ಸೋಮವಾರ, ಜುಲೈ 27, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ನೆಂಟ್ರುನ್ನೆಲ್ಲಾ ಕರ್ಕೊಂಡು ಬಂದ್ಬಿಡಿ…. `ಕನ್ನಡ ರಾಜ್ಯೋತ್ಸವ’ದಂದು ಕನ್ನಡಿಗರಿಗೆ ಡಾಲಿ ಕರೆ!

Vishalakshi Pby Vishalakshi P
01/11/2023
in Majja Special
Reading Time: 4 mins read
ನೆಂಟ್ರುನ್ನೆಲ್ಲಾ ಕರ್ಕೊಂಡು ಬಂದ್ಬಿಡಿ…. `ಕನ್ನಡ ರಾಜ್ಯೋತ್ಸವ’ದಂದು ಕನ್ನಡಿಗರಿಗೆ ಡಾಲಿ ಕರೆ!

ಕರುನಾಡ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ `ಟಗರು ಪಲ್ಯ’ ವಿಜಯೋತ್ಸವವೂ ಜೋರಾಗಿದೆ. ಡಾಲಿ ಧನಂಜಯ್ ಬಂಡವಾಳ ಹೂಡಿ ನಿರ್ಮಿಸಿದ `ಟಗರು ಪಲ್ಯ’ ಸಿನಿಮಾವನ್ನು ಕನ್ನಡಿಗರು ಕೈ ಹಿಡಿದಿದ್ದಾರೆ. ಬಡವರು ಮಕ್ಕಳು ಬೆಳಿಬೇಕು ಎನ್ನುವ ಮನೋಭಾವ ಇಟ್ಕೊಂಡಿರುವ ಅರಸೀಕೆರೆಯ ಅರಸ ಸಿನಿಮಾಗೆ ಬಹುಪರಾಕ್ ಹಾಕಿದ್ದಾರೆ. ವಿಶೇಷ ಅಂದರೆ ನಾಟಿ ಸ್ಟೈಲ್‍ನಲ್ಲಿ ತಯಾರಾಗಿ ಥಿಯೇಟರ್ ಗೆ  ಬಂದ ಟಗರು ಪಲ್ಯ ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟಿದೆ. ಗಂಧದಗುಡಿಯಲ್ಲಿ ಘಮ್ಮೆಂದ ಟಗರು ಪಲ್ಯಕ್ಕೆ ಈಗ ಅಕ್ಕ-ಪಕ್ಕದ ರಾಜ್ಯದಿಂದಲೂ ಬೇಡಿಕೆ ಸೃಷ್ಟಿಯಾಗಿದೆ. ಜಾಲಿರೆಡ್ಡಿಯಣ್ಣ ಟಗರು ಪಲ್ಯ ರೈಟ್ಸ್ ನಮಗೆ ಕೊಡಣ್ಣ ಅಂತ ಕ್ಯೂ ನಿಲ್ಲುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಕ್ಕೆಲ್ಲಾ ಕಾರಣ ನಮ್ ಕನ್ನಡಿಗರು ಎನ್ನುವ ಡಾಲಿ ಧನಂಜಯ್, ಕರುನಾಡ ಅಂಗಳದಲ್ಲಿ ವಿಜಯಯಾತ್ರೆ ಆರಂಭಿಸಿದ್ದಾರೆ. ಕೈ ಹಿಡಿದವರಿಗೆ ಎರಡು ಕೈ ಎತ್ತಿ ಮುಗಿಯೋಕೆ ಮುತ್ತಿನ ಪಲ್ಲಕ್ಕಿ ಏರಿ ಹೊರಡಲು ತಯಾರಾಗುತ್ತಿದ್ದಾರೆ.

 

 

View this post on Instagram

 

A post shared by Daali Dhananjaya (@dhananjaya_ka)

ಶ್ರೀ ಆದಿಶಕ್ತಿ ಶಿವನಸಮುದ್ರ ಶಿಂಷಾಮಾರಮ್ಮದೇವಿ ದೇವಸ್ಥಾನದಿಂದ `ಟಗರು ಪಲ್ಯ’ ವಿಜಯಯಾತ್ರೆ ಆರಂಭಿಸಿದ್ದಾರೆ. ಕೊಳ್ಳೆಗಾಲ, ಮಳವಳ್ಳಿ, ಬೆಳಕವಾಡಿ, ಮಂಡ್ಯ, ಮೈಸೂರು ಒಳಗೊಂಡಂತೆ ಮುಖ್ಯ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗಕ್ಕೆ ಭೇಟಿಕೊಟ್ಟು `ಟಗರು ಪಲ್ಯ’ ಸಕ್ಸಸ್ ಸಂಭ್ರಮಿಸಲು ಪ್ಲ್ಯಾನ್ ರೂಪಿಸಿರುವ ಡಾಲಿ ಧನಂಜಯ್, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಿಗರಿಗೆ ಕರೆಕೊಟ್ಟಿದ್ದರು. ನೆಂಟ್ರುನ್ನೆಲ್ಲಾ ಕರ್ಕೊಂಡು ಥಿಯೇಟರ್ ಗೆ ಬಂದು ಸಿನಿಮಾ ನೋಡುವಂತೆ ತಿಳಿಸಿದರು. ಶಿವಮೊಗ್ಗ ಭಾರತ್ ಸಿನಿಮಾಸ್ ಹಾಗೂ ಮೈಸೂರು ಡಿಆರ್‍ಸಿ ಸಿನೆಮಾಸ್ ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳ ಮಾಲೀಕರು ರಾಜ್ಯೋತ್ಸವದ ಪ್ರಯುಕ್ತ ದಿನವಿಡಿ `ಟಗರು ಪಲ್ಯ’ ಶೋ ಕೊಟ್ಟಿದ್ದಾರೆ. ಹಬ್ಬದ ಪ್ರಯುಕ್ತ ರಜೆ ಇರುವ ಕಾರಣಕ್ಕೆ ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು `ಟಗರು ಪಲ್ಯ’ ಟೇಸ್ಟ್ ಮಾಡಿದ್ದಾರೆ.

 

 

View this post on Instagram

 

A post shared by Daali Dhananjaya (@dhananjaya_ka)

ಒಟ್ನಲ್ಲಿ ಟಗರು ಪಲ್ಯ ಕನ್ನಡ ಕಲಾಭಿಮಾನಿಗಳಿಗೆ ರುಚಿಸಿದೆ. ನಾಗಭೂಷಣ್, ಅಮೃತಾ ಪ್ರೇಮ್ ಜೋಡಿಗೆ ದೃಷ್ಟಿ ಬಿದ್ದಿದೆ. ತಾರಮ್ಮ, ರಂಗಾಯಣ ರಘು, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಬಿರಾದಾರ್ ಸೇರಿದಂತೆ ಇಡೀ ಪಾತ್ರವರ್ಗಕ್ಕೆ ಶಿಳ್ಳೆಚಪ್ಪಾಳೆಗಳು ಬಿದ್ದಿವೆ. ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ , ಧನಂಜಯ್ ಸಾಹಿತ್ಯ, ಎಸ್ ಕೆ ರಾವ್ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರವಾಗಿರುವ ಟಗರು ಪಲ್ಯ ಸಿನಿಮಾಗೆ ಉಮೇಶ್ ಕೆ ಕೃಪಾ ಆಕ್ಣನ್ ಕಟ್ ಹೇಳಿದ್ದು, ಮೊದಲ ಹೆಜ್ಜೆಯಲ್ಲಿ ಇವರು ಗೆದ್ದಿದ್ದಾರೆ. ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ತೆರೆಗೆ ಬಂದ ಹಳ್ಳಿ ಸೊಗಡಿನ ಟಗರು ಪಲ್ಯ ಫ್ಯಾಮಿಲಿ ಹಿಟ್ ಆಗಿದೆ. ಬಡವ ರಾಸ್ಕಲ್, ಹೆಡ್‍ಬುಷ್ ನಂತರ ಟಗರು ಪಲ್ಯ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿರೋ ಜಾಲಿರೆಡ್ಡಿ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದಿಷ್ಟು ಒಳ್ಳೆ ಸಿನಿಮಾ ನೀಡಲಿ. ಕನ್ನಡಿಗರಿಗೆ ಮನರಂಜನೆ ನೀಡುತ್ತಾ, ಬಡವರ ಮಕ್ಕಳನ್ನು ಬೆಳೆಸುತ್ತಾ ತಾವು ಬೆಳೆಯುತ್ತಿರುವ ಡಾಲಿಗೆ ಒಳ್ಳೆದಾಗಲಿ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅದ್ಧೂರಿಯಾಗಿ ಸೆಟ್ಟೇರಿತು ಪ್ರಜ್ವಲ್ ದೇವರಾಜ್ ಹೊಸಚಿತ್ರ  ‘ಚೀತಾ’!

ಅದ್ಧೂರಿಯಾಗಿ ಸೆಟ್ಟೇರಿತು ಪ್ರಜ್ವಲ್ ದೇವರಾಜ್ ಹೊಸಚಿತ್ರ  ‘ಚೀತಾ’!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.