`ಅನಿಮಲ್’ ಬಾಲಿವುಡ್ ರಾಕ್ಸ್ಟಾರ್ ರಣಬೀರ್ ಕಪೂರ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವೀ. ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಡೈರೆಕ್ಟ್ ಮಾಡಿದ್ದು, ಫಸ್ಟ್ ಟೈಮ್ ರಣಬೀರ್ ಹಾಗೂ ರಶ್ಮಿಕಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ `ಹುವಾ ಮೈನ್’ ಹಾಗೂ `ಸತ್ರಂಗ್’ ಹಾಡುಗಳು ಸಿನಿಮಾ ಪ್ರೇಮಿಗಳಿಗೆ ಕಿಕ್ ಕೊಟ್ಟಿವೆ. ರಣಬೀರ್ ಹಾಗೂ ರಶ್ಮಿಕಾ ಲಿಪ್ಲಾಕ್ ಸೀಕ್ವೆನ್ಸ್ಗಳು ಪಡ್ಡೆಹೈಕ್ಳ ಹಾರ್ಟ್ ಟೆಂಪ್ರೇಚರ್ ಏರಿಸಿದ್ದು, ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ಮಿಸ್ ಮಾಡಿಕೊಳ್ಳದಂತೆ ಕಟ್ಟಿಹಾಕಿವೆ
ಯಸ್, ಅನಿಮಲ್ ಕಣ್ತುಂಬಿಕೊಳ್ಳೋಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 01ರಂದು ವಿಶ್ವದಾದ್ಯಂತ ಅನಿಮಲ್ ಅಖಾಡಕ್ಕೆ ಇಳಿಯುತ್ತಿದ್ದು ಫಿಲ್ಮ್ ಟೀಮ್ ಅದ್ದೂರಿ ಪ್ರಚಾರ ಕೈಗೊಂಡಿದೆ. ದುಬೈನ ಬುರ್ಜ್ ಖಲೀಫಾ ಮೇಲೆ ಟೀಸರ್ ಪ್ರಿವ್ಯೂ ಮಾಡಿ ಪ್ರಮೋಷನ್ಗೆ ಕಿಕ್ ಸ್ಟಾರ್ಟ್ ನೀಡಿರೋ ಚಿತ್ರತಂಡ, ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರು ಹೀಗೆ ಹಲೆವೆಡೆ ಪ್ರಮೋಷನ್ ಮಾಡಲು ಪ್ಲ್ಯಾನ್ ಹಾಕ್ಕೊಂಡಿದೆ. ಸದ್ದಿಲ್ಲದೇ ಹೈದ್ರಾಬಾದ್ಗೆ ಬಂದು ಟಿಟೌನ್ ಲೆಜೆಂಡ್ ಬಾಲಯ್ಯ ನಡೆಸಿಕೊಡುವ `ಅನ್ಸ್ಟಾಪಬಲ್’ ಶೋನಲ್ಲಿ ಪಾಲ್ಗೊಂಡಿದೆ. ಕಾರ್ಯಕ್ರಮದಲ್ಲಿ ಬಾಲಕೃಷ್ಣಗಾರು ರಾಕ್ಸ್ಟಾರ್ ರಣಬೀರ್ ನ ಹಾಡಿಹೊಗಳಿದ್ದಾರೆ. ಚಮಕ್ ಚೆಲ್ವಿ ರಶ್ಮಿಕಾನ ಕಿಚಾಯಿಸೋದ್ರ ಜೊತೆಗೆ ವಿಜಯದೇವರಕೊಂಡಾಗೆ ಕಾಲ್ ಮಾಡಿಸಿ ಕಾಲೆಳೆದಿದ್ದಾರೆ. ಸದ್ಯ, ಪ್ರೋಮೋ ರಿಲೀಸ್ ಆಗಿದ್ದು ಫುಲ್ ಶೋ ನೋಡಲಿಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ.
ಇನ್ನೂ `ಅನಿಮಲ್’ ಚಿತ್ರ ತಂದೆ-ಮಗನ ಸಂಬಂಧದ ಮೇಲೆ ಸಾಗುವ ಸಿನಿಮಾ. ಬ್ಯಾಕ್ಡ್ರಾಪ್ನಲ್ಲಿ ಅಂಡರ್ ವಲ್ರ್ಡ್ ಲಿಂಕ್ ಮಾಡಿ ಫಾದರ್ ಅಂಡ್ ಸನ್ ರಿಲೇಷನ್ಶಿಪ್ನ ಎಕ್ಸ್ ಪ್ಲೋರ್ ಮಾಡಿದ್ದಾರೆ. ಅಪ್ಪನಾಗಿ ಅನಿಲ್ ಕಪೂರ್ ಕಾಣಿಸಿಕೊಂಡರೆ, ಮಗನ ಪಾತ್ರದಲ್ಲಿ ರಣಬೀರ್ ಮಿಂಚಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಲುಕ್ನಲ್ಲಿ ಮೀಸೆ ತಿರುವಿಕೊಂಡು ಅಖಾಡಕ್ಕೆ ಇಳಿದಿರೋ ರಾಕ್ಸ್ಟರ್ ರಣಬೀರ್, `ಅನಿಮಲ್’ ಸಿನಿಮಾ ಮೂಲಕ ಗ್ಯಾಂಗ್ಸ್ಟರ್ ಆಗಿ ಖದರ್ ತೋರಿಸಲು ಹೊರಟಿದ್ದಾರೆ. ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನವಿದ್ದು, ಬಾಬಿ ಡಿಯೋಲ್ ಖಡಕ್ ವಿಲನ್ನಾಗಿ ಧಗಧಗಿಸಿದ್ದಾರೆ. ಸುರೇಶ್ ಓಬೆರಾಯ್, ಶಕ್ತಿಕಪೂರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.
ಸಂಜು ಸಿನಿಮಾದ ನಂತರ ತೆರೆಗೆ ಬಂದ ಶಂಶೇರಾ ಹಾಗೂ ಬ್ರಹ್ಮಾಸ್ತ್ರ ಅಂದುಕೊಂಡ ಮಟ್ಟಿಗೆ ಲಾಭ ತಂದುಕೊಟ್ಟಿಲ್ಲ. ಹೀಗಾಗಿ, ರಣಬೀರ್ `ಅನಿಮಲ್’ ಸಿನಿಮಾ ಮೇಲೆ ಸಾಕಷ್ಟು ಭರವಸೆಯಿಟ್ಟುಕೊಂಡಿದ್ದಾರೆ. ಚಾಕೋಲೇಟ್ ಹೀರೋ ಆಗಿ ಕ್ಲಿಕ್ ಆಗಿರುವ ರಣಬೀರ್ ಈಗ ಮಾಸ್ ಹೀರೋ ಆಗಿ ಮೋಡಿ ಮಾಡಲು ಬರುತ್ತಿದ್ದಾರೆ. ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅನಿಮಲ್ ಸಿನಿಮಾ ನಿರ್ಮಿಸಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅನಿಮಲ್ ಡಿಸೆಂಬರ್ 1 ರಂದು ಅಖಾಡಕ್ಕಿಳಿಯುತ್ತಿದೆ.