ಶನಿವಾರ, ಜುಲೈ 25, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕಿಂಗ್ ಖಾನ್ ಮುಂದಿನ ಸಿನಿಮಾಗೆ ಮಗಳೇ ಹೀರೋಯಿನ್! ಸಿಲ್ವರ್ ಸ್ಕ್ರೀನ್‍ಗೆ ಬಾದ್ ಷಾ ಪುತ್ರಿಯ ಗ್ರ್ಯಾಂಡ್ ಎಂಟ್ರಿ

Vishalakshi Pby Vishalakshi P
19/10/2023
in Majja Special
Reading Time: 1 min read
ಕಿಂಗ್ ಖಾನ್ ಮುಂದಿನ ಸಿನಿಮಾಗೆ ಮಗಳೇ ಹೀರೋಯಿನ್! ಸಿಲ್ವರ್ ಸ್ಕ್ರೀನ್‍ಗೆ ಬಾದ್ ಷಾ ಪುತ್ರಿಯ ಗ್ರ್ಯಾಂಡ್ ಎಂಟ್ರಿ

ಕಿಂಗ್ ಖಾನ್ ಶಾರುಖ್ ತಮ್ಮ ಅಖಂಡ ಅಭಿಮಾನಿಗಳಿಗೆ ಸರ್ ಪ್ರೈಸ್ ಕೊಡಲು ರೆಡಿಯಾಗಿದ್ದಾರಂತೆ. ತಮ್ಮ ಮುಂದಿನ ಸಿನಿಮಾದ ಮೂಲಕ ಮುದ್ದಿನ ಮಗಳಾದ ಸುಹಾನಾ ಖಾನ್‍ರನ್ನ ಸಿನಿದುನಿಯಾಗೆ ಪರಿಚಯಿಸಲು ಪಠಾಣ್ ಸಿದ್ದತೆ ಮಾಡಿಕೊಳ್ತಿದ್ದಾರಂತೆ. ಇಂಟ್ರೆಸ್ಟಿಂಗ್ ಅಂದರೆ ಬಾದ್‍ಷಾ ಅಪ್ ಕಮ್ಮಿಂಗ್ ಚಿತ್ರಕ್ಕೆ ಪುತ್ರಿ ಸುಹಾನಾ ಖಾನ್ ಹೀರೋಯಿನ್ ಅಂತೆ. ಅಪ್ಪು-ಮಗಳು ಇಬ್ಬರು ಸ್ಕ್ರೀನ್ ಶೇರ್ ಮಾಡಲು ಸಜ್ಜಾಗಿದ್ದು ಅತೀ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರಂತೆ.

 

ಅರ್ರೇ ಅಪ್ಪನ ಸಿನಿಮಾಗೆ ಮಗಳು ಹೀರೋಯಿನ್ನಾ? ಏನ್ ಹೇಳ್ತಿದ್ದೀರಾರಿ. ಹೀಗೊಂದು ಮರುಪ್ರಶ್ನೆ ನೀವೆಲ್ಲರೂ ಕೇಳೋದು ಸಹಜ. ಆದರೆ, ಬಾಲಿವುಡ್ ಅಂಗಳದಲ್ಲಿ ಈ ಕುರಿತು ಸುದ್ದಿ ಕೇಳಿಬಂದಿರುವುದಂತೂ ಸತ್ಯ. ಸಾಕಷ್ಟು ವೆಬ್‍ಸೈಟ್‍ಗಳಲ್ಲಿ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಒಟ್ಟಿಗೆ ತೆರೆಹಂಚಿಕೊಳ್ಳುವ ಬಗ್ಗೆ ವರದಿಯಾಗಿದೆ. ಜೊತೆಗೆ ಇದೊಂದು ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ ಎಂತಲೂ ತಿಳಿಸಲಾಗಿದೆ. ಅಲ್ಲಿಗೆ ಅಪ್ಪ-ಮಗಳು ಇಬ್ಬರು ಕೂಡಿ ಪ್ರೇಕ್ಷಕರನ್ನ ಆ್ಯಕ್ಷನ್ ಪ್ಯಾಕ್ಡ್ ಅಡ್ವೆಂಚರಸ್ ರೈಡ್ ಕರೆದುಕೊಂಡು ಹೋಗಲು ರೆಡಿಯಾಗಿದ್ದಾರೆನ್ನೋದು ಖಚಿತವಾಗುತ್ತೆ. ಆದರೂ, ಶಾರುಖ್ ಹಾಗೂ ಸುಹಾನಾ ಪಾತ್ರದ ಬಗ್ಗೆ ನಿರ್ದೇಶಕರು ಹೇಳುವವರೆಗೂ ಕಾಯಬೇಕು.

ಅಂದ್ಹಾಗೇ, ಈ ಸಿನಿಮಾವನ್ನ ಕಹಾನಿ, ಬದ್ಲಾ, ಲಸ್ಟ್ ಸ್ಟೋರಿಸ್-2 ಸಿನಿಮಾ ಖ್ಯಾತಿಯ ಸುಜಯ್ ಘೋಷ್ ನಿರ್ದೇಶನ ಮಾಡಲಿದ್ದಾರಂತೆ. ವಾರ್, ಪಠಾಣ್ ನಂಥಾ ಚಿತ್ರಗಳ ಸಾರಥಿ ಸಿದ್ದಾರ್ಥ್ ಆನಂದ್ ಕಿಂಗ್ ಖಾನ್ ಅಂಡ್ ಸುಹಾನಾ ಖಾನ್ ಗೋಸ್ಕರ ಹೈವೋಲ್ಟೇಜ್ ಕಥೆ ಕೆತ್ತಿ ಕೊಟ್ಟಿದ್ದಾರಂತೆ. ಕಳೆದ ಮಾರ್ಚ್‍ನಿಂದ ಈ ಚಿತ್ರದ ಮೇಲೆ ವರ್ಕ್ ನಡೀತಿದ್ದು, 2024 ನವೆಂಬರ್ ನಿಂದ ಶೂಟಿಂಗ್ ಶುರು ಮಾಡುವ ಪ್ಲ್ಯಾನ್‍ನಲ್ಲಿದ್ದಾರಂತೆ. ಇಂಡಿಯಾ ಹಾಗೂ ಅಬ್ರಾಡ್‍ನಲ್ಲಿ 6 ತಿಂಗಳ ಕಾಲ ಚಿತ್ರೀಕರಣ ನಡೆಸಲು ತಯಾರಿ ಮಾಡಿಕೊಂಡಿದ್ದಾರಂತೆ. ರೆಡ್‍ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗಳ್ಳುತ್ತಿದ್ದು, ಸಿದ್ದಾರ್ಥ್ ಆನಂದ್ ಕೈ ಜೋಡಿಸಿದ್ದಾರೆ.

ಈಗಾಗಲೇ ಜೋಯಾ ಅಖ್ತರ್ ನಿರ್ದೇಶನದ `ಆರ್ಚೀಸ್’ ಸಿನಿಮಾಗೆ ಸುಹಾನಾ ಖಾನ್ ಬಣ್ಣ ಹಚ್ಚಿದ್ದಾರೆ. ಅದು ಬಿಡುಗಡೆಗೊಳ್ಳುವ ಮೊದಲೇ ಅಪ್ಪನ ಸಿನಿಮಾದಲ್ಲಿ ಮೇಕಪ್ ಹಾಕಲು ಸುಹಾನಾ ರೆಡಿಯಾಗಿದ್ದಾಳೆ. ಇಂತಹ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಅಪ್ಪನ ಜೊತೆಯಾಗಿ ಬೆಳ್ಳಿತೆರೆ ಪ್ರವೇಶಿಸುವುದಕ್ಕೂ ಪುಣ್ಯ ಮಾಡಿರಬೇಕು. ಎನಿವೇ, ಒಟ್ಟಾಗಿ ತೆರೆಮೇಲೆ ಬರಲಿರುವ ತಂದೆ-ಮಗಳು ತೂಫಾನ್ ಎಬ್ಬಿಸಲಿ. ಈ ವರ್ಷ ಪಠಾಣ್, ಜವಾನ್ ನಂತರ ಡಂಕಿ ಚಿತ್ರದ ಮೂಲಕ ಕಿಂಗ್ ಖಾನ್ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಇದೇ ಡಿಸೆಂಬರ್ 22ರಂದು ಕ್ರಿಸ್ ಮಸ್ ಹಬ್ಬಕ್ಕೆ ಕಮಾಲ್ ಮಾಡಲು ಬರುತ್ತಿದ್ದಾರೆ. ಸಲಾರ್ ಎದುರು ಸ್ಪರ್ಧೆ ಮಾಡಲು ಸಜ್ಜಾಗಿರುವ ಬಾದ್‍ಷಾ ಗೆ ಗೆಲುವು ದಕ್ಕುತ್ತಾ? ಪಠಾಣ್, ಜವಾನ್ ಗೆ ಸಿಕ್ಕಂತಹ ಯಶಸ್ಸು ಪ್ಲಸ್ ಸಕ್ಸಸ್ ಸಿಗುತ್ತಾ? ಕಾದು ನೋಡಬೇಕು.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಲಿಯೋ `LCU’… ಆಡಿಯನ್ಸ್ `ICU’ ಎಂದ ಮನೋಬಲ ವಿಜಯಬಾಲನ್!

ಲಿಯೋ `LCU'... ಆಡಿಯನ್ಸ್ `ICU' ಎಂದ ಮನೋಬಲ ವಿಜಯಬಾಲನ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.