ಎಸ್. ಆರ್ ಪಾಟೀಲ್ ನಿರ್ದೇಶನದಲ್ಲಿ ಸನತ್ ಹಾಗೂ ಪ್ರಜ್ಞಾ ಭಟ್ ನಾಯಕ, ನಾಯಕಿಯಾಗಿ ನಟಿಸಿರುವ ಪರಿಶುದ್ಧ ಪ್ರೇಮ ಕಥಾನಕ ‘ಒಲವೇ ಮಂದಾರ 2’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಸದ್ಯ ಎರಡು ವಾರಗಳನ್ನು ಪೂರೈಸಿರುವ ‘ಒಲವೇ ಮಂದಾರ 2’ ಮೂರನೇ ವಾರಕ್ಕೆ ಕಾಲಿಡುತ್ತಿದೆ.
ಮೂರನೇ ವಾರದಲ್ಲೂ ಜನ ಈ ಚಿತ್ರಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಚಿತ್ರ ತುಂಬಿದ ಗೃಹದಲ್ಲಿ ಪ್ರದರ್ಶನವಾಗುತ್ತಿದೆ. ಇದೇ ವೇಳೆ ‘ಒಲವೇ ಮಂದಾರ 2’ ಸಿನಿಮಾವನ್ನು ವೀಕ್ಷಿಸಿದ ನಟ ಧ್ರುವ ಸರ್ಜಾ ಚಿತ್ರಕ್ಕೆ ಶುಭ ಕೋರಿದರು.
ರಮೇಶ್ ಮರಗೋಳ, ಬಿ. ಎಂ. ಸತೀಶ್ ನಿರ್ಮಾಣದ ಹಾಗೂ ಯಲ್ಲಾಲಿಂಗ ಮುಗುಟಿ , ರಾಮದೇವ್ ರಾಥೋಡ್ ಅವರ ಸಹ ನಿರ್ಮಾಣವುರುವ ಈ ಚಿತ್ರಕ್ಕೆ ಡಾ. ಕಿರಣ್ ತೋಟಂಬೈಲ್ ಸಂಗೀತ ನೀಡಿದ್ದಾರೆ. ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಹಿರಿಯ ನಟಿ ಭವ್ಯ, ಡಿಂಗ್ರಿ ನಾಗರಾಜ ಕಾಮಿಡಿ ಕಿಲಾಡಿ ಮಡೆನೂರ ಮನು, ಶಿವಾನಂದ ಸಿಂದಗಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜನರು ತೋರತ್ತಿರುವ ಈ ಒಲವಿಗೆ “ಒಲವೇ ಮಂದಾರ 2” ಚಿತ್ರತಂಡ ಧನ್ಯವಾದ ತಿಳಿಸಿದೆ.