ಭಾರತೀಯ ಚಿತ್ರರಂಗದ ಜನಪ್ರಿಯ ನಟ ಉಳಗನಾಯಗನ್ ಕಮಲ್ ಹಾಸನ್ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ತಮ್ಮ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ತಾರೆಯರ ಸಮಾಗಮವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಕಮಲ್ ಹಾಸನ್ ಅವ್ರ ಬರ್ತ್‍ಡೇಯಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್, ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ, ದಳಪತಿ ವಿಜಯ್, ವಿಷ್ಣು ವಿಶಾಲ್, ಸುಹಾಸಿನಿ ಮಣಿರತ್ನಂ, ಖುಷ್ಬೂ, ಲೋಕೇಶ್ ಕನಗರಾಜ್ ಸೇರಿದಂತೆ ಹಲವು ಸ್ಟಾರ್ ನಟ- ನಟಿಯರು, ನಿರ್ದೇಶಕರು, ನಿರ್ಮಾಪಕರು ಭಾಗಿಯಾಗಿ ಉಳಗನಾಯಗನ್ ಬರ್ತ್‍ಡೇನಾ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ.

ಇತ್ತ ಕಮಲ್ ಹಾಸನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ದೇ ತಡ ಅವರಿಬ್ಬರ ಕಾಂಬಿನೇಷನ್ ಸಿನಿಮಾ ಸುದ್ದಿ ಸಖತ್ತಾಗೇ ಸೌಂಡ್ ಮಾಡ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ಇಬ್ಬರು ಮುಖಾಮುಖಿಯಾದಾಗಲೇ ಇಬ್ಬರ ಜುಗಲ್ ಬಂಧಿಯ ಚಿತ್ರದ ಬಗ್ಗೆ ನ್ಯೂಸ್ ಕ್ರಿಯೇಟ್ ಆಗಿತ್ತು. ಇದೀಗ, ಕಮಲ್ ಹಾಗೂ ಕರುನಾಡ ಚಕ್ರವರ್ತಿ ಕೈ ಜೋಡಿಸೋದು ಪಕ್ಕಾ ಎನ್ನಲಾಗ್ತಿದೆ. ಉತ್ತಮ್ ವಿಲನ್ ಹುಟ್ಟುಹಬ್ಬದಂದು ಘೋಷಣೆಯಾಗಿರುವ `ಥಗ್ ಲೈಫ್’ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಸ್ಪೆಷಲ್ ಅಪಿಯರೆನ್ಸ್ ಇರಲಿದೆ ಎನ್ನುವ ಸುದ್ದಿ ಬಿಗ್ ಬ್ರೇಕಿಂಗ್ ನ್ಯೂಸ್ ಪ್ಲೇಟ್‍ಗೆ ಬಿದ್ದಿದೆ.

ಅಂದ್ಹಾಗೇ, `ಜೈಲರ್’ ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೇಲೆ ಪರಭಾಷಾ ಮಂದಿಯ ಕಣ್ಣು ಬಿದ್ದಿದೆ. ಐದು ನಿಮಿಷದಲ್ಲಿ ಜೈಲರ್‍ನೇ ನುಂಗಿ ಹಾಕಿದ ನರಸಿಂಹನ ನೋಡಿ ಸೌತ್-ನಾರ್ತ್ ಮಂದಿ ಥಂಡಾ ಹೊಡೆದಿದ್ದರೆ. ಹೇಗಾದ್ರೂ ಮಾಡಿ ಮಾಸ್ ಲೀಡರ್ ಕಾಲ್‍ಶೀಟ್ ಗಿಟ್ಟಿಸಿಕೊಳ್ಳಬೇಕು ಅಂತ ಕಾಯ್ತಿದ್ದಾರೆ. ಈಗಾಗಲೇ, ಪೃಥ್ವಿರಾಜ್ ಸುಕುಮಾರನ್‍ಗೆ ಶಿವಣ್ಣನ ಕಾಲ್‍ಶೀಟ್ ಸಿಕ್ಕಿದೆ. ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಮಾಸ್ ಲೀಡರ್ ಮುಖಾಮುಖಿಯಾಗ್ತಾರೆನ್ನುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಹೀಗಿರುವಾಗಲೇ ದೊಡ್ಮನೆ ದೊರೆ ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ಹಾಗೂ ಕಮಲ್ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನುವ ಮ್ಯಾಟ್ರು ಹೊಸ ಮೇನಿಯಾ ಸೃಷ್ಟಿಸ್ತಿದೆ.
ವಿಶೇಷ ಅಂದರೆ 37 ವರ್ಷಗಳು ಕಳೆದ ಮೇಲೆ ವಿಷನರಿ ಡೈರೆಕ್ಟರ್ ಮಣಿರತ್ನಂ ಹಾಗೂ ಕಮಲ್ ಹಾಸನ್ ಕೈ ಜೋಡಿಸಿದ್ದಾರೆ. ನಾಯಗನ್ ಚಿತ್ರದ ನಂತರ `ಥಗ್ ಲೈಫ್’ ಸಿನಿಮಾಗಾಗಿ ಒಂದಾಗಿದ್ದಾರೆ. ಈಗಾಗಲೇ ಟೈಟಲ್ ಟೀಸರ್ ಹೊರಬಿದ್ದಿದ್ದು, ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಅಂತಾ ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋದಲ್ಲಿ ಹೈಲೆಟ್ ಆಗಿದೆ. ಪಕ್ಕ ಆಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮಂಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತಿ ನಿರ್ಮಿಸುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಆರ್ ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಾಹಣ ಥಗ್ ಲೈಫ್ ಸಿನಿಮಾದಲ್ಲಿದೆ. 1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.





