ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಮೊನ್ನೆ ಕಾವೇರಿ ನೀರಿಗಾಗಿ ನಡೆದ ಹೋರಾಟದಲ್ಲಿ ದರ್ಶನ್ ಹಾಗೂ ಧ್ರುವ ನಡುವೆ ಮನಸ್ತಾಪ ಇರುವುದು ಎದ್ದುಕಂಡಿತ್ತು. ಒಂದೇ ವೇದಿಕೆ ಮೇಲಿದ್ದರೂ ಕೂಡ ಒಬ್ಬರ ಮುಖ ಒಬ್ಬರು ನೋಡದೇ, ಮಾತನಾಡಿಸದೇ, ಕಡೇ ಪಕ್ಷ ಸ್ಮೈಲ್ ಕೂಡ ಮಾಡದೇ ಇದ್ದದು ಇಬ್ಬರಿಗೂ ಆಗಿಬರಲ್ಲ ಅನ್ನೋದನ್ನ ಸ್ಪಷ್ಟಪಡಿಸಿತ್ತು. ಅಲ್ಲಿಂದ ಈ ಇಬ್ಬರು ನಟರುಗಳ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಸಿದ್ದರು. ಡಿಬಾಸ್ ಸೀನಿಯರ್ ಆಟಿಸ್ಟ್ ಅಂತನೂ ಧ್ರುವ ಬೆಲೆ ಕೊಡಲಿಲ್ಲವಾ ಅಂತ ನೆಟ್ಟಿಗರು ಕೂಡ ಅಸಮಧಾನ ವ್ಯಕ್ತಪಡಿಸಿದ್ದರು. ಅದಕ್ಕೀಗ ಸ್ವತಃ ಬಹದ್ದೂರ್ ಗಂಡು ಸ್ಪಷ್ಟನೆ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ಮಾಧ್ಯಮಮಿತ್ರರಿಂದ ಕೇಳಿಬಂದ ಪ್ರಶ್ನೆಗೆ ಆ್ಯಕ್ಷನ್ ಪ್ರಿನ್ಸ್ ಉತ್ತರ ಕೊಟ್ಟಿದ್ದಾರೆ.
ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಧ್ರುವ, ‘ದರ್ಶನ್ ನಮ್ಮ ಸೀನಿಯರ್ ಆಕ್ಟರ್. ಅವರ ಪ್ರಸೆನ್ಸ್, ಆಬ್ಸೆಂಟ್ ನಲ್ಲೂ ಅವರ ಬಗ್ಗೆ ಗೌರವ ಇದೆ. ಆದರೆ, ದರ್ಶನ್ ಅವ್ರಿಗೆ ಒಂದೆರಡು ಪ್ರಶ್ನೆ ಕೇಳಬೇಕಿದೆ. ಆ ಪ್ರಶ್ನೆಗಳನ್ನ ಕ್ಲಿಯರ್ ಮಾಡಿಕೊಳ್ಳದೇ ಮನಸ್ಸಲ್ಲೊಂದು, ಎದುರು ಒಂದುಮಾತಾಡೋಕ್ ಆಗಲ್ಲ. ಮನಸ್ಸಲ್ಲಿ ಒಂದ್ ಇಟ್ಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗೆ ಇಲ್ಲ. ಆರ್ಟಿಫಿಸಿಯಲ್ ಆಗಿ ಫೇಕ್ ಆಗಿ ಇರೋಕ್ ನನಗೆ ಬರಲ್ಲ. ನಮ್ಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆ ಅಲ್ವಾ. ದರ್ಶನ್ ಸೀನಿಯರ್ ಆಕ್ಟರ್. ಅವರ ಬಗ್ಗೆ ಗೌರವ ಇದ್ದೇ ಇರುತ್ತೆ’ ಎಂದು ಹೇಳುವ ಮೂಲಕ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ ಧ್ರುವ. ಮುಂದುವರೆದು ಮಾತನಾಡಿದ ಧ್ರುವ, ‘ನಮ್ಮ ಸಿನಿಮಾಗಳಿಗೆ ಅವ್ರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಮನಸ್ಸಲ್ಲಿ ಒಂದು ಇಟ್ಕೊಂಡು ನಾಟಕ ಆಡೋಕ್ ನನ್ಗೆ ಬರಲ್ಲ. ಅದು ನಾನಲ್ಲ ಅನ್ಸುತ್ತೆ. ನನಗೆ ದರ್ಶನ್ ಅವ್ರ ಬಳಿ ಕೇಳಲು ಕೆಲ ಪ್ರಶ್ನೆಗಳಿವೆ. ನಾನು ಅವರ ಬಳಿ ಮಾತನಾಡಿ ನೋಡ್ತೀನಿ. ಮನಸ್ತಾಪ ಕ್ಲಿಯರ್ ಆಗಬಹುದು, ಇಲ್ಲ ಆಗದೇ ಇರಬಹುದು. ಅದು ನಮ್ಮ ವೈಯಕ್ತಿಕ’ ಎಂದು ಹೇಳುವ ಮೂಲಕ ಮನಸ್ತಾಪ ಇರುವುದನ್ನು ಪರೋಕ್ಷವಾಗಿ ಅವರು ಒಪ್ಪಿಕೊಂಡಿದ್ದಾರೆ.
ಧ್ರುವ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಮಧ್ಯ ಮತ್ತಷ್ಟು ಮನಸ್ತಾಪ ಆಗುವಂತೆ ಕೆಲವರು ಕುತಂತ್ರ ನಡೆಸಿದ್ದಾರಂತೆ. ಅವರಿಗೆ ಧ್ರುವ ಖಡಕ್ ವಾರ್ನಿಂಗ್ ನೀಡಿದ್ದಾರೆ. ‘ಈ ಬೆಳವಣಿಗೆ ಆದ್ಮೇಲೆ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ನಮ್ಮ ನಮ್ಮಲ್ಲೇ ವೈರಿಂಗ್ ಮಾಡ್ತಿದ್ದಾರೆ. ಈ ರೀತಿ ಮಾಡುವವರಿಗೆ ಒಂದು ರಿಕ್ವೆಸ್ಟ್. ದಯವಿಟ್ಟು ನನ್ನ ಹತ್ರ ತಗಲಾಕ್ಕೊಬೇಡಿ. ಫೇಕ್ ಆಕೌಂಟ್ ಕ್ರಿಯೇಟ್ ಮಾಡ್ತಿರೋರು ಎಚ್ಚರವಾಗಿರಿ’ ಎಂದು ಧ್ರುವ ಎಚ್ಚರಿಕೆಯನ್ನು ನೀಡಿದ್ದಾರೆ.. ಬೆಂಕಿಚೆಂಡು ವಾರ್ನಿಂಗ್ಗೆ ಕಿಡಿಗೇಡಿಗಳು ಬೆದರುತ್ತಾರಾ? ಅಥವಾ ಕಡ್ಡಿಗೀರಿ ಬೆಂಕಿ ಹಚ್ಚೋ ಕೆಲಸ ಮಾಡಿ ತಗಲಾಕಿಕೊಳ್ತಾರಾ ಗೊತ್ತಿಲ್ಲ. ಇನ್ ಕೇಸ್ ತಗಲಾಕಿಕೊಂಡರೆ ಯಾರ ಅಭಿಮಾನಿಯೂ ಅಂತನೂ ನೋಡದೇ ಲೆಫ್ಟು ರೈಟು ಎತ್ತೋದು ಗ್ಯಾರಂಟಿ ಅನ್ನೋದು ಧ್ರುವ ರಿಯಾಕ್ಷನ್ನಲ್ಲೇ ಗೊತ್ತಾಗ್ತಿದೆ. ಯಾವುದಕ್ಕೂ ಕಿಡಿಗೇಡಿಗಳು ಹುಷಾರಾಗಿರಬೇಕು.





