`ಏಜ್ ಈಸ್ ಜಸ್ಟ್ ಎ ನಂಬರ್’ ಅನ್ನೋದನ್ನ ಪ್ರೂವ್ ಮಾಡುತ್ತಲೇ ಹೊರಟಿರುವ ತಲೈವಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾರುವುದು ನಿಮಗೆಲ್ಲ ಗೊತ್ತೆಯಿದೆ. ಮಗಳು ಐಶ್ವರ್ಯ ಡೈರೆಕ್ಟ್ ಮಾಡ್ತಿರುವ `ಲಾಲ್ ಸಲಾಂ’ ಸೇರಿದಂತೆ ಎರಡ್ಮೂರು ಸಿನಿಮಾಗಳಿಗೆ ಕಾಲ್‍ಶೀಟ್ ನೀಡಿರುವ ಶಿವಾಜಿ, ಸದ್ಯ `ತಲೈವರ್-170′ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳದಲ್ಲಿ ಶೂಟಿಂಗ್ ಭರ್ಜರಿಯಾಗಿ ಸಾಗಿದ್ದು ಸೂಪರ್ ಸ್ಟಾರ್ ಲುಕ್ ರಿವೀಲ್ ಆಗಿದೆ. ಕೂಲಿಂಗ್ ಗ್ಲಾಸ್ ತೊಟ್ಟು ಸಾಲ್ಟ್ ಪೆಪ್ಪರ್ ಲುಕ್‍ನಲ್ಲಿ ಕಣಕ್ಕಿಳಿದಿರೋ ಸ್ಟೈಲ್ ಕಿಂಗ್, ಶರ್ಟ್ ಬಿಚ್ಚಿ ತೊಡೆತಟ್ಟಿದ್ದಾರೆ. ಅಚ್ಚರಿ ಅಂದರೆ 72ರಲ್ಲೂ ಬಾಷಾ ಫಿಟ್ ಅಂಡ್ ಫೈನ್ ಆಗಿದ್ದಾರೆ ಮಾತ್ರವಲ್ಲ ಸಿಕ್ಸ್ ಪ್ಯಾಕ್ಸ್ ನ ಮೆಂಟೇನ್ ಮಾಡಿದ್ದಾರೆ. ಇದನ್ನ ನೋಡಿ ಪಡೆಯಪ್ಪನ ಫ್ಯಾನ್ಸ್ ಪ್ಲಸ್ ಪ್ಯಾನ್ ಇಂಡಿಯಾ ಸ್ಟಾರ್ ಗಳು ಕೂಡ ದಂಗಾಗಿದ್ದಾರೆ. ವಾರೆವ್ಹಾ ತಲೈವಾ ಅಂತ ಅಚ್ಚರಿ ವ್ಯಕ್ತಪಡಿಸುತಿದ್ದಾರೆ.

ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೊದಲ ಸೂಪರ್ ಸ್ಟಾರ್ ಎನಿಸಿಕೊಂಡಿರುವ ತಲೈವಾ ಈಗೀನ ಯಂಗ್ ಸ್ಟಾರ್ ಗಳಿಗೆಲ್ಲಾ ಸೆಡ್ಡು ಹೊಡೆಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಗಳು ನಾಚುವಂತೆ ಕೆಲಸ ಮಾಡುತ್ತಿದ್ದಾರೆ. ಒಂದೇ ಸಿನಿಮಾಗೆ ಅಂಟುಕೊಂಡು, ಒಂದೇ ಚಿತ್ರದ ಯಶಸ್ಸಿಗೆ ಸ್ಟಿಕ್ ಆಗಿ ಕೂರದ ಪಡೆಯಪ್ಪ, 70ರಲ್ಲೂ ಮೈ ಕೊಡವಿಕೊಂಡು ಅಖಾಡಕ್ಕೆ ಇಳಿಯುವ ಅಭ್ಯಾಸ ರೂಡಿಮಾಡಿಕೊಂಡಿದ್ದಾರೆ. ಸದ್ಯ, ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಚಿತ್ರ ಅದ್ದೂರಿಯಾಗಿ ಸೆಟ್ಟೇರಿತ್ತು. ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದ್ದು ತಲೈವಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕೂಲಿಂಗ್ ಗ್ಲಾಸ್ ತೊಟ್ಟು ಸಾಲ್ಟ್ ಪೆಪ್ಪರ್ ಲುಕ್‍ನಲ್ಲಿ ಶರ್ಟ್‍ಲೆಸ್ ಆಗಿ ಕಾಣಿಸಿಕೊಂಡಿರುವ ಶಿವಾಜಿ ಫೋಟೋವನ್ನ ಸೆರೆಹಿಡಿದು, ಯಾರೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಅಂಡ್ ಟ್ರೆಂಡಿಂಗ್‍ನಲ್ಲಿದೆ. ಇನ್ನೂ ತಲೈವಾ ತಲೈವಾ ನೋಡೋದಕ್ಕೆ ಮುಗಿಬಿದ್ದಿರುವ ಭಕ್ತಬಳಗದ ವಿಡಿಯೋ ಕೂಡ ವೈರಲ್ ಆಗ್ತಿದೆ.

`ತಲೈವರ್-170′ ಮೇಲೆ ನಿರೀಕ್ಷೆ ಹೆಚ್ಚಿದೆ. ಜೈಲರ್ ಸಿನಿಮಾದ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿರುವ ತಲೈವಾ, ತಾವು ಬಾಕ್ಸ್ ಆಫೀಸ್ ಬಾಸ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನ ಚಿತ್ರಕ್ಕಿದ್ದು, ದಕ್ಷಿಣ ಭಾರತದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಲೈಕಾ `ತಲೈವರ್-170′ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಖೈದಿ ನಂಬರ್ 150, 2.0, ದರ್ಬಾರ್ ನಂತರ ಮತ್ತೊಮ್ಮೆ ಬಾಷಾ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು `ತಲೈವರ್-170′ ಹೆಸರಿನಿಂದ ಕರೆಯಲಾಗುತ್ತಿದೆ.
`ತಲೈವರ್-170′ ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಜೈಲರ್ ಸಿನಿಮಾದಂತೆ ಇಲ್ಲಿಯೂ ಕೂಡ ಸೌತ್-ನಾರ್ತ್ ಸೂಪರ್ ಸ್ಟಾರ್ಸ್ ಗಳ ಸಮಾಗಮವಾಗ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಲೈವರ್-170′ ಚಿತ್ರದ ಭಾಗವಾಗ್ತಿದ್ದಾರೆ. ಭರ್ತಿ 32 ವರ್ಷಗಳ ನಂತರ ಶಿವಾಜಿ ದಿ ಬಾಸ್ ಜೊತೆ ಸ್ಕ್ರೀನ್ ಶೇರ್ ಮಾಡಲು ಶೆಹೆನ್ ಷಾ ರೆಡಿಯಾಗಿದ್ದಾರೆ. `ಹಮ್’ ಸಿನಿಮಾದ ನಂತರ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಒಂದೇ ಸ್ಕ್ರೀನ್ ಮೇಲೆ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಇವ್ರೊಟ್ಟಿಗೆ ರಾಣಾ ದಗ್ಗುಬಾಟಿ, ಫಾಹದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರ ವಿಜಯನ್ ಸೇರಿದಂತೆ ಹಲವರು ತಲೈವರ್-170 ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಶೂಟಿಂಗ್ ಹೊರಡಲು ಫಿಲ್ಮ್ ಟೀಮ್ ಸಜ್ಜಾಗಿದ್ದು, ಹೈವೋಲ್ಟೇಜ್ ಆ್ಯಕ್ಷನ್ ಜೊತೆ ಕಣಕ್ಕಿಳಿಯಲಿದೆ. ಇನ್ಮುಂದೆ ಒಂದೊಂದೆ ಅಪ್‍ಡೇಟ್ ಲೈಕಾ ಅಂಗಳದಿಂದ ಹೊರಬೀಳಲಿದೆ.





