ನಿಖಿಲ್ ಕುಮಾರ್ ಸಿನಿಮಾ ಶೂಟಿಂಗ್ ಸೆಟ್ ಗೆ ನಟ ಯುವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ನಿಖಿಲ್ ಸದ್ಯ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲೈಕಾ ಸಂಸ್ಥೆ ನಿರ್ಮಾಣದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಸಪೋಟ ಗಾರ್ಡನ್ ನಲ್ಲಿ ನಿಖಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ಯುವ ರಾಜ್ ಕುಮಾರ್ ಸರ್ಪ್ರಸ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಭೇಟಿ ನೀಡಿದ್ದರು. ಇದೀಗ ದೊಡ್ಮನೆಯ ಮತ್ತೋರ್ವ ನಟ ಯುವ ಭೇಟಿ ನೀಡಿದ್ದಾರೆ.
ಯುವ ಜೊತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇದ್ದರು. ಸೆಟ್ ನಲ್ಲಿ ನಿಖಿಲ್ ಜೊತೆ ಯುವ ಮತ್ತು ಸಂತೋಷ್ ಆನಂದ್ ರಾಮ್ ಕೆಲ ಸಮಯ ಮಾತುಕಥೆ ನಡೆಸಿದರು. ಯುವ ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ, ಹೊಂಬಾಳೆ ಸಂಸ್ಥೆ ನಿರ್ಮಾಣದ ಯುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.