ಭಾನುವಾರ, ಜುಲೈ 19, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ದೀಪಾವಳಿಗೆ ಕಿಚ್ಚು ಹಚ್ಚಲು ಕುದುರೆ ಏರಿ ಬಂದರಲ್ಲ ಕೋಟಿಗೊಬ್ಬ ಕಿಚ್ಚ !

Vishalakshi Pby Vishalakshi P
11/11/2023
in Majja Special
Reading Time: 1 min read
ದೀಪಾವಳಿಗೆ ಕಿಚ್ಚು ಹಚ್ಚಲು ಕುದುರೆ ಏರಿ ಬಂದರಲ್ಲ ಕೋಟಿಗೊಬ್ಬ ಕಿಚ್ಚ !

ಕರುನಾಡಿನ ಅಂಗಳದಲ್ಲಿ ಈ ಭಾರಿ ದೀಪಾವಳಿ ಸಂಭ್ರಮಾಚರಣೆ ಹೇಗಿರುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಬಳಗವಂತೂ ಈ ಭಾರಿಯ ದೀಪಾವಳಿಯನ್ನ ಅದ್ದೂರಿಯಾಗಿ ಆಚರಣೆ ಮಾಡ್ತಿದೆ. ಹಬ್ಬದ ಸಂಭ್ರಮ ಹೆಚ್ಚಿಸಲಿಕ್ಕೆ ಸ್ಯಾಂಡಲ್‍ವುಡ್ ಬಾದ್ ಷಾ ಕಿಚ್ಚ ಸುದೀಪ್ ಕುದುರೆ ಏರಿ ಬಂದಿದ್ದು, ಕೋಟಿಗೊಬ್ಬನ ಅಭಿಮಾನಿಗಳು ಸರಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಹಿಂದೆಂದೂ ಕಾಣದ ಅವತಾರದಲ್ಲಿ ದರ್ಶನ ಕೊಟ್ಟ ಬಾದ್‍ಷಾ ಕಿಚ್ಚನಿಗೆ ಉಘೇ ಉಘೇ ಎನ್ನುತ್ತಿದ್ದಾರೆ.

Namma Kiccha tere hinde ebbisiruva haavali!#KicchaSudeep anna #BattleOfBreaths poster bandu jasti dina agilla. Ivag nodidre olle jabardast action movie tara kaantidyalla guru!@KicchaSudeep pic.twitter.com/taWVRypx3b

— Kiccha Sudeep Trends™ (@TheSudeepTrends) November 11, 2023

ಇತ್ತೀಚೆಗಷ್ಟೇ ಕಿಚ್ಚನ ಹೊಸ ಲುಕ್-ಗೆಟಪ್‍ನ ಪೋಸ್ಟರ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯುದ್ದಭೂಮಿಯಲ್ಲಿ ನಿಂತು ಸವಾಲ್ ಎಸೆಯೋ ಹೆಬ್ಬುಲಿನಾ ಕಂಡು ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳು ಹುಚ್ಚೇಳುವಂತಾಗಿತ್ತು. ಇದೀಗ ಅದೇ ಲುಕ್‍ನ ಮೇಕಿಂಗ್ ರಿವೀಲ್ ಆಗಿದೆ. ಹಣೆಗೆ ತಿಲಕ ಇಟ್ಕೊಂಡು ಐತಿಹಾಸಿಕ ಸಿನಿಮಾದ ನಾಯಕನ ಅವತಾರವೆತ್ತಿರೋ ಸುದೀಪ್, ಕುದುರೆ ಏರಿ ಸವಾರಿ ಹೊರಟಿರೋ ದೃಶ್ಯಗಳು ಮೇಕಿಂಗ್ ರೂಪದಲ್ಲಿ ಹೊರಬಿದ್ದಿದೆ. ಸದ್ಯ ಸೋಷಿಯಲ್ ಸಾಮ್ರಾಜ್ಯದಲ್ಲಿ ಈ ವಿಡಿಯೋ ಕಿಚ್ಚು ಹಚ್ಚಿದ್ದು, ಇದ್ಯಾವ ಚಿತ್ರದ್ದಿರಬಹುದು ಎನ್ನುವ ಚರ್ಚೆ ಜೋರಾಗಿದೆ.

ನಿಮಗೆಲ್ಲ ಗೊತ್ತಿರುವ ಹಾಗೇ ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ `ಮ್ಯಾಕ್ಸ್’ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕಿಚ್ಚನ 46ನೇ ಸಿನಿಮಾವಾಗಿದ್ದು ವಿಜಯ್ ಕಾರ್ತಿಕೇಯ ಡೈರೆಕ್ಟರ್ ಮಾಡಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಜೊತೆಗೆ ಕೈ ಜೋಡಿಸುವ ಮೂಲಕ ಕಬಾಲಿ ನಿರ್ಮಾಪಕರಾದ ಕಲೈಪುಲಿ ಎಸ್ ಥಾನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿರುವಾಗಲೇ ಮಾಣಿಕ್ಯ ಐತಿಹಾಸಿಕ ನಾಯಕನಾಗಿ ಕಣಕ್ಕಿಳಿದಿರೋ ವಿಡಿಯೋವೊಂದು ವೈರಲ್ ಆಗಿದೆ. ಇನ್ನು, ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಕೆಲವರು ಇದು ಸಿನಿಮಾ ಶೂಟಿಂಗ್ ಅಲ್ಲ, ಜಾಹೀರಾತು ಚಿತ್ರೀಕರಣ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದು ‘ಪ್ರೊ ಕಬ್ಬಡಿ’ ಟೂರ್ನಿ ಪ್ರೋಮೊ ಶೂಟ್ ಎನ್ನುತ್ತಿದ್ದಾರೆ. ಆದರೆ, ಸೆಟ್ ನೊಡಿದರೇ ಸಿನಿಮಾ ಶೂಟಿಂಗ್ ರೀತಿಯೇ ಕಾಣುತ್ತಿದೆ. ಜಾಹೀರಾತುಗಳೂ ಕೂಡ ಕೋಟ್ಯಾಂತರ ಬಂಡವಾಳ ಹಾಕಿ ಶೂಟಿಂಗ್ ಮಾಡುವ ಕಾರಣ ಇದು ಸಿನಿಮಾವೋ, ಜಾಹೀರಾತೋ ಎಂಬುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಸದ್ಯಕ್ಕೆ ಕಿಚ್ಚನ ಕೈಲಿ ಮೂರ್ನಾಲ್ಕು ಸಿನಿಮಾಗಳಿವೆ. ಮ್ಯಾಕ್ಸ್ ನಂತರ ಸುದೀಪ್ ತಮಿಳು ನಿರ್ದೇಶಕ ಚೇರನ್ ಡೈರೆಕ್ಟ್ ಮಾಡಲಿರುವ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ. ರನ್ನನ  47ನೇ ಸಿನಿಮಾವನ್ನ ಚೇರನ್ ನಿರ್ದೇಶಿಸುತ್ತಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕಿಚ್ಚನಿಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚೇರನ್ ನಿರ್ದೇಶಿಸಿ ನಟಿಸಿದ್ದ ‘ಆಟೋಗ್ರಾಫ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆಗ ಸೋಲಿನ ಸುಳಿಗೆ ಸಿಲುಕಿದ್ದ ಕಿಚ್ಚ ಇದೇ ಚಿತ್ರವನ್ನು ಕನ್ನಡದಲ್ಲಿ ರೀಮೆಕ್ ಮಾಡಿ ಸಕ್ಸಸ್ ಕಂಡಿದ್ದರು. ಇದೀಗ ಚೇರನ್ ನಿರ್ದೇಶನದಲ್ಲೇ ಸುದೀಪ್ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಮುಂದಿನ ವರ್ಷಾರಂಭದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

ಇನ್ನು ಆರ್. ಚಂದ್ರು ಕಾಂಬಿನೇಷನ್ ಚಿತ್ರದಲ್ಲೂ ಸುದೀಪ್ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ತಮ್ಮದೇ ನಿರ್ದೇಶನದಲ್ಲಿ KRG ಸ್ಟುಡಿಯೋ ಸಂಸ್ಥೆಗೆ ಒಂದು ಸಿನಿಮಾ ಮಾಡಿ ಕೊಡಲಿದ್ದಾರೆ. ‘ವಿಕ್ರಾಂತ್ ರೋಣ’ ನಂತರ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ ಒಂದು ಕತೆ ಸಿದ್ಧಪಡಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್  ನಲ್ಲಿ ಈ ಹಿಂದೆ ‘ಬಿಲ್ಲ ರಂಗ ಬಾಷ’, ‘ಅಶ್ವತ್ಥಾಮ’ ಸಿನಿಮಾಗಳು ಘೋಷಣೆ ಆಗಿತ್ತು. ಆದರೆ ಯಾವುದು ಸೆಟ್ಟೇರಲಿಲ್ಲ. ಮುಂದೆ ಈ ಜೋಡಿಯಾಗಿ ಯಾವ ಚಿತ್ರಕ್ಕೆ ಮತ್ತೆ ಕೈ ಜೋಡಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ ಸುದೀಪ್ ಮುಂದಿನ ಸಿನಿಮಾ ಲೈನಪ್ ಬಹಳ ಕುತೂಹಲ ಮೂಡಿಸುತ್ತಿದೆ. ಇನ್ನು ಮುಂದೆ ಬೇಗ ಬೇಗ ಸಿನಿಮಾಗಳು ತೆರೆಗೆ ಬರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
‘ಬಾಯ್’ಗಿದೆ ಅಪ್ಪು ಆಶೀರ್ವಾದ: 17ಕ್ಕೆ ತೆರೆ ಮೇಲೆ ಅಬ್ಬರ!

'ಬಾಯ್'ಗಿದೆ ಅಪ್ಪು ಆಶೀರ್ವಾದ: 17ಕ್ಕೆ ತೆರೆ ಮೇಲೆ ಅಬ್ಬರ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.