‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಲಾರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು.

ಇದೀಗ ‘ಸಲಾರ್’ ಸಿನಿಮಾದ ಬಿಡುಗಡೆಗೆ ಹೊಸ ಡೇಟ್ ಫಿಕ್ಸ್ ಆಗಿದೆ. ಹೌದು, ಇದೇ ವರ್ಷ ಡಿಸೆಂಬರ್ 22ರಂದು ‘ಸಲಾರ್’ ಬಿಡುಗಡೆ ಆಗಲಿದೆ. ‘ಸಲಾರ್’ ಸಿನಿಮಾ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲಂಸ್’ ಕಡೆಯಿಂದ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 22ರಂದು ‘ಸಲಾರ್’ ಬಿಡುಗಡೆ ಆಗಲಿದೆ. ‘ಕಮಿಂಗ್ ಬ್ಲಡಿ ಸೂನ್ ’ ಎಂಬ ಖಡಕ್ ಕ್ಯಾಪ್ಷನ್ ಮತ್ತು ಪೋಸ್ಟರ್ ಮೂಲಕ ‘ಹೊಂಬಾಳೆ ಫಿಲಂಸ್’ ರಿಲೀಸ್ ಡೇಟ್ ತಿಳಿಸಿದೆ.
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸಲಾರ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾದಲ್ಲಿ ನಾಯಕ ಪ್ರಭಾಸ್ ಗೆ, ಶ್ರುತಿ ಹಾಸನ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಟಿನ್ನು ಆನಂದ್,ಈಶ್ವರಿ ರಾವ್ ಮುಂತಾದವರು ‘ಸಲಾರ್ ’ ಸಿನಿಮಾದಲ್ಲಿ ನಟಿಸಿದ್ದಾರೆ.





