ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ ! ಮಾಸ್‍ಲೀಡರ್ ಮಸ್ತ್ ಕೌಂಟರ್

Vishalakshi Pby Vishalakshi P
02/10/2023
in Majja Special
Reading Time: 1 min read
ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ ! ಮಾಸ್‍ಲೀಡರ್ ಮಸ್ತ್ ಕೌಂಟರ್

ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ ಹೀಗಂತ ಗುಡುಗುವ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣ ಗಾಂಧಿನಗರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸಾಮಾನ್ಯವಾಗಿ ನಾನ್ ಯಾರ್ ತಂಟೆಗೂ ಹೋಗಲ್ಲ, ಹಾಗಂತ ಸೋಲ್ತಿನಿ ಅನ್ನೋ ಭಯಕ್ಕಲ್ಲ. ನಾನ್ ಹೋದರೆ ಯುದ್ದಭೂಮಿ ರುದ್ರಭೂಮಿ ಆಗುತ್ತೆ ಅನ್ನೋ ಕಾರಣಕ್ಕೆ’. ಇಷ್ಟು ಹೇಳಿದ್ಮೇಲೆ ನಿಮಗೆ ಇದು ಘೋಸ್ಟ್ ಸಮಾಚಾರ ಎಂಬ ಸಂಗತಿ ಗೊತ್ತಾಗಿಬಿಡುತ್ತೆ. ಹಂಡ್ರೆಂಡ್ ಪರ್ಸೆಂಟ್ ಇದು `ಘೋಸ್ಟ್’ ಚಿತ್ರದ ಬೆಂಕಿ ಖಬರ್ರೇ. ಸ್ಯಾಂಡಲ್‍ವುಡ್ ಜೊತೆ ಟಾಲಿವುಡ್, ಕಾಲಿವುಡ್, ಮಾಲಿವುಡ್ ಅಷ್ಟೇ ಯಾಕೇ ಬಾಲಿವುಡ್‍ನಲ್ಲೂ ಘೋಸ್ಟ್ ಫೀವರ್ ಜೋರಾಗಿದೆ. ಮೋಸ್ಟ್ ಅವೈಟೆಡ್ `ಘೋಸ್ಟ್’ ಟ್ರೇಲರ್ ಹೊರಬಿದ್ದಿದ್ದು ಸಿನಿಮಾ ಪ್ರೇಮಿಗಳ ವಲಯದಲ್ಲಿ ಮಾತ್ರವಲ್ಲ ಸೌತ್-ನಾರ್ತ್ ಅಂಗಳದಲ್ಲೂ ಚರ್ಚೆ ಜೋರಾಗಿದೆ. ಮಾಸ್‍ಲೀಡರ್ ಹೊಡೆತಕ್ಕೆ ಮಾಸ್ ರೆಕಾರ್ಡ್‍ಗಳೆಲ್ಲಾ ಪೀಸ್ ಪೀಸ್ ಆಗುವ ಲಕ್ಷಣಗಳು ಕಂಡುಬಂದಿದ್ದು, ಪ್ಯಾನ್ ಇಂಡಿಯಾದಲ್ಲಿ `ಘೋಸ್ಟ್’ ನಯಾ ಚರಿತ್ರೆ ಸೃಷ್ಟಿಸುತ್ತೆನ್ನುವ ನಂಬಿಕೆ ಬಲವಾಗ್ತಿದೆ.

ಘೋಸ್ಟ್… ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಸೆಟ್ಟೇರಿದಾಗಿನಿಂದಲೂ ಈ ಸಿನಿಮಾ ಸೌಂಡ್ ಮಾಡುತ್ತಲೇ ಬಂದಿದ್ದು ಈಗ ಟ್ರೇಲರ್‍ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಯಲ್ಲಿ `ಘೋಸ್ಟ್’ ಟ್ರೇಲರ್ ರಿಲೀಸ್ ಮಾಡಲಾಗಿದೆ. ದೃಶ್ಯಬ್ರಹ್ಮ ಜಕ್ಕಣ್ಣ, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟೆಡ್ ಪೃಥ್ವಿರಾಜ್ ಸುಕುಮಾರನ್, ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ತೆಲುಗು, ತಮಿಳು, ಮಲೆಯಾಳಂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಶುಭಹಾರೈಸಿದ್ದಾರೆ. ಲೀಡರ್‍ಗಳಿಗೆ ಮಾಸ್ ಲೀಡರ್ ಆಗಿರುವ ಶಿವಣ್ಣ `ಘೋಸ್ಟ್’ನಲ್ಲಿ ಮಾಸ್‍ಗೆ ಬಾಸ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ. ಎಕೆ-47 ಗನ್ ಹೆಗಲಿಗೇರಿಸಿಕೊಂಡು ಮತ್ತೊಮ್ಮೆ ಗ್ಯಾಂಗ್‍ಸ್ಟಾರ್ ಆಗಿ ಕಣಕ್ಕಿಳಿದಿರೋ ಕರುನಾಡ ಚಕ್ರವರ್ತಿ `ಯುದ್ಧ ಮಾನವ ಲೋಕದ ಮಾಗದ ಕರಗ. ಇಂತಹ ಯುದ್ದಗಳಿಂದ ಸಾಮ್ರಾಜ್ಯಗಳನ್ನು ಕಟ್ಟಿದ್ದಕ್ಕಿಂತ ಆದ ಪತನಗಳೇ ಜಾಸ್ತಿ. ಸಾಮ್ರಾಜ್ಯಗಳನ್ನು ಕಟ್ಟಿದವನು ನಾನು, ಇತಿಹಾಸ ಎಷ್ಟೋ ಭಾರಿ ಮರೆತಿರಬಹುದು. ಆದರೆ, ಧ್ವಂಸ ಮಾಡೋ ನನ್ನಂಥವನನ್ನ ಎಂದಿಗೂ ಮರೆತಿಲ್ಲ’ ಹೀಗೊಂದು ಬೆಂಕಿ ಡೈಲಾಗ್ ಉಗುಳಿದ್ದಾರೆ. ಪ್ರಸನ್ನ ಎಂ ವಿ ಹಾಗೂ ಮಾಸ್ತಿ ಪಂಚಿಂಗ್ ಅಂಡ್ ಪವರ್ ಫುಲ್ ಡೈಲಾಗ್ಸ್ ನ ಕೆತ್ತಿಕೊಟ್ಟಿದ್ದಾರೆ

`ನೀವು ಗನ್‍ನಲ್ಲಿ ಎಷ್ಟು ಜನರನ್ನ ಎದುರಿಸಿದ್ದೀರೋ, ಅದಕ್ಕಿಂತ ಜಾಸ್ತಿ ಜನರನ್ನ ನಾನು ಕಣ್ಣಲ್ಲೇ ಎದುರಿಸಿದ್ದೀನಿ’ ಅದಕ್ಕೆ ಅವರು ನನ್ನನ್ನ ಒಜಿ ಅಂತಾರೇ. ಒಜಿ ಅಂದರೆ ಏನ್ಗೊತ್ತಾ ಒರಿಜಿನಲ್ ಗ್ಯಾಂಗ್‍ಸ್ಟಾರ್. ಟೀಸರ್ ನಲ್ಲೇ ಇಂತಹದ್ದೊಂದು ಡೈಲಾಗ್ ಬಾಣಬಿಟ್ಟಿದ್ದ ದ್ರೋಣ, ದೊಡ್ಮನೆ ಅಭಿಮಾನಿಗಳನ್ನ ಮಾತ್ರವಲ್ಲ ಸ್ಟಾರ್ ನಟರ ಫ್ಯಾನ್ಸ್ ಗಳೆನ್ನೆಲ್ಲಾ ಒಂಟಿಕಾಲಿನಲ್ಲಿ ನಿಲ್ಲಿಸಿದ್ದರು. ಈಗ, ಟ್ರೇಲರ್ ಮೂಲಕ ಎಲ್ಲಾ ವುಡ್ ಅಭಿಮಾನಿಗಳನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ. ಸಾಮಾನ್ಯವಾಗಿ ನಾನ್ ಯಾರ್ ತಂಟೆಗೂ ಹೋಗಲ್ಲ, ಹಾಗಂತ ಸೋಲ್ತಿನಿ ಅನ್ನೋ ಭಯಕ್ಕಲ್ಲ. ನಾನ್ ಹೋದರೆ ಯುದ್ದಭೂಮಿ ರುದ್ರಭೂಮಿ ಆಗುತ್ತೆ’ ಎಂದಿದ್ದಾರೆ. ಮಾಸ್ ಲೀಡರ್ ಬಾಯಲ್ಲಿ ನುಗ್ಗಿಬಂದ ಈ ಡೈಲಾಗ್‍ಗೆ ಶಿಳ್ಳೆ-ಚಪ್ಪಾಳೆ ಜೋರಾಗೇ ಬಿದ್ದಿವೆ. ಸೆಂಚುರಿಸ್ಟಾರ್ ಸರಿಯಾಗೇ ಕೌಂಟರ್ ಕೊಟ್ಟವ್ರೆ, `ಘೋಸ್ಟ್’ ಮೂಲಕ ಸೌತ್-ನಾರ್ತ್ ಸ್ಟಾರ್ಸ್‍ಗೆ ಟಕ್ಕರ್ ಕೊಡ್ತಾರೆನ್ನುವ ಮಾತುಗಳು ಗಾಂಧಿನಗರದಲ್ಲಿ ಭರ್ಜರಿಯಾಗಿ ಕೇಳುಬರುತ್ತಿದೆ.

ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಸಿನಿಮಾದಿಂದ ಸಿನಿಮಾಗೆ ಪ್ರೂವ್ ಮಾಡಿಕೊಂಡು ಬರುತ್ತಿರುವ ಶಿವರಾಜ್‍ಕುಮಾರ್ `ಘೋಸ್ಟ್’ ಸಿನಿಮಾದಲ್ಲಿ ಭರ್ಜರಿಯಾಗೇ ಕಾದಾಡಿದ್ದಾರೆ. ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ಗೆ ಕಿಚ್ಚು ಹಚ್ಚಿರೋ ಕರುನಾಡ ಚಕ್ರವರ್ತಿ, ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಆ್ಯಕ್ಷನ್ ಥ್ರಿಲ್ಲರ್ ರೈಡ್ ಕರೆದುಕೊಂಡು ಹೋಗಲು ರೆಡಿಯಾಗಿದ್ದಾರೆ. ಮಾಸ್ ಡೈಲಾಗ್ಸ್, ಮಸ್ತ್ ಆ್ಯಕ್ಷನ್ ಮೂಲಕ ಮಾಸ್ ಲೀಡರ್ ಶಿವಣ್ಣ ನಯಾ ಖದರ್ ತೋರಿಸೋದ್ರಲ್ಲಿ ನೋ ಡೌಟ್ ಎನ್ನುವುದಕ್ಕೆ ಹೊರಬಿದ್ದಿರುವ ಟೀಸರ್, ಟ್ರೇಲರ್ರೇ ಸಾಕ್ಷಿ.

ಇಂಟ್ರೆಸ್ಟಿಂಗ್ ಅಂದರೆ ಶಿವಣ್ಣ ಡಿಫರೆಂಟ್ ಶೇಡ್‍ಗಳಲ್ಲಿ ಕಾಣಿಸಿಗ್ತಾರೆ. ಕ್ಲಾಸ್, ಮಾಸ್ ಹಾಗೂ ವಿಂಟೇಜ್ ಲುಕ್‍ನಲ್ಲಿ ಕಿಕ್ಕೇರಿಸಲು ಬರುತ್ತಿದ್ದಾರೆ. ನಿರ್ದೇಶಕ ಎಂ.ಜಿ ಶ್ರೀನಿವಾಸ್ ಹೊಸ ಟೆಕ್ನಾಲಜಿನಾ ಬಳಸಿಕೊಂಡು ಹ್ಯಾಟ್ರಿಕ್ ಹೀರೋ ಶಿವಣ್ಣ ವಿಭಿನ್ನವಾಗಿ ತೋರಿಸಲು ಹೊರಟಿದ್ದಾರೆ. ಗ್ಯಾಂಗ್‍ಸ್ಟರ್ ಬ್ಯಾಕ್‍ಡ್ರಾಪ್‍ನಲ್ಲಿ ಒಂದು ಮಾಸ್ ಸಿನಿಮಾ ಕಟ್ಟಿಕೊಟ್ಟಿರುವ ಶ್ರೀನಿಯವರು, ಬೀರ್ ಬಲ್ ಸಿನಿಮಾದ ಮಹೇಶ್ ದಾಸ್ ಪಾತ್ರವನ್ನ ಘೋಸ್ಟ್ ನಲ್ಲಿ ತರುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದಾರೆ. ಸಿನಿಮ್ಯಾಟಿಕ್ ಯೂನಿವರ್ಸ್ ಟಚ್ ಕೊಟ್ಟಿರುವ ಮೊದಲ ಕನ್ನಡ ಸಿನಿಮಾ ಇದಾಗಿದ್ದು ನಯಾ ಚರಿತ್ರೆಗೆ ಘೋಸ್ಟ್ ಡೈರೆಕ್ಟರ್ ಅಡಿಪಾಯ ಹಾಕಿದ್ದಾರೆ. ಅರ್ಜುನ್ ಜನಾ ಮ್ಯೂಸಿಕ್ `ಘೋಸ್ಟ್’ಗೆ ಬಲತುಂಬುತ್ತಿದ್ದು, ಮಹೇಂದ್ರ ಸಿಂಹ ಕೈಚಳಕ ಎದ್ದುಕಾಣುತ್ತಿದೆ.

ಜಗತ್ತು ಒಮ್ಮೆ ಹಿಂತಿರುಗಿ ನೋಡ್ಬೇಕು, ಹಂಗೇನಾದರೂ ನಾನು ಸಾಧನೆ ಮಾಡ್ಬೇಕು ಅಂತ ಹಠಕ್ಕೆ ಬಿದ್ದಿರುವ ಡೈರೆಕ್ಟರ್ ಶ್ರೀನಿ, `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗುವ ಭರವಸೆ ಇಟ್ಟುಕೊಂಡಿದ್ದಾರೆ. ಬಾಲಿವುಡ್‍ನಿಂದ ಅನುಪಮ್ ಖೇರ್, ಮಾಲಿವುಡ್‍ನಿಂದ ಜಯರಾಮ್ `ಘೋಸ್ಟ್’ ತಂಡ ಸೇರಿಕೊಂಡು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನ ಜೋಯಿಸ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ನಿರ್ದೇಶಕ ಶ್ರೀನಿವಾಸ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವ್ರು ಬಹುಕೋಟಿ ಬಂಡವಾಳ ಸುರಿದು ಈ ಚಿತ್ರ ನಿರ್ಮಿಸಿದ್ದಾರೆ. ಗ್ಲೋಬಲ್ ಲೆವೆಲ್‍ನಲ್ಲಿ ಘೋಸ್ಟ್ ನ ರೀಚ್ ಮಾಡಿಸಬೇಕು ಅಂತ ಪ್ಲ್ಯಾನ್ ಮಾಡಿರೋ ಚಿತ್ರತಂಡ ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ಸಿನಿಮಾ ತೆರೆಗೆ ತರುತ್ತಿದೆ. ಅಕ್ಟೋಬರ್ 19ರಂದು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಘೋಸ್ಟ್ ಗ್ರ್ಯಾಂಡ್ ಎಂಟ್ರಿಯಾಗ್ತಿದೆ.

ಈ ವರ್ಷ ತೆರೆಗೆ ಬರುತ್ತಿರುವ ಶಿವಣ್ಣನ ಮೊದಲ ಚಿತ್ರ ಇದು. ಕಬ್ಜ ಹಾಗೂ ಜೈಲರ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಂಡರಾದರೂ, `ಘೋಸ್ಟ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹೊಸ ಖದರ್ ನೋಡೋದಕ್ಕೆ ದೊಡ್ಮನೆ ಭಕ್ತರು ಕಾತುರರಾಗಿದ್ದಾರೆ. ದಸರಾ ಹಬ್ಬದಂದು`ಘೋಸ್ಟ್’ ಮೂಲಕ ಭಜರಂಗಿ ಅಖಾಡಕ್ಕೆ ಇಳಿಯೋದು ಫಿಕ್ಸಾಗಿದ್ದು, ಬೆಳ್ಳಿಭೂಮಿಗೆ ನಯಾ ಕಳೆ ಬರೋದು, ಬಾಕ್ಸ್ ಆಫೀಸ್‍ನಲ್ಲಿ ಒಳ್ಳೆ ಬೆಳೆಯಾಗೋದಂತೂ ಗ್ಯಾರಂಟಿ. “ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಅಕ್ಟೋಬರ್ ಮೊದಲ ವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಶಿವರಾಜ್‌ಕುಮಾರ್ ಅಂಡ್ ಟೀಮ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ‌.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ರಾಗಿಣಿ!

ರಾಜವರ್ಧನ್ 'ಗಜರಾಮ' ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ರಾಗಿಣಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.