ಭೀಮ ಬ್ಯಾಡ್ ಬಾಯ್ ಗಾನಬಜಾನ ಗಾಂಧಿನಗರದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಸೈಕ್ ಸಾಂಗ್ ಎಲ್ಲರ ಬಾಯಲ್ಲಿ ಗುನುಗುತ್ತಿದ್ದು, ಇದೀಗ ಬ್ಯಾಡ್ ಬಾಯ್ಸ್ ಕವರ್ ಸಾಂಗ್ ರಿಲೀಸ್ ಆಗಿದೆ. ಬ್ಯಾಡ್ ಬಾಯ್ಸ್ ಕವರ್ ಹಾಡಿಗೆ ಭರತ್ ರಾಜ್ ಡೈರೆಕ್ಷನ್ ಜೊತೆಗೆ ಕೊರಿಯೋಗ್ರಫಿ ಮಾಡಿದ್ದು, ಈ ಸಾಂಗ್ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಸಲಗ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿ ಗೆದ್ದಿರುವ ದುನಿಯಾ ವಿಜಯ್ ಭೀಮನಾಗಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ವಿಭಿನ್ನ ಪಾತ್ರಗಳನ್ನ ಡಿಸೈನ್ ಮಾಡಿರುವ ಬ್ಲಾಕ್ ಕೋಬ್ರಾ, ಅದಕ್ಕಾಗಿಯೇ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವ-ಯುವ ಕಲಾವಿದರನ್ನೂ ಭೀಮನಿಗಾಗಿ ಆಯ್ಕೆ ಮಾಡಿಕೊಂಡು ಒಂದು ರಿಯಲಿಸ್ಟಿಕ್ ಲೋಕವನ್ನ ಕಟ್ಟಿಕೊಟ್ಟಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಮಾಸ್ತಿ ಮಾತು, ಚರಣ್ ರಾಜ್ ಮ್ಯೂಸಿಕ್ ಮ್ಯಾಜಿಕಲ್ ಚಿತ್ರದ ಹೈಲೆಟ್ಸ್ ಗಳಲ್ಲೊಂದು…ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಹಣ ಹಾಕಿರುವ ಭೀಮ ಬೆಳ್ಳಿತೆರೆಗೆ ಬರೋದಿಕ್ಕೆ ಸಕಲ ರೀತಿಯಿಂದ ಅಣಿಯಾಗ್ತಿದ್ದಾರೆ.





