್ ಮಾಡಿರುವ ಸನ್ನಿ, ಇದೇ ಮೊದಲ ಭಾರಿಗೆ ತೆಲುಗು ಶೋನ ನಿರೂಪಣೆ ಮಾಡ್ತಿದ್ದಾರೆ. ಜಿಸ್ಮ್ ಚೆಲುವೆಗೆ ಇಂಡಿಯನ್ ಪ್ಲೇಬ್ಯಾಕ್ ಸಿಂಗರ್ ಮನೋ ಹಾಗೂ ಟಾಲಿವುಡ್ ಕಾಮಿಡಿಯನ್ಸ್ ಗಳು ಸಾಥ್ ನೀಡಲಿದ್ದಾರೆ. ಅತೀ ಶೀಘ್ರದಲ್ಲೇ ಈ ಶೋ ಶುರುವಾಗಲಿದೆ. ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ಎರಡಲ್ಲೂ ಜಾಕ್‍ಪಾಟ್ ಚೆಲುವೆ ಹವಾ ಏಳಲಿದೆ.





