ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಮಗಳ ಹುಟ್ದಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್! ಸೋ ಕ್ಯೂಟ್ ಅಂತ ಪಪ್ಪಿ ಕೊಟ್ಟ ಚಿರು ಪುತ್ರ!

Vishalakshi Pby Vishalakshi P
02/10/2023
in Majja Special
Reading Time: 4 mins read
ಮಗಳ ಹುಟ್ದಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್! ಸೋ ಕ್ಯೂಟ್ ಅಂತ ಪಪ್ಪಿ ಕೊಟ್ಟ ಚಿರು ಪುತ್ರ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳ ಬರ್ತ್‍ಡೇ ಸಂಭ್ರಮದಲ್ಲಿದ್ದಾರೆ. ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಅದ್ದೂರಿಯಾಗಿ ಫೋಟೋಶೂಟ್ ಮಾಡಿಸಿರೋ ಧ್ರುವಾ, `ಯಾರಿಲ್ಲಾ ಯಾರಿಲ್ಲಾ ನಿನ್ನಂತೆ ಯಾರಿಲ್ಲ’ ಎನ್ನುತ್ತಲೇ ಮಗಳನ್ನು ಮುದ್ದು ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ವಿಐಪಿಗಳು ಜೊತೆಗೆ ನೆಟ್ಟಿಗರು ಕೂಡ ಸರ್ಜಾ ಕುಟುಂಬದ ರಾಜಕುಮಾರಿಗೆ ಶುಭಾಷಯ ತಿಳಿಸುತ್ತಿದ್ದಾರೆ.

 

View this post on Instagram

 

A post shared by Dhruva Sarja (@dhruva_sarjaa)


ಹೌದು, ಸೋಷಿಯಲ್ ಮೀಡಿಯಾ ಮೂಲಕ ಬಹದ್ದೂರ್ ಮಗಳಿಗೆ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಇತ್ತ ಸರ್ಜಾ ಕುಟುಂಬದಲ್ಲೂ ಸಂಭ್ರಮ-ಸಡಗರ ಮನೆಮಾಡಿದೆ. ಸಾಕ್ಷಾತ್ ಲಕ್ಷ್ಮಿಯಂತೆ ಮನೆಗೆ ಬಂದಿರುವ ಮುದ್ದುಮಗಳ ಹುಟ್ಟುಹಬ್ಬವನ್ನ ಧ್ರುವ ಹಾಗೂ ಪ್ರೇರಣಾ ಗ್ರ್ಯಾಂಡ್ ಆಗಿಯೇ ಸೆಲಬ್ರೇಟ್ ಮಾಡುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ 02ರಂದು ಧ್ರುವ-ಪ್ರೇರಣಾ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಸರ್ಜಾ ಕುಟುಂಬಕ್ಕೆ ಈ ಮುದ್ದುಬೊಂಬೆ ಎಂಟ್ರಿಕೊಟ್ಟಿದ್ದಳು. ಆಕೆಯ ಆಗಮನದ ಬೆನ್ನಲ್ಲೇ ಮನೆಗೆ ಮಗಧೀರನ ಎಂಟ್ರಿಯಾಗಿದೆ. ಗೌರಿ-ಗಣೇಶ ಹಬ್ಬದಂದು ಬಹದ್ದೂರ್ ಕುಟುಂಬ ಮುದ್ದುಮಗನನ್ನು ವೆಲ್‍ಕಮ್ ಮಾಡಿಕೊಂಡಿದೆ.

ಚಿರು ಅಗಲಿಕೆಯ ನಂತರ ಸರ್ಜಾ ಕುಟುಂಬದಿಂದ ಮರೆಯಾಗಿದ್ದ ಸಂತಸ-ಸಂಭ್ರಮ ಮತ್ತೆ ಮರಳಿ ಬಂದಿದೆ. ರಾಯನ್ ಆಗಮನದಿಂದ ಯುವಸಾಮ್ರಾಟ್ ಕುಟುಂಬದಲ್ಲಿ ಬೆಳಕು ಮೂಡಿತ್ತು. ಈಗ ಆ್ಯಕ್ಷನ್ ಪ್ರಿನ್ಸ್ ಕುಟುಂಬಕ್ಕೆ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಬಂದಿರುವುದರಿಂದ ಆ ಬೆಳಕು ದುಪ್ಪಟ್ಟಾಗಿದೆ, ಸಂತೋಷ-ನೆಮ್ಮದಿ ಎಲ್ಲವೂ ಹೆಚ್ಚಿದೆ. ಮಗನ ರೂಪದಲ್ಲಿ ಅಣ್ಣನೇ ವಾಪಾಸ್ ಬಂದಿದ್ದಾನೆನ್ನುವ ಖುಷಿ ಧ್ರುವಾಗೆ ಸಿಕ್ಕಿದೆ. ಈ ಮಾತನ್ನು ಸ್ವತಃ ಆ್ಯಕ್ಷನ್ ಪ್ರಿನ್ಸ್ ಹೇಳಿಕೊಂಡಿದ್ದಾರೆ.

ಧ್ರುವ ಹೇಗೆ ಅಣ್ಣ ಬಂದ ಎನ್ನುವ ಖುಷಿಯಲ್ಲಿದ್ದಾರೋ ರಾಯನ್ ಕೂಡ ತಮ್ಮ ಬಂದ ಎನ್ನುವ ಖುಷಿಯಲ್ಲಿದ್ದಾನೆ. ಚಿರು ಹಾಗೂ ಮೇಘನಾರ ಮುದ್ದಿನ ಪುತ್ರ ರಾಯನ್‍ಗೆ ತಮ್ಮ-ತಂಗಿ ಎನ್ನುವ ಬಾಂದವ್ಯದ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ. ಯಾಕಂದ್ರೆ, ಅವನಿನ್ನು ಚಿಕ್ಕವನು. ಆದರೆ, ಧ್ರುವ ಮಗಳನ್ನ ರಾಯನ್ ಮುದ್ದಾಡೋದನ್ನ ನೋಡಿದರೆ ಚಿರು ಇರಬೇಕಿತ್ತು ಎನಿಸುತ್ತೆ.

ತಾಯಿ ಮೇಘನಾ ಹೇಳಿಕೊಟ್ಟ ಹಾಗೇ ಧ್ರುವ ಪುತ್ರಿನಾ ಸೋ ಕ್ಯೂಟ್, ತಂಗಿಮಾ ಅಂತೇಳುವ ರಾಯನ್, ಮುದ್ದು ತಂಗಿಗೆ ಪಪ್ಪಿ ಕೊಟ್ಟು ಆಕೆನಾ ಮನೆ ಗೆ ಕರ್ಕೊಂಡು ಹೋಗೋಕೆ ರೆಡಿಯಾಗ್ತಾನೆ. ಇದನ್ನು ನೋಡಿ ಧ್ರುವಾ ಅಂತೂ ಫುಲ್ ಖುಷ್ ಆಗ್ತಾರೆ. ರಾಯನ್ ಎರಡು ಕೈಗಳಿಂದ ಬಾಚಿ ತಬ್ಬಿಕೊಂಡು ಮುದ್ದಾಡ್ತಾರೆ. ಈ ಕ್ಯೂಟ್ ವಿಡಿಯೋನ ನಟಿ ಮೇಘನ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಣ್ಮಣಿ ಕಂದಾಗೆ ಹ್ಯಾಪಿ ಬರ್ತ್‍ಡೇ ಅಂತ ಟ್ವೀಟ್ ಮಾಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಹೀಗಾಗಿ ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಕರೆಯುತ್ತಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಕಿರುತೆರೆಯಿಂದ ಹಿರಿತೆರೆಯತ್ತ ನಟಿ ಗಗನ ಕುಂಚಿ!

ಕಿರುತೆರೆಯಿಂದ ಹಿರಿತೆರೆಯತ್ತ ನಟಿ ಗಗನ ಕುಂಚಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.