ಸಿನಿಮಾ ಜಗತ್ತಿನಲ್ಲಿ ಈಗೇನಿದ್ರು ಪ್ಯಾನ್ ಇಂಡಿಯಾ ಟ್ರೆಂಡ್. ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ಸ್ಗಳಿಂದ ಹಿಡಿದು ಯಂಗ್ ಡೈರೆಕ್ಟರ್ಸ್ ಪ್ಲಸ್ ಯಂಗ್ ಪ್ರೊಡ್ಯೂಸರ್ಸ್ ತನಕ ಎಲ್ಲರೂ ಕೂಡ ಐದೈದು ಭಾಷೆಯಲ್ಲಿ ತಮ್ಮ ಸಿನಿಮಾನ ತೆರೆಗೆ ತರುವ ಉತ್ಸಾಹದಲ್ಲಿದ್ದಾರೆ. ಅಚ್ಚರಿ ಅಂದರೆ ತಮಿಳಿನ ಖ್ಯಾತ ನಿರ್ಮಾಪಕರೊಬ್ಬರು 38 ಭಾಷೆಗಳಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ನಲ್ಲಿದ್ದಾರೆ. ಅದು ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಹೀರೋ ಆಗಿರುವ `ಕಂಗುವ’ ಸಿನಿಮಾ ಅನ್ನೋದು ವಿಶೇಷ.
`ಕಂಗುವ’ ಬರೀ ಕಾಲಿವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿರೋ ಸಿನಿಮಾ. ಸಿರುತೈ ಶಿವ ನಿರ್ದೇಶನದಲ್ಲಿ, ಕಾಲಿವುಡ್ನ ಸೆನ್ಸೇಷನಲ್ ಸೂಪರ್ ಸ್ಟಾರ್ ಸೂರ್ಯ ನಟನೆಯಲ್ಲಿ ಮೂಡಿಬರುತ್ತಿರುವ `ಕಂಗುವ’ ಕೇವಲ 2 ನಿಮಿಷ 21 ಸೆಕೆಂಡ್ನ ಟೀಸರ್ನಿಂದಲೇ ಇಡೀ ಸಿನಿಮಾ ಜಗತ್ತನ್ನ ಥಂಡಾ ಹೊಡೆಸಿದೆ. ಒಂದಲ್ಲ…ಎರಡಲ್ಲ… ಬರೋಬ್ಬರಿ ಆರು ಅವತಾರಗಳಲ್ಲಿ ಧಗಧಗಿಸಲಿರೋ ಸೂರ್ಯ, ಪ್ರಳಯರುದ್ರನಾಗಿ ಈಗಾಗಲೇ ಕಿಚ್ಚು ಹಚ್ಚಿದ್ದಾರೆ. ಸೂರ್ಯನಿಗಿಂತ ಒಂದಳತಿ ಹೆಚ್ಚೇ ಎನ್ನುವಂತೆ ಕಣ್ಣಲ್ಲೇ ಕೆಂಡಕಾರಿ ಹಾಲಿವುಡ್ ಲೋಕವೂ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.
`ಕಂಗುವ‘ ಸಿನಿಮಾ ಕೊಚ್ಚಾಮಿ ವಂಶದ ದೊರೆಯ ಕಥೆ ಇದಾಗಿದ್ದು ಕ್ಯೂರಿಯಾಸಿಟಿ ಮೂಡಿಸಿದೆ. ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ತಯಾರಾಗ್ತಿರೋ `ಕಂಗುವ’ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದ್ದು, `ಕಂಗುವ’ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ, ಕಂಗುವವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 38 ಭಾಷೆಗಳಲ್ಲಿ ʼಕಂಗುವʼ ಸಿನಿಮಾ ಬಿಡುಗಡೆ ಮಾಡುತ್ತೇವೆ. ಈ ಪ್ರಯತ್ನವು ಯಶಸ್ವಿಯಾದರೆ, ತಮಿಳು ಚಿತ್ರರಂಗದಲ್ಲಿ ಒಂದು ಅದ್ಭುತ ಬೆಳವಣಿಗೆಯಾಗಲಿದೆ. ‘ಕಂಗುವ’ ಸಿನಿಮಾವನ್ನು 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ನಾವು ಭಿನ್ನ ಮಾದರಿಯ ಮಾರುಕಟ್ಟೆ ಸ್ಟ್ರಾಟೆಜಿಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.
ಅಲ್ಲಿಗೆ ಕಂಗುವ ಕಣ್ಣು ಪ್ಯಾನ್ ವಲ್ರ್ಡ್ ಕಡೆ ನೆಟ್ಟಿರೋದು ಖಾತ್ರಿಯಾಗಿದೆ. ಎಲ್ಲರೂ ಪ್ಯಾನ್ ಇಂಡಿಯಾ ಕಬ್ಜ ಮಾಡಿಕೊಳ್ಳೋದಕ್ಕೆ ನೋಡಿದರೆ ಕಂಗುವ ಟೀಮ್ ಹತ್ತು ಹೆಜ್ಜೆ ಮುಂದಿಟ್ಟು ಪ್ಯಾನ್ ವಲ್ರ್ಡ್ ಕಬಳಿಸೋ ಪ್ರಯತ್ನಲ್ಲಿದೆ. ಸಿನಿಮಾವನ್ನು 2ಡಿ ಮತ್ತು 3ಡಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಸೂರ್ಯ 42 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಕೆ.ಇ.ಜ್ಞಾನವೇಲ್ ರಾಜಾ ಅವರ ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದು, ಬಾಬಿ ಡಿಯೋಲ್, ಜಗಪತಿ ಬಾಬು, ಯೋಗಿ ಬಾಬು, ಕೆ. ಎಸ್, ರವಿಕುಮಾರ್, ಕೋವೈ ಸರಳ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮೂಲಗಳ ಪ್ರಕಾರ ಅಮೆಜಾನ್ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ ಕೊಟ್ಟು ಡಿಜಿಟಲ್ ರೈಟ್ಸ್ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಕಂಗುವ ಚಿತ್ರ 2024ರ ಏಪ್ರಿಲ್ 11ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ