ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪ್ರೀತಿಯ ಪುತ್ರಿ ಐಶ್ವರ್ಯ ಸರ್ಜಾ ಹೊಸ ಬಾಳಿಗೆ ಅಡಿ ಇಡಲಿದ್ದಾರೆ. ಸರ್ಜಾ ಕುಟುಂಬದಲ್ಲಿ ಶೀಘ್ರದಲ್ಲಿಯೇ ಮಂಗಳವಾದ್ಯ ಮೊಳಗಲಿದೆ. ತಮಿಳಿನ ಖ್ಯಾತ ಹಾಸ್ಯ ನಟ ರಾಷ್ಟ್ರಪ್ರಶಸ್ತಿ ವಿಜೇತ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯ ಸರ್ಜಾ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ.

ಐಶ್ವರ್ಯ ಹಾಗೂ ಉಮಾಪತಿ ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದು, ಪೋಷಕರು ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಹುಕಾಲ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಈ ಜೋಡಿ ಅಣಿಯಾಗಿದ್ದಾರೆ.. ಅದರ ಮೊದಲ ಹೆಜ್ಜೆ ಏನ್ನುವಂತೆ ಈ ಸರ್ಜಾ ಪುತ್ರಿ ಐಶ್ವರ್ಯ ಹಾಗೂ ರಾಮಯ್ಯ ಪುತ್ರ ಉಮಾಪತಿ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಆಪ್ತರ ಸಮ್ಮುದಲ್ಲಿ ಬಹಳ ನಿಶ್ಚಿತಾರ್ಥದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದ್ದು, ಧ್ರುವ ಸರ್ಜಾ ಮಾವನ ಮಗಳ ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಿದ್ದಾರೆ.

ತಮಿಳಿನ ಪಟ್ಟತ್ತು ಯಾಣೈ ಸಿನಿಮಾ ಮೂಲಕ ಬಣ್ಣದ ಬದುಕು ಶುರು ಮಾಡಿದ್ದ ಐಶ್ವರ್ಯ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಹೊಸ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಆಕ್ಷನ್ ಕಿಂಗ್ ಸುಪುತ್ರಿ ಮದುವೆಗೂ ಸಮ್ಮತಿ ಸೂಚಿಸಿದ್ದಾರೆ. ಸದ್ಯ ಉಂಗುರ ಬದಲಿಸಿಕೊಂಡಿರುವ ಐಶ್ವರ್ಯ ಉಮಾಪತಿ ಕಲ್ಯಾಣೋತ್ಸವ ಯಾವಾಗ ಅಂತಾ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ,.





