ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕುಂಟುತ್ತಲೇ ಫಾರಿನ್‍ ನಿಂದ ಇಂಡಿಯಾಗೆ ಬಂದ ಬಾಹುಬಲಿ! ಮೊಣಕಾಲು ಸರ್ಜರಿ `ಸಲಾರ್’ ಸ್ಪೆಷಲ್ ಸಾಂಗ್ ಕತೆಯೇನು?

Vishalakshi Pby Vishalakshi P
08/11/2023
in Majja Special
Reading Time: 1 min read
ಕುಂಟುತ್ತಲೇ ಫಾರಿನ್‍ ನಿಂದ ಇಂಡಿಯಾಗೆ ಬಂದ ಬಾಹುಬಲಿ! ಮೊಣಕಾಲು ಸರ್ಜರಿ `ಸಲಾರ್’ ಸ್ಪೆಷಲ್ ಸಾಂಗ್ ಕತೆಯೇನು?

ಅಮರೇಂದ್ರ ಬಾಹುಬಲಿಯ ಅಭಿಮಾನಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಸರ್ಜರಿ ಮಾಡಿಸಿಕೊಂಡು ತವರೂರಿಗೆ ವಾಪಾಸ್ಸಾದ ಡಾರ್ಲಿಂಗ್ ಪ್ರಭಾಸ್‍ನ ಕಂಡು ಆನಂದ ಪಡ್ತಿದ್ದಾರೆ. ಆದರೆ, ಸಣ್ಣದಾಗಿ ಆತಂಕ ಇದ್ದೇ ಇದೆ. ಮೊಣಕಾಲು ಸರ್ಜರಿಗೆ ಬಾಸ್ ಯುರೋಪ್‍ಗೆ ಹೋಗಿದ್ದಾರೆ, ಕಂಪ್ಲೀಟ್ ರೆಡಿಯಾಗಿ ಬರ್ತಾರೆ ಅಂತ ಎಲ್ಲರೂ ಅಂದ್ಕೊಂಡಿದ್ದರು. ಆದರೆ, ರೆಬೆಲ್ ಸ್ಟಾರ್ ಪ್ರಭಾಸ್ ಕುಂಟುತ್ತಲೇ ಫ್ಲೈಟ್ ನಿಂದ ಕೆಳಗಿಳಿದಿದ್ದಾರೆ. ಏರ್ ಪೋರ್ಟ್‍ನಲ್ಲಿ ಕುಂಟ್ಕೊಂಟು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು ಫ್ಯಾನ್ಸ್ ಗಾಬರಿಗೊಳಗಾಗಿದ್ದಾರೆ. ಏನಾಯ್ತು ಬಾಸ್? ರಿಕವರಿ ಆಗಲಿಲ್ವಾ ಬಾಸ್ ಅಂತ ಆತಂಕ ವ್ಯಕ್ತಪಡಿಸ್ತಿದ್ದಾರೆ. ಹಾಗಾದ್ರೆ, ಪ್ರಭಾಸ್ ಕಂಪ್ಲೀಟ್ ಆಗಿ ಕ್ಯೂರ್ ಆಗಿಲ್ಲವಾ? ಬಾಕಿ ಉಳಿದಿರೋ ಸಲಾರ್ ಸಾಂಗ್ ಕತೆಯೇನು? ಪ್ರಮೋಷನ್‍ನಲ್ಲಿ ಪ್ರಭಾಸ್ ಭಾಗಿಯಾಗ್ತಾರಾ ಇಲ್ಲವಾ?ಆ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ

ಡಾರ್ಲಿಂಗ್ ಇಂಡಿಯಾಗೆ ಕಂಬ್ಯಾಕ್ ಆಗಿದ್ದಾರೆ. ಫ್ಯಾನ್ಸ್ ಗಿದ್ದ ಚಿಂತೆ ಮಯಾವಾಗಿದೆ. ಸಲಾರ್ ಪ್ರಮೋಷನ್ ಕಥೆ ಏನು? ನಮ್ಮ ಬಾಸ್ ಇಲ್ಲದೇ ಹೇಗೆ ಪ್ರಮೋಷನ್ ಮಾಡ್ತಾರೆ ಪ್ರಶಾಂತ್ ಗಾರು.. ಫಾರಿನ್ ಗೆ ಹಾರಿದ ಪ್ರಭಾಸ್ ಯಾವಾಗ ಬರ್ತಾರೆ? ಹೀಗೆ ನಾನಾ ದಿಕ್ಕಲ್ಲಿ ಯಂಗ್ ರೆಬಲ್ ಸ್ಟಾರ್ ಫ್ಯಾನ್ಸ್ ಯೋಚಿಸಿದ್ದೇ ಯೋಚಿಸಿದ್ದು..ಸಲಾರ್ ಹೈದ್ರಾಬಾದ್ ಏರ್ ಪೋರ್ಟ್ ಗೆ ಲ್ಯಾಂಡ್ ಆಗಿದ್ದು ಆಗಿದೆ. ಪ್ರಭಾಸ್ ವಾಪಸಾತಿ ನೋಡಿ ಡಾರ್ಲಿಂಗ್ ಡೈಹಾರ್ಡ್ ಫ್ಯಾನ್ಸ್ ನಿಟ್ಟುಸಿರುಬಿಟ್ಟಿದ್ದಾರೆ. ಆದ್ರೆ ಸದ್ಯಕ್ಕಂತೂ ಮಿರ್ಚಿ ಬಾಯ್ ಪ್ರಮೋಷನ್ ಅಖಾಡಕ್ಕೆ ಧುಮುಕುವ ಯಾವ ಲಕ್ಷಣ, ಮೂನ್ಸೂಚನೆ ಕಾಣ್ತಿಲ್ಲ.

ಡಾರ್ಲಿಂಗ್-ನೀಲ್ ಕ್ರೇಜಿ ಕಾಂಬೋದ ಆಕ್ಷನ್ ಎಂಟರ್ ಟೈನರ್ ಸಲಾರ್ ಸಿನಿಮಾ ಡಿಸೆಂಬರ್ 22ರಂದು ಬೆಳ್ಳಿಭೂಮಿಯಲ್ಲಿ ದರ್ಬಾರ್ ಶುರು ಮಾಡ್ತಿದೆ. ಒಳ್ಳೆ ಮುಹೂರ್ತ ನೋಡಿ ಹೊಂಬಾಳೆ ನಿರ್ಮಾಣ ಸಂಸ್ಥೆ ತನ್ನ ಮತ್ತೊಂದು ಮೆಗಾ ಪ್ರಾಜೆಕ್ಟ್ ನ್ನು ಕಣಕ್ಕಿಳಿಸ್ತಿದೆ. ಬಡಾ ಸ್ಟಾರ್ ಕ್ಯಾನ್ವಸ್, ಭರ್ಜರಿ ಮೇಕಿಂಗ್, ಭರಪೂರ ಆಕ್ಷನ್ಸ್ ಮಾಸ್ ಮಸಾಲದ ಸಲಾರ್ ಬಾಕ್ಸಾಫೀಸ್ ನಲ್ಲಿ ತೂಫನ್ ಎಬ್ಬಿಸೋದಿಕ್ಕೆ ಏನೇನೂ ಬೇಕು ಅದೆಲ್ಲವನ್ನೂ ಪ್ರಶಾಂತ್ ನೀಲ್ ಮಾಡಿದ್ದಾರೆ..ಇನ್ನೇನೂ ಸಲಾರ್ ಧೂಳ್ ಎಬ್ಬಿಸೋದಿಕ್ಕೆ ಹೆಚ್ಚುಕಮ್ಮಿ ಒಂದೂವರೆ ತಿಂಗಳು ಬಾಕಿ ಉಳಿದಿದೆ. ಇಷ್ಟಾರಲಾಗಲೇ ಪ್ರಮೋಷನ್ ಕಹಳೆ ಮೊಳಗಿಸಬೇಕಿದ್ದ ಚಿತ್ರತಂಡ ಪ್ರಭಾಸ್ ಆಗಮನಕ್ಕೆ ಎದುರು ನೋಡ್ತಿತ್ತು. ವಿದೇಶದಲ್ಲಿ ಬೀಡುಬಿಟ್ಟಿದ್ದ ಯಂಗ್ ರೆಬಲ್ ಸ್ಟಾರ್ ಇಂಡಿಯಾಗೆ ಕಂಬ್ಯಾಕ್ ಆಗಿದ್ದಾರೆ.

ಆದಿಪುರುಷ ಸಿನಿಮಾ ತೆರೆಗೆ ಬಂದ್ಮೇಲೆ ಯಾರ ಕಣ್ಣಿಗೂ ಕಾಣದಂತೆ ಮಿರ್ಚಿ ಹುಡ್ಗ ಯುರೋಪ್ ಗೆ ಹಾರಿಬಿಟ್ಟಿದ್ದರು. ಅದಕ್ಕೆ ಕಾರಣ ಮೊಣಕಾಲು ಸರ್ಜರಿ. ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಆ ಚಿಕಿತ್ಸೆಗಾಗಿ ಯುರೋಪ್ ಗೆ ತೆರಳಿದ್ದರು. ಮೊಣಕಾಲು ಸರ್ಜರಿ ಮುಗಿಸಿ ಎರಡು ತಿಂಗಳು ರಿಸ್ಟ್ ಮಾಡಿ ಮುತ್ತಿನ ನಗರಿ ಹೈದ್ರಾಬಾದ್ ಗೆ ಡಾರ್ಲಿಂಗ್ ವಾಪಸ್ ಆಗಿದ್ದಾರೆ. ಆದ್ರೆ ಕುಂಟುತ್ತಲೇ ಬಂದ ಪ್ರಭಾಸ್ ನೋಡಿ ಆತಂಕವೂ ಹೆಚ್ಚಾಗಿದೆ. ಸದ್ಯಕ್ಕಂತೂ ಡಾರ್ಲಿಂಗ್ ಪ್ರಮೋಷನಲ್ ಆಕ್ಟಿವಿಟೀಸ್ ನಲ್ಲಿ ಪಾಲ್ಗೊಳೋದು ಕಷ್ಟಕಷ್ಟ..ಇಷ್ಟು ನೋವಿನಲ್ಲೆ ರಾಜ್ಯ ರಾಜ್ಯ ಸುತ್ತಿ ಸಲಾರ್ ಪ್ರಚಾರ ಮಾಡೋದು ತುಂಬನೇ ಕಠಿಣ..ಕೆಲ ದಿನಗಳ ಕಾಲ ರೆಸ್ಟ್ ಪಡೆದು ಪ್ರಚಾರದ ಅಖಾಡಕ್ಕೆ ಇಳಿಯಬಹುದು ಮಿಸ್ಟರ್ ಯಂಗ್ ರೆಬಲ್ ಸ್ಟಾರ್.

ಪ್ರಭಾಸ್ ಡೈರೆಕ್ಟ್ ಆಗಿ ಪ್ರಮೋಷನ್ ಕಣಕ್ಕಿಳಿಯೋದಿಲ್ಲ ಎನ್ನುತ್ತಿವೆ ಕೆಲ ಮೂಲಗಳು. ಅದಕ್ಕೆ ಕಾರಣ ಬಾಕಿ ಉಳಿದಿರುವ ಐಟಂ ನಂಬರ್ ಚಿತ್ರೀಕರಣ..ಡಾರ್ಲಿಂಗ್ ಕಾಲು ನೋವು ಇದ್ದಿದ್ದರಿಂದ ಪ್ರಶಾಂತ್ ನೀಲ್ ಐಟಂ ಹಾಡಿನ ಶೂಟಿಂಗ್ ಪೋಸ್ಟ್ ಪೋನ್ ಮಾಡಿದ್ದರಂತೆ. ಮಂಡಿನೋವಿಗೆ ಟ್ರೀಟ್ ಮೆಂಟ್ ಪಡೆದ ಬಳಿಕ ಸಾಂಗ್ ಶೂಟ್ ಮಾಡುವ ತಯಾರಿ ನಡೆದಿತ್ತು ಎನ್ನಲಾಗ್ತಿದೆ. ಕೆಜಿಎಫ್ ಸಿನಿಮಾದ ಮೊದಲ ಅಧ್ಯಾಯದ ಜೋಕೆ ಹಾಡನ್ನು ರಿಲೀಸ್ ಹೊತ್ತೇ ಚಿತ್ರೀಕರಿಸಲಾಗಿತ್ತು. ಥೇಟ್ ಅದೇ ರೀತಿಯಲ್ಲಿ ಸಲಾರ್ ಸಿನಿಮಾದ ಐಟಂ ಹಾಡು ಬಿಡುಗಡೆ ಸನಿಹದಲ್ಲಿರುವ ಟೈಮ್ ನಲ್ಲಿ ಶೂಟಿಂಗ್ ನಡೆಸಲು ಪ್ಲಾನ್ ನಡೆದಿದೆಯಂತೆ. ಆದ್ರೆ ಪ್ರಭಾಸ್ ಹೀಗಿರುವ ಸ್ಥಿತಿ ನೋಡ್ತಿದ್ರೆ ಅದೇಗೆ ಹೇಗೆ ಕುಣಿತಾರೋ ಗೊತ್ತಿಲ್ಲ.

ಕೆಜಿಎಫ್ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದುನಿಲ್ಲಿಸಿದವರೇ ಸಲಾರ್ ಸಿನಿಮಾವನ್ನು ಹಾಜರುಪಡಿಸುವ ಸಾಧ್ಯತೆ ಇದೆ. ಅಖಂಡ ಕೇರಳದ್ಯಾಂತ ಪ್ರಭಾಸ್ ಹಾಗೂ ಪ್ರಶಾಂತ್ ಕನಸನ್ನು ಪೃಥ್ವಿರಾಜ್ ಸುಕುಮಾರ್ ವಿತರಿಸಲಿದ್ದಾರೆ. ಅಂದ್ರೆ ಕೇರಳದಲ್ಲಿ ಸಲಾರ್ ಸಿನಿಮಾ ವಿತರಣೆ ಹಕ್ಕು ಪೃಥ್ವಿರಾಜ್ ಪಾಲಾಗಿದೆ. ಈಗಾಗ್ಲೇ ಕೆಜಿಎಫ್ ಸರಣಿ ಸಿನಿಮಾ ವಿತರಿಸಿ ಸೈ ಎನಿಸಿಕೊಂಡಿರುವ ಪೃಥ್ವಿ ಈಗ ಹೊಂಬಾಳೆ ಮತ್ತೊಂದು ಮೆಗಾ ಹೆಜ್ಜೆಯನ್ನು ಕೇರಳದಾದ್ಯಂತ ಹರಡಲಿದ್ದಾರೆ. ಸಲಾರ್ ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿ ಕಾಯ್ತಿರೋ ಸಿನಿಮಾ. ಅಮರೇಂದ್ರ ಬಾಹುಬಲಿ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಕೆಜಿಎಫ್ ಸೃಷ್ಟಿಕರ್ತ ಕೆತ್ತಿರೋ ಹೊಸ ಲೋಕ ಎನ್ನುವ ಕಾರಣಕ್ಕೆ ಸಲಾರ್ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿ ಬೆಚ್ಚಿಬಿದ್ದು ದಢಕ್ಕನೇ ಎದ್ದುಕೂತಿರೋ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಟ್ರೇಲರ್ ಗಾಗಿ ಕಣ್ಣರಳಿಸಿದೆ. ಡಿಸೆಂಬರ್ 1ಕ್ಕೆ ಸಲಾರ್ ಮೊದಲ ನೋಟ ಹೊರಬೀಳುವ ಸಾಧ್ಯತೆ ಇದೆ. ನೀಲ್ ತಲೆಯಲ್ಲಿ ಏನ್ ಓಡುತ್ತಿದೆಯೋ..? ಅದ್ಯಾವಾಗ ಡೈನೋಸರಸ್ ಪ್ರಪಂಚದ ಝಲಕ್ ನ್ನು ಸಿನಿರಸಿಕರ ಎದುರು ತಂದುನಿಲ್ಲಿಸಿ ಅದ್ಯಾವಾ ಚಮತ್ಕಾರ ಮಾಡ್ತಾರೋ..ಏಳು ಕುಂಡಲವಾಡ ತಿರುಪತಿ ತಿಮ್ಮಪ್ಪನಿಗೆ ಗೊತ್ತು..

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಮಾಸ್ ಮಹಾರಾಜ ರವಿತೇಜ ನಟನೆಯ ‘ಈಗಲ್’ ಸಿನಿಮಾದ ಟೀಸರ್ ರಿಲೀಸ್!

ಮಾಸ್ ಮಹಾರಾಜ ರವಿತೇಜ ನಟನೆಯ ‘ಈಗಲ್’ ಸಿನಿಮಾದ ಟೀಸರ್ ರಿಲೀಸ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.