ಮೆಗಾಸ್ಟಾರ್ ಚಿರಂಜೀವಿ-ರಾಮ್‍ಚರಣ್ ಕಾಂಬಿನೇಷನ್ ಸಿನಿಮಾಗೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋದು ಹೊಸ ಸುದ್ದಿಯೇನಲ್ಲ. ಆದರೆ, ಈ ಮೆಗಾ ಸಿನಿಮಾದ ಬಗ್ಗೆ ಮೇರು ಪರ್ವತದಷ್ಟೇ ನಿರೀಕ್ಷೆಯಿದೆ. ಚೆರ್ರಿ ಬರ್ತ್‍ಡೇ ಸಂಭ್ರಮದಲ್ಲಿ ಭಾಗಿಯಾದ ಅದೊಂದು ಫೋಟೋ ಇವತ್ತಿಗೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಅದನ್ನು ನೋಡಿದಾಗಲೆಲ್ಲಾ ಮೆಗಾ ಅಭಿಮಾನಿಗಳು, ನೀಲ್ ಸಾಹೇಬ್ರು ಅದ್ಯಾವಾಗ ಫ್ರೀ ಆಗ್ತಾರೆ. ಯಾವಾಗ ನಮ್ಮ ಮೆಗಾಬಾಸ್ ಹಾಗೂ ಮಗಧೀರನ ಜೊತೆಯಾಗಿ ಸಿನಿಮಾ ಮಾಡ್ತಾರೆ ಅಂತ ಕುತೂಹಲ ಹೊರಹಾಕ್ತಾರೆ.
ಅಷ್ಟಕ್ಕೂ, ಒಟ್ಟಿಗೆ ಸಿನಿಮಾ ಮಾಡ್ತಾರಾ? ಮಾಡಿದ್ರೆ ಪ್ರೇಕ್ಷಕಪ್ರಭುವಿಗೆ ಭರ್ಜರಿ ಬಾಡೂಟವೇ ಸರಿ..ಪವರ್ ಹೌಸ್ ಚಿರು..ಸ್ಟೈಲ್ ಕಿಂಗ್ ಚೆರ್ರಿ ಆಕ್ಟಿಂಗ್, ನೀಲ್ ಟೇಕಿಂಗ್..ಒಟ್ಟಿಗೆ ಸೇರಿದ್ರೆ ವಂಡರ್ ಫ್ಲಸ್ ಥಂಡರ್ ಆಗುವ ಸಿನಿಮಾವೇ ಮೂಡಿ ಬರೋದಂತು ಖಚಿತ..ಇದೆಲ್ಲಾ ನಿಜವಾ? ಈ ಕ್ರೇಜಿ ಕಾಂಬೋದ ದುಬಾರಿ ಪ್ರಾಜೆಕ್ಟ್ ಟೇಕಾಫ್ ಆಗುವುದು ಆಫಿಷಲ್ಲಾ? ಹೂಹೂ ಸದ್ಯಕ್ಕೆ ಕೈಗೆಟುಗದ ದ್ರಾಕ್ಷಿ..ಹಾಗಂತ ಈ ಥ್ರಿಲ್ಲಿಂಗ್ ಸಮಾಚಾರವನ್ನು ಕಡೆಗಣಿಸುವ ಮಾತು ಇಲ್ಲವೇ ಇಲ್ಲ..ಯಾಕಂದ್ರೆ ಕಳೆದ ಬಾರಿ ಅದ್ಧೂರಿಯಾಗಿ ನಡೆದಿದ್ದ ಮೆಗಾಸ್ಟಾರ್ ಪುತ್ರನ ಹುಟ್ಟುಹಬ್ಬದಲ್ಲಿ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಣಿಸಿಕೊಂಡು ಎಲ್ಲರೂ ಅಚ್ಚರಿ ಮೂಡಿಸಿದ್ದರು. ತಮ್ಮ ಬಾಲ್ಯದಿಂದಲೂ ಅಚ್ಚುಮೆಚ್ಚಿನ ಪ್ರೀತಿಯ ನಟನೊಂದಿಗೆ ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದ ನೀಲ್ ಸೀಕ್ರೆಟ್ ಖಬರ್ ವೊಂದನ್ನು ರಿವೀಲ್ ಮಾಡಿಬಿಟ್ಟಿದ್ದರು. ಆಸ್ಕರ್ ಗೆದ್ದಿರುವ ಆರ್ ಆರ್ ಆರ್ ಸಿನಿಮಾ ಆ ನಿರ್ಮಾಪಕರಿಗೆ ಟ್ಯಾಗ್ ಮಾಡಿ ರಾಮ್ ಚರಣ್ ಹಾಗೂ ಚಿರಂಜೀವಿ ಒಟ್ಟಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲಿಗೆ ಈ ಕ್ರೇಜಿ ಕಾಂಬೋದಲ್ಲೊಂದು ಸಿನಿಮಾ ಬರೋದು ಪಕ್ಕ
ಮೆಗಾಸ್ಟಾರ್ ಚಿರಂಜೀವಿಗೆ ಮಲ್ಟಿಸ್ಟಾರ್ ಸಿನಿಮಾ ಮಾಡ್ಬೇಕು. ಅದು ತಮ್ಮ ಪ್ರೀತಿಯ ಪುತ್ರ ರಾಮ್ ಚರಣ್ ಜೊತೆಯಲ್ಲಿ ಎಂಬ ಏಕೈಕ ಕನಸಿದೆ. ಆ ಕನಸ್ಸು ಆಚಾರ್ಯ ಮೂಲಕ ನನಸಾಗಲಿದೆ ಎಂಬ ಬೆಟ್ಟದಷ್ಟು ಭರವಸೆ ಇತ್ತು. ಆದ್ರೆ ಆಚಾರ್ಯ ಆಕಾಶ ನೋಡ್ತು..ಕಲೆಕ್ಷನ್ ಮಾತು ಇರಲಿ ಹಣ ಹಾಕಿದ್ದ ಚೆರ್ರಿ ಜೇಬು ಸುಟ್ಟುಕೊಂಡಿದ್ದರು. ಆಚಾರ್ಯ ಸೋಲಿನ ಸುಳಿಗೆ ಸಿಲುಕಿತ್ತು. ವಿತರಕರು ಕಂಗಾಲಾಗಿದ್ರು. ಚಿರಂಜೀವಿಯೇ ಈ ಸಮಸ್ಯೆಗೆ ಒಂದು ಅಂತ್ಯ ಹಾಡಿದ್ದರು. ಆಚಾರ್ಯ ಮುಗಿತು..ಮಗನ ಜೊತೆ ಮಲ್ಟಿಸ್ಟಾರ್ ಸಿನಿಮಾ ಮಾಡಬೇಕೆಂಬ ಕನಸಿಗೆ ಜೀವ ಕೊಡೋದಿಕ್ಕೆ ಅವ್ರೇ ಸರಿ ಎಂಬ ಮಾತು ಮೆಗಾ ಅಭಿಮಾನಿಗಳ ಆಸೆ.ಅಷ್ಟಕ್ಕೂ ಅವ್ರೇ ಸಲಾರ್ ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್.
ಉಗ್ರಂ..ಕೆಜಿಎಫ್ ಸರಣಿ ಸಿನಿಮಾ ಮೂಲಕ ಪ್ರಶಾಂತ್ ನೀಲ್ ತಮ್ಮ ತಾಕತ್ತು ತೋರಿಸಿದ್ದಾರೆ. ಈ ಡೈರೆಕ್ಟರ್ ನ ಮತ್ತೊಂದು ವಿಷನ್ ಸಲಾರ್ ಗಾಗಿ ಡಾರ್ಲಿಂಗ್ ಡೈಹಾರ್ಡ್ಸ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಟೀಸರ್ ಮೂಲಕ ಮ್ಯಾಜಿಕ್ ಮಾಡಿರುವ ನೀಲ್ ಪಿಕ್ಚರ್ಸ್ ಅಭಿ ಬಾಕಿ ಹೈ ಅಂತಿದ್ದಾರೆ. ಪ್ರಶಾಂತ್ ನೀಲ್ ಅವ್ರು ಯಾವುದನ್ನೂ ಹೇಳೋದಿಲ್ಲ. ಮಾಡಿ ತೋರಿಸ್ತಾರೆ. ಕೆಲಸದ ಮೇಲಿನ ಅವ್ರ ಶ್ರದ್ಧೆ, ಕಥೆ ಪ್ರೆಸೆಂಟ್ ಮಾಡುವ ರೀತಿ, ಮೇಕಿಂಗ್ ಸ್ಟೈಲ್ ಎಲ್ಲವೂ ಭಿನ್ನ ವಿಭಿನ್ನ..ಸದ್ಯಕ್ಕೆ ಸೌತ್ ಸಿನಿರಂಗದಲ್ಲಿ ಬೇಡಿಕೆ ನಿರ್ದೇಶಕರಲ್ಲಿ ಎರಡೇ ಸ್ಥಾನ ಕಬ್ಜ ಮಾಡಿದ್ದಾರೆ ಪ್ರಶಾಂತ್ ನೀಲ್.
ರಾಜಮೌಳಿ ಸಿನಿಮಾದಷ್ಟೇ ಕ್ರೇಜು ಪ್ರಶಾಂತ್ ನೀಲ್ ಚಿತ್ರಗಳಿಗಿದೆ. ನೀಲ್ ಸಿನ್ಮಾಗಳನ್ನು ಪ್ರೇಕ್ಷಕ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಈ ಮಟ್ಟಿಗೆ ಸಿನಿರಸಿಕರನ್ನು ಸೆಳೆದಿರುವ ಕೆಜಿಎಫ್ ಸೃಷ್ಟಿಕರ್ತ ಮೆಗಾಸ್ಟಾರ್ ಚಿರಂಜೀವಿ ಮಲ್ಟಿಸ್ಟಾರ್ ಸಿನಿಮಾ ಕನಸಿನ ಕೂಸಿಗೆ ಸಾಥ್ ಕೊಡ್ತಾರಾ? ರಾಮ್-ನೀಲ್-ಚಿರು ಸಂಗಮದಲ್ಲಿ ಚಿತ್ರ ಬರೋದು ಖಚಿತವಾ? ಖಚಿತವಾದ್ರೆ ಯಾವಾಗಾ? ಅನ್ನೋದು ಸದ್ಯಕ್ಕೆ ಮೆಗಾ ಫ್ಯಾನ್ಸ್ ಪ್ರಶ್ನೆ..ಈ ಕ್ರೇಜಿ ಕಾಂಬಿನೇಷನ್ ನಲ್ಲಿ ಸಿನಿಮಾ ಬರಬಹುದು. ಬಟ್ ಸದ್ಯಕ್ಕಂತೂ ಅಸಾಧ್ಯ..ಸಲಾರ್ ಸೀಸ್ ಫೈರ್ ಬಳಿಕ ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಜೊತೆ ಸಿನಿಮಾ ಮಾಡ್ತಾರೆ. ಮುಂದಿನ ವರ್ಷ ಈ ಚಿತ್ರ ಸೆಟ್ಟೇರಲಿದೆ. ಆ ಬಳಿಕ ಸಲಾರ್ ಪಾರ್ಟ್-2.. ಆ ನಂತ್ರ ಬೇರೆ ಸಿನಿಮಾಗಳನ್ನು ನೀಲ್ ಒಪ್ಪಿಕೊಳ್ಳಲಿದ್ದಾರೆ ಅಪ್ಪ-ಮಗನ ಚಿತ್ರಕ್ಕೆ ಓಂಕಾರ ಹಾಕಬಹುದು..
ರಾಮ್ ಚರಣ್ ಕೂಡ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತ್ರ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಎರಡು ಸಿನಿಮಾಗಳ ಮುಗಿದ ಬಳಿಕ ಚೆರ್ರಿ 17ನೇ ಪ್ರಾಜೆಕ್ಟ್ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಬಹುದು ಅಂತಿವೇ ಟಾಲಿವುಡ್ ಇಂಡಸ್ಟ್ರೀ ಮೂಲಗಳು..ಮೆಗಾಸ್ಟಾರ್ ಚಿರಂಜೀವಿಗಾರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡೋದಿಕ್ಕೆ ಎಕ್ಸೈಟ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇಬ್ಬರು ಸೂಪರ್ ಸ್ಟಾರ್ಸ್ ಹಾಕಿಕೊಂಡು ಕೆಜಿಎಫ್ ನಿರ್ದೇಶಕ ಸಿನಿಮಾ ಮಾಡೋದಂತು ನಿಶ್ಚಿತ. ಅದೆಲ್ಲದಕ್ಕೂ ಒಂದೊಳ್ಳೆ ಟೈಮ್ ಬರಬೇಕು..ರಾಮ್ ಹಾಗೂ ಮೆಗಾ ಕಾಂಬೋಗೆ ನೀಲ್ ಬೇಗ ಆಕ್ಷನ್ ಕಟ್ ಹೇಳಿ ಅಂತಿದ್ದಾರೆ ಮೆಗಾ ಫ್ಯಾಮಿಲಿ ಫ್ಯಾನ್ಸ್..