ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ವಿಚ್ಚೇದನದ ಕುರಿತಾಗಿ ಸುದ್ದಿಯಾಗ್ತಿರೋದು ಇದೇನು ಮೊದಲಲ್ಲ. ಈ ಹಿಂದೆ ಹಲವು ಭಾರಿ ಐಶ್ ಹಾಗೂ ಅಭಿಷೇಕ್ ಡಿವೋರ್ಸ್ ಚರ್ಚೆಯಲ್ಲಿತ್ತು. ಇದೀಗ ಮತ್ತೊಮ್ಮೆ ಬಾಲಿವುಡ್ ತಾರಾಜೋಡಿಯ ವಿಚ್ಚೇದನದ ಸುದ್ದಿ ಮುನ್ನಲೆಗೆ ಬಂದಿದೆ. ಮಗಳು ಹಾಗೂ ಗಂಡನನ್ನು ಬಿಟ್ಟು ಆ ಕಾರ್ಯಕ್ರಮಕ್ಕೆ ಬಂದಿದ್ದೇ ಡಿವೋರ್ಸ್ ಗ್ಯಾರಂಟಿ ಅನ್ನೋ ಸುದ್ದಿಗೆ ಕಾರಣವಾಗಿದೆ.
ಹೌದು, ಮನೆಯಿಂದ ಹೊರಗಡೆ ಬಂದಾಗೆಲ್ಲಾ ಪತಿ ಅಭಿಷೇಕ್ ಹಾಗೂ ಮಗಳು ಆರಾಧ್ಯ ಜೊತೆಯಾಗಿ ಕಾಣಿಸಿಕೊಳ್ತಿದ್ದ ಐಶ್, ಇತ್ತೀಚೆಗೆ ಮಗಳು ಜೊತೆಗೆ ಇಲ್ಲವೇ ಒಬ್ಬಂಟಿಯಾಗಿ ಹೊರಗಡೆ ಬರ್ತಿದ್ದಾರೆ. ಕಳೆದೊಂದು ದಿನದ ಹಿಂದೆ ಪ್ರಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಗೆ ಒಬ್ಬರೇ ಬಂದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಐಶ್ ಜೊತೆಗೆ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳದೇ ಇರೋದು ಡಿವೋರ್ಸ್ ಕೊಡಲಿದ್ದಾರೆನ್ನುವ ವದಂತಿಗೆ ಪುಷ್ಠಿ ಕೊಡ್ತಿದೆ. ಅಷ್ಟಕ್ಕೂ, ಅಸಲಿಯತ್ತೇನು ಎಂಬುದು ತಿಳಿದಿಲ್ಲವಾದರೂ, ಐಶ್ ಸೋಲೋ ವಿಡಿಯೋಗಳು ಡಿವೋರ್ಸ್ ಸುದ್ದಿಗೆ ಸೊಪ್ಪಾಕುತ್ತಿವೆ. ಹೀಗಾಗಿ, ನೆಟ್ಟಿಗರು ನೂರೆಂಟು ಕಮೆಂಟ್ ಮಾಡ್ತಿದ್ದಾರೆ. ಇವರ ಬಾಯಿ ಮುಚ್ಚಿಸೋದಕ್ಕೆ ಐಶ್ ಹಾಗೂ ಅಭಿ ಯಾವಾಗ ಒಟ್ಟಿಗೆ ಕಾಣಿಸಿಕೊಳ್ತಾರೋ ಗೊತ್ತಿಲ್ಲ. ಆದರೆ, ಬಾಲಿವುಡ್ನ ಈ ಸುಂದರ ಜೋಡಿಯ ಸಂಸಾರ ಮುರಿದು ಬೀಳದಿರಲಿ. ಅಭಿಷೇಕ್ ಹಾಗೂ ಐಶ್ವರ್ಯ ದಾಂಪತ್ಯ ಜೀವನ ಸುಖಮಯವಾಗಿರಲಿ ಅನ್ನೋದೇ ಅವರ ಫ್ಯಾನ್ಸ್ ಹಾಗೂ ನಮ್ಮ ಆಶಯ ಕೂಡ





