200 ಕೋಟಿ ಹವಾಲ ಕೇಸ್‍ನಲ್ಲಿ ತಗಲಾಕಿಕೊಂಡು ತಿಹಾರ್ ಜೈಲಿನಲ್ಲಿ ಕಂಬಿ ಎಣಿಸ್ತಿರುವ ನಯ ವಂಚಕ ಸುಕೇಶ್ ಚಂದ್ರಶೇಖರ್ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಅಟ್ ದಿ ಸೇಮ್ ಟೈಮ್ ಈ ಕ್ರಿಮಿನಲ್ ಜೊತೆ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಸಂಪರ್ಕ ಇಟ್ಕೊಂಡಿದ್ದಳು ಎನ್ನುವ ಸತ್ಯವು ಇಡಿ ತನಿಖೆಯಿಂದ ಬಟಾಬಯಲಾಗಿದೆ. ಸದ್ಯ ಕೇಸ್ ಕೋರ್ಟ್ ಅಂಗಳದಲ್ಲಿದ್ದು ಕಿಕ್ ಬ್ಯೂಟಿ ಜಾಕ್ವೆಲಿನ್ ಕೂಡ ಆಗಾಗ ತನಿಖೆಗೆ ಹಾಜರಾಗುತ್ತಿದ್ದಾಳೆ. ಆರಂಭದಲ್ಲಿ ನನಗೆ ಸುಕೇಶ್ ಚಂದ್ರಶೇಖರ್ ಯಾರು ಅಂತಾನೇ ಗೊತ್ತಿಲ್ಲ ಎಂದು ಪುಂಗಿದ್ದ ಈಕೆ, ಕೊನೆಗೆ ಸುಕೇಶ್ ನನ್ನ ಡ್ರೀಮ್ ಬಾಯ್ ಎಂದು ಒಪ್ಪಿಕೊಂಡಿದ್ದಳು. ಇದೆಲ್ಲಾ ಮುಗಿದೋದ ಕಥೆಯಾದ್ರೂ ಹೊಸ ಮ್ಯಾಟ್ರು ಲೀಕ್ ಆಗಿದೆ. ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಮಹಾವಂಚಕ ಸುಕೇಶ್, ತನ್ನ ಮನದನ್ನೆ ಜಾಕ್ವೆಲಿನ್‍ಗೋಸ್ಕರ ಉಪವಾಸ ವ್ರತ ಕೈಗೊಂಡಿರುವ ಸುದ್ದಿ ಓಡಾಡ್ತಿದೆ. ಜೈಲಿನಿಂದ ಸುಕೇಶ್ ಬಿಡುಗಡೆ ಮಾಡಿಸಿದ್ದಾನೆ ಎನ್ನಲಾದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಅಷ್ಟಕ್ಕೂ, ವಂಚಕ ಸುಕೇಶ್ ಜೈಲಿನಿಂದ ಪತ್ರ ಬರೆದು ಬಿಡುಗಡೆ ಮಾಡಿಸ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ಹಲವಾರು ಭಾರಿ ನಟಿ ಜಾಕ್ವೆಲಿನ್‍ಗೆ ಲೆಟರ್ ಬರೆದಿದ್ದಾನೆ. ಬೇಬಿ, ಬುಟ್ಟಬೊಮ್ಮಾ ನಿನ್ನನ್ನ ತುಂಬಾ ಮಿಸ್ ಮಾಡಿಕೊಳ್ತಿದ್ದೀನಿ. ನಿನ್ನನ್ನ ಬಿಟ್ಟು ಇಲ್ಲಿ ಇರೋದಕ್ಕೆ ಆಗ್ತಿಲ್ಲ, ಆದಷ್ಟು ಬೇಗ ನನ್ನ ಮೇಲಿರುವ ಆರೋಪಗಳ್ಳೆಲ್ಲಾ ಸುಳ್ಳೆಂದು ಸಾಬೀತಾಗುತ್ತೆ. ನೀನು ನನ್ನ ಮೇಲಿಟ್ಟಿರುವ ನಂಬಿಕೆ ಕಳೆದುಕೊಳ್ಳಬೇಡ. ಯಾವುದಕ್ಕೂ ಕುಗ್ಗಬೇಡ, ಸದಾ ಖುಷಿಯಾಗಿರು ಅಂತೆಲ್ಲಾ ಪತ್ರದಲ್ಲಿ ಬರೆದು ರಿಲೀಸ್ ಮಾಡಿಸುತ್ತಿದ್ದ. ಅದರಂತೇ ಈಗ ಉಪವಾಸ ವ್ರತ ಕುರಿತು ಮತ್ತೊಂದು ಲೆಟರ್ ಲೀಕ್ ಮಾಡಿಸಿದ್ದಾನೆ. ನವರಾತ್ರಿ ಆರಂಭಕ್ಕೂ ಮುನ್ನಾ ದಿನ ಪತ್ರ ಬರೆದ ವಂಚಕ ಸುಕೇಶ್ `ಬೇಬಿ ನಾಳೆಯಿಂದ ನವರಾತ್ರಿ ಶುರುವಾಗ್ತಿದೆ. ಫಸ್ಟ್ ಟೈಮ್ ನನ್ನ ಜೀವನದಲ್ಲಿ ಫಾಸ್ಟಿಂಗ್ ಮಾಡ್ತಿದ್ದೇನೆ. ಅದು ನಿನಗೋಸ್ಕರ 9 ದಿನವೂ ಉಪವಾಸ ವ್ರತ ಮಾಡಲು ನಿರ್ಧರಿಸಿದ್ದೇನೆ. ನೀನು ಚೆನ್ನಾಗಿರಬೇಕು, ನಮ್ಮ ಸುತ್ತ ಇರುವ ನೆಗೆಟಿವಿಟಿ ಎಲ್ಲವೂ ದೂರವಾಗಬೇಕು’. ಅಂದ್ಹಾಗೇ, ಉಪವಾಸ ಬಿಡುವ ಒಂಭತ್ತನೇ ದಿನ ವೈಷ್ಣೋದೇವಿ ಟೆಂಪಲ್ ಹಾಗೂ ಮಹಾಕಾಳೇಶ್ವರ್ ಟೆಂಪಲ್‍ನಲ್ಲಿ ಸ್ಪೆಷಲ್ ಪೂಜೆ ಅರ್ಗನೈಸ್ ಮಾಡಿಸುತ್ತಿದ್ದೇನೆ. ಆ ತಾಯಿಯ ಶಕ್ತಿಯಿಂದ ನಮಗೆ ಒಳ್ಳೆದಾಗುತ್ತೆ. ಸತ್ಯ ಏನೆಂಬುದು ಹೊರಬರುತ್ತೆ, ಗೆಲುವು ನಮಗೆ ದಕ್ಕೇ ದಕ್ಕುತ್ತೆ. ನಾವಿಬ್ಬರು ಒಂದಾಗಿ ಬಾಳುವ ಸಮಯ ಬಂದೇ ಬರುತ್ತೆ ಎಂದಿದ್ದಾನೆ.
ಓಹೋ, ಆ ಮೇಲೆ? ಹೀಗೊಂದು ಉದ್ಘಾರ ಕೆಲವರ ಬಾಯಿಂದ ಬಂದೇ ಬರುತ್ತೆ. ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಮುಂದುವರೆದು ಹೇಳಿದ್ದೇನು ಅನ್ನೋದನ್ನೂ ಹೇಳಲೇಬೇಕು. ಕೌಂಟ್‍ಡೌನ್ ಶುರುವಾಗಿದೆ ಬೇಬಿ, ನೀನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಾನು ನಿನ್ನ ಬ್ಯಾಕ್‍ಬೋನ್ ಆಗಿ ನಿಲ್ತೀನಿ, ನಿನ್ನ ಪ್ರೊಟೆಕ್ಟ್ ಮಾಡಿಕೊಳ್ತೀನಿ. ಸಿಂಗಲ್ ಸ್ಕ್ರ್ಯಾಚ್ ಆಗೋದಕ್ಕೂ ಬಿಡಲ್ಲ ನಿಂಗೆ ಹಂಗ್ ಕಾಪಾಡಿಕೊಳ್ತೀನಿ. ಈ ಜಗತ್ತಲ್ಲಿ ಯಾವೊಂದು ಪಂಜರವೂ ನಾನು ನಿನ್ನನ್ನು ಪ್ರೀತಿ ಮಾಡುವುದನ್ನ, ಪ್ರೊಟೆಕ್ಟ್ ಮಾಡುವುದನ್ನ ತಡೆಯೋದಕ್ಕೆ ಆಗಲ್ಲ. ನಂಗೊತ್ತು ಬೇಬಿ ನೀನು ನನ್ನ ಎಷ್ಟು ಲವ್ ಮಾಡ್ತೀಯಾ ಅಂತ. ಅಟ್ ದಿ ಸೇಮ್ ಟೈಮ್ ನಿನಗೂ ಗೊತ್ತಿದೆ ನಾನು ನಿನ್ನ ಎಷ್ಟು ಪ್ರೀತಿ ಮಾಡ್ತೀನಿ ಅಂತ. ಅಂದ್ಹಾಗೇ, ನಾನು ಬದುಕಿರೋದೇ ನಿನಗೋಸ್ಕರ. ನಿನಗೋಸ್ಕರ ಏನ್ ಮಾಡೋದಕ್ಕೂ ನಾನ್ ರೆಡಿಯಿದ್ದೇನೆ, ಸಾಯಿಸೋಕು ರೆಡಿ, ಸಾಯೋಕು ರೆಡಿ. ಹೀಗಂದಿರುವ ಕೀಚಕ ಸುಕೇಶ, `ಬೇಬಿ ನೀನು ನನ್ನ ಲೈಫ್ ಲೈನ್, ನಿನ್ನ ಗಟ್ಟಿಯಾಗಿ ತಬ್ಬಿಕೊಳ್ಳಬೇಕು ಆ ಕ್ಷಣಕ್ಕಾಗಿ ಕಾಯ್ತಿದ್ದೀನಿ ಎಂದಿದ್ದಾನೆ. ಕೊನೆಗೆ ಲವ್ ಯೂ ಮೈ ಕ್ರೇಜಿ ಬೇಬಿ, ಮೈ ಶಕ್ತಿ, ಮೈ ಟೈಗ್ರೆಸ್ ಅಂದರೆ ನನ್ನ ಪಾಲಿನ ಹೆಣ್ಣುಲಿ ಅಂತ ಸೈನಪ್ ಕೊಟ್ಟಿದ್ದಾನೆ.
ಈ ಕ್ರಿಮಿನಲ್ ಸುಕೇಶ ನಿಜವಾಗಲೂ ಜಾಕಿನಾ ಪ್ರೀತಿ ಮಾಡ್ತಿದ್ದಾನಾ ಅಥವಾ? ಲವ್ ಮಾಡೋ ಥರ ನಾಟಕ ಆಡ್ತಿದ್ದಾನಾ ಗೊತ್ತಿಲ್ಲ. ಯಾಕಂದ್ರೆ, ನಾಚ್ ಮೇರಿ ರಾಣಿಯಂಥಾ ರಾಣಿಗೆ ಕೈ ಕೊಟ್ಟಿದ್ದಾನೆ. ನಂಗೆ ಕುಸು ಕುಸು ಅನ್ನೋ ಕ್ಯೂಟಿಗಿಂತ ಕಿಕ್ಕೇರಿಸೋ ಶ್ರೀಲಂಕನ್ ಬ್ಯೂಟಿನೇ ಬೇಕೆಂದು ಆರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಸಲ್ಮಾನ್ ಖಾನ್ ಸಖಿ ಎಂದು ಗೊತ್ತಿದ್ರೂ ಜಾಕಿಗೆ ಗಾಳ ಹಾಕಿ ಕೆಡವಿಕೊಂಡಿದ್ದಾನೆ. ಬ್ರ್ಯಾಂಡೆಂಡ್ ಬಟ್ಟೆ, ಡೈಮಂಡ್ ಕಿವಿಯೋಲೆ ಜೊತೆ ಪರ್ಷಿಯನ್ ಬೆಕ್ಕು ಹಾಗೂ ಕುದುರೆ ಕೊಟ್ಟು ಕ್ಯಾಚ್ ಹಾಕ್ಕೊಂಡಿದ್ದಾನೆ. ಈ ಬಗ್ಗೆ ಇಡಿ ತನಿಖೆಯಿಂದಲೇ ಮಾಹಿತಿ ಹೊರಬಿದ್ದಿದೆ. ಸುಕೇಶ್ ಚಂದ್ರಶೇಖರ್ ಅಪರಾಧಿ, ಸುಲಿಗೆಕೋರ ಅನ್ನೋ ಸತ್ಯ ಗೊತ್ತಿದ್ರೂ ಕೂಡ ಆತನೊಂದಿಗೆ ಸ್ನೇಹ ಬೆಳೆಸಿ ಅಕ್ರಮ ಹಣ ವರ್ಗಾವಣೆಗೆ ಸಹಕರಿಸಿ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ. ಸದ್ಯಕ್ಕೆ ತನಿಖೆಯಾಗ್ತಿದೆ, ಮುಂದಿನ ದಿನಗಳಲ್ಲಿ ಆರೋಪ ಸಾಬೀತಾದರೆ ತಿಹಾರ್ ಜೈಲು `ರಾ ರಾ ರಕ್ಕಮ್ಮ’ ಅಂತ ಕರೆಯೋದು ಫಿಕ್ಸು. ಆಗ ಗಡಂಗ್ ರಕ್ಕಮ್ಮ, ಮೊಗ್ಗಿನ ಮನಸ್ಸು ಚಿತ್ರದ ಕಾಡುವಂತಹ ಗೆಳೆಯ ಹಾಡು ಹಾಡ್ಕೊಂಡು ಜೈಲು ತುಂಬಾ ಓಡಾಡ್ಬೇಕಾಗುತ್ತೆ. ಹಂಗಾಗುತ್ತಾ? ಆಗಲ್ಲವಾ? ಸೆಕೆಂಡರಿ. ಆದರೆ, ಜೈಲಲ್ಲಿದ್ದುಕೊಂಡು ನಟಿ ಜಾಕ್ವೆಲಿನ್‍ಗೋಸ್ಕರ 9 ದಿನ ವೃತ ಮಾಡ್ತಿರುವುದನ್ನ ನೋಡಿದ ಹುಡುಗೀರು, ನಂಗೋಸ್ಕರ ವೃತ ಮಾಡುವ, ನಂಗೋಸ್ಕರ ದೇವರ ಬಳಿ ಬೇಡಿಕೊಳ್ಳುವ ಹುಡುಗ ಸಿಗಲಿ ಅಂದುಕೊಳ್ಳುವುದರಲ್ಲಿ ತಪ್ಪಿಲ್ಲ ಅಲ್ಲವಾ?






