ರೀಲ್ ಲೈಫ್ ಜೋಡಿಗಳು ರಿಯಲ್ ಲೈಫ್‍ನಲ್ಲಿ ಒಂದಾಗೋದು ಹೊಸದೇನಲ್ಲ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಜೊತೆಯಾಗಿ ಮಿಂಚಿದ ಅನೇಕ ತಾರೆಯರು ನಿಜ ಜೀವನದಲ್ಲಿ ಜೊತೆಯಾಗಿ ಸಾಗುತ್ತಿದ್ದಾರೆ. ಈ ಸಾಲಿಗೀಗ ಸುಶ್ಮಿತಾ ಹಾಗೂ ಜಗ್ಗಪ್ಪ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ.
ಸುಶ್ಮಿತಾ ಹಾಗೂ ಜಗ್ಗಪ್ಪ ರಿಯಾಲಿಟಿ ಶೋಗಳಿಂದ ಕರುನಾಡಿಗೆ ಚಿರಪರಿಚಿತರು. ಮಜಾಭಾರತ, ಗಿಚ್ಚಿ ಗಿಲಿ ಗಿಲಿ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಅಭಿನಯಿಸುತ್ತಾ ಇಡೀ ಕರುನಾಡಿಗೆ ಮನರಂಜನೆಯ ಹಬ್ಬದೂಟ ಬಡಿಸಿದ ಈ ಜೋಡಿ ಇದೀಗ ನಿಜ ಜೀವನದಲ್ಲಿ ಒಂದಾಗಿ ಮದುವೆ ಊಟ ಹಾಕಿಸುತ್ತಿದೆ. ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತದ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಸುಶ್ಮಿತಾ ಹಾಗೂ ಜಗ್ಗಪ್ಪ ಸಂಭ್ರಮಿಸುತ್ತಿದ್ದಾರೆ.
ಅಂದ್ಹಾಗೇ, ಇವರಿಬ್ಬರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಕುಟುಂಬಸ್ಥರ ಒಪ್ಪಿಗೆ ಪಡೆದು ಹಸೆಮಣೆ ಏರುತ್ತಿದೆ. ತಮ್ಮ 6 ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಹೊತ್ತಲು ತುದಿಗಾಲಲ್ಲಿ ನಿಂತಿದೆ. ಇಂದು ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದ್ದು, ನಾಳೆ (ನವೆಂಬರ್ 19) ರಂದು ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಮದುವೆ ನಡೆಯಲಿದೆ. ಕಿರುತೆರೆ ಹಾಗೂ ಹಿರಿತೆರೆಯ ಅನೇಕ ತಾರೆಯರು ಸುಶ್ಮಿತಾ ಹಾಗೂ ಜಗ್ಗಪ್ಪ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ವಿಶೇಷ ಅಂದರೆ ಇವರಿಬ್ಬರು ರೀಲ್ ಲೈಫ್‍ನಲ್ಲಿ ಅನೇಕ ಭಾರಿ ಗಂಡ-ಹೆಂಡ್ತಿಯಾಗಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ಅಭಿಮಾನಿಗಳು ನಿಜಜೀವನದಲ್ಲಿ ಜೊತೆಯಾದರೆ ಚೆಂದ ಎನ್ನುವ ಕನಸು ಕಂಡಿದ್ದರು. ಅವರ ಕನಸು ಈಡೇರುತ್ತಿದೆ ಜೊತೆಗೆ ಬಾಳಪಯಣದಲ್ಲಿ ಒಟ್ಟಾಗುತ್ತಿರುವ ಖುಷಿ ಪ್ಲಸ್ ನೆಮ್ಮದಿ ಎರಡು ಸುಶ್ಮಿತಾ ಹಾಗೂ ಜಗ್ಗಪ್ಪನಿಗಿದೆ. ತಾನು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಕಾರಣಾನೇ ಸುಶ್ಮಿತಾ ಅಂತ ಜಗ್ಗಪ್ಪ ಹೇಳಿಕೊಂಡರೆ. ಜಗ್ಗಪ್ಪನಿಂದನೇ ಜನ ನನ್ನ ಗುರ್ತಿಸಿದ್ದು ಅಂತ ಸುಶ್ಮಿತಾ ಹೇಳಿಕೊಳ್ತಾರೆ. ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಪರಸ್ಪರ ಪ್ರೀತಿಸುವ, ಗೌರವಿಸುವ ಈ ಜೋಡಿ ಸದಾ ಹೀಗೆ ಇರಲಿ. ಆದರ್ಶ ದಂಪತಿಗಳಾಗಿ ಎಲ್ಲರಿಗೂ ಮಾಧರಿಯಾಗಲಿ ಅನ್ನೋದೇ ನಮ್ಮೆಲ್ಲರ ಆಶಯ. ಅಡ್ವಾನ್ಸ್ ಹ್ಯಾಪಿ ಮ್ಯಾರೀಡ್ ಲೈಫ್