ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಮೈಸೂರಿಗೆ ಬಂದಿಳಿದ ಮಗಧೀರ…ಅರಮನೆ ಅಂಗಳದಲ್ಲಿ `ಗೇಮ್ ಚೇಂಜರ್’ ಚಿತ್ರೀಕರಣ!

Vishalakshi Pby Vishalakshi P
23/11/2023
in Majja Special
Reading Time: 2 mins read
ಮೈಸೂರಿಗೆ ಬಂದಿಳಿದ ಮಗಧೀರ…ಅರಮನೆ ಅಂಗಳದಲ್ಲಿ `ಗೇಮ್ ಚೇಂಜರ್’ ಚಿತ್ರೀಕರಣ!

ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ತೇಜಾ ಮೈಸೂರಿಗೆ ಬಂದಿಳಿದಿದ್ದಾರೆ. ಪ್ರೈವೇಟ್ ಜೆಟ್ ಏರಿ ಹೈದ್ರಾಬಾದ್ ನಿಂದ ಹೊರಟ ಮಗಧೀರ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಲ್ಯಾಂಡ್ ಆಗಿದ್ದಾರೆ. ಏರ್ ಪೋರ್ಟ್‍ನಲ್ಲಿ ಚೆರ್ರಿಗೆ ಅದ್ದೂರಿ ವೆಲ್‍ಕಮ್ ಸಿಕ್ಕಿದ್ದು, ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಜನ ಮುಗಿಬಿದ್ದರು. ಅಷ್ಟಕ್ಕೂ, ಮಗಧೀರ ಮೈಸೂರಿಗೆ ಏಕಾಏಕಿ ಬಂದಿಳಿದಿದ್ದೇಕೆ? ನಿಮ್ಮಿ ಕುತೂಹಲಕ್ಕೆ ಉತ್ತರ ಕೊಡಬೇಕು ಅಂದರೆ `ಗೇಮ್ ಚೇಂಜರ್’ ಕಥೆನಾ ಹರವಿಡಲೇಬೇಕು.

ರಾಮ್‍ಚರಣ್ ತೇಜಾ ಈಗ ಬರೀ ಟಿಟೌನ್ ಸೂಪರ್ ಸ್ಟಾರ್ ಆಗಿ ಉಳಿದಿಲ್ಲ ಎಂಬುದನ್ನ ಹೊಸದಾಗಿ ಹೇಳಬೇಕಿಲ್ಲ. ಎಸ್ ಎಸ್ ರಾಜಮೌಳಿ ಕಟ್ಟಿಕೊಟ್ಟ `ಆರ್ ಆರ್ ಆರ್’ ಸಿನಿಮಾದಿಂದ ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ವಲ್ರ್ಡ್ ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಪ್ರೆಸ್ಟಿಜಿಯಸ್ ಅವಾರ್ಡ್ ಆಸ್ಕರ್ ಮುಡಿಗೇರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಗುರ್ತಿಸಿಕೊಂಡಿದ್ದಾರೆ. ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿ ವಿಶ್ವವಿಖ್ಯಾತಿ ಪಡೆದಿರೋ ಮಗಧೀರ `ಗೇಮ್ ಚೇಂಜರ್’ ಎನಿಸಿಕೊಂಡಿದ್ದು ಈಗ ಅದೇ ಹೆಸರಿನ ಸಿನಿಮಾಗೆ ನಾಯಕನಾಗಿದ್ದಾರೆ.

`ಗೇಮ್ ಚೇಂಜರ್’ ರಾಮ್‍ಚರಣ್ ತೇಜಾ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ. ಆರ್ ಆರ್ ಆರ್ ನಂತರ ಮಗಧೀರ ಬಣ್ಣ ಹಚ್ಚಿರೋ ಈ ಸಿನಿಮಾಗಾಗಿ ಆಲ್ ಓವರ್ ಇಂಡಿಯಾ ಫ್ಯಾನ್ಸ್ ಮಾತ್ರವಲ್ಲ ವಿಶ್ವ ಸಿನಿದುನಿಯಾದ ಪ್ರೇಕ್ಷಕರು ಕೂಡ ಕಾದು ಕುಳಿತಿದ್ದಾರೆ. ಇಂಡಿಯನ್, ಅನ್ನಿಯನ್, ರೋಬೋ, ಐ ನಂತಹ ಸೂಪರ್ ಹಿಟ್ ಸಿನಿಮಾಗಳ ಸಾರಥಿ ಎಸ್ ಶಂಕರ್ ನಿರ್ದೇಶನದಲ್ಲಿ `ಗೇಮ್ ಚೇಂಜರ್’ ತಯಾರಾಗುತ್ತಿದ್ದು ನಿರೀಕ್ಷೆ ನೂರು ಪಟ್ಟು ಹೆಚ್ಚಿದೆ. ಕಳೆದ ಐದಾರು ತಿಂಗಳಿಂದ ದೇಶ-ವಿದೇಶಗಳಲ್ಲಿ ಚಿತ್ರೀಕರಣ ನಡೆಸಿರೋ ಗೇಮ್ ಚೇಂಜರ್ ಟೀಮ್ ಈಗ ಸಾಂಸ್ಕøತಿಕ ನಗರ ಮೈಸೂರಿಗೆ ಶಿಫ್ಟ್ ಆಗಿದೆ. ಅರಮನೆ ಅಂಗಳದಲ್ಲಿ ಮಗಧೀರನ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಲಿದೆ.

`ಗೇಮ್ ಚೇಂಜರ್’ ಬಹುಕೋಟಿ ವೆಚ್ಚದ ಸಿನಿಮಾ. ಟಾಲಿವುಡ್‍ನ ಹೆಸರಾಂತ ನಿರ್ಮಾಪಕ ದಿಲ್ ರಾಜು ಈ ಚಿತ್ರಕ್ಕಾಗಿ ಬರೋಬ್ಬರಿ 400 ಕೋಟಿ ಬಂಡವಾಳ ಹೂಡಿದ್ದಾರೆ. ಅದ್ದೂರಿ ಮೇಕಿಂಗ್ ಗೆ ಹೆಸರುವಾಸಿಯಾಗಿರುವ ಎಸ್ ಶಂಕರ್ ಭರ್ಜರಿಯಾಗಿ `ಗೇಮ್ ಚೇಂಜರ್’ ತೆಗೆಯುತ್ತಿದ್ದಾರೆ. ಇದೇ ಮೊದಲ ಭಾರಿಗೆ ಮಗಧೀರ ಹಾಗೂ ಶಂಕರ್ ಷಣ್ಮುಗಂ ಕೈ ಜೋಡಿಸಿದ್ದು ಕುತೂಹಲ ಕೆರಳಿಸಿದೆ. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ರಾಜಕೀಯ ಚದುರಂಗದಾಟದಲ್ಲಿ ಮಗಧೀರ ಹೇಗೆ ಗೇಮ್ ಚೇಂಜರ್ ಆಗುತ್ತಾನೆ ಎಂಬುದನ್ನು ತೋರಿಸೋಕೆ ಹೊರಟಿದ್ದಾರಂತೆ. ಇಲ್ಲಿ ಚರಣ್ ಡಬಲ್ ರೋಲ್ ಪ್ಲೇ ಮಾಡುತ್ತಿದ್ದು, ಐಎಎಸ್ ಆಫೀಸರ್ ಹಾಗೂ ಪೊಲಿಟಿಷಿಯನ್ ಆಗಿ ಖದರ್ ತೋರಿಸಲಿದ್ದಾರಂತೆ.

 

View this post on Instagram

 

A post shared by Shankar Shanmugham (@shanmughamshankar)

ಇನ್ನೂ ಚರಣ್‍ಗೆ ಜೋಡಿಯಾಗಿ ಬಿಟೌನ್ ಬ್ಯೂಟಿ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾಳೆ. ಅಂಜಲಿ, ಜಯರಾಂ, ಸುನಿಲ್, ಶ್ರೀಕಾಂತ್, ಎಸ್.ಜೆ.ಸೂರ್ಯ, ನಾಸರ್, ಸಮುದ್ರಕಣಿ ಸೇರಿದಂತೆ ಅತೀದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಹೈದ್ರಬಾದ್, ವಿಶಾಖಪಟ್ಟಣ್ಣ, ನ್ಯೂಜಿಲ್ಯಾಂಡ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಈಗ ಮೈಸೂರು ಸೇರಿದಂತೆ ಹಲವೆಡೆ `ಗೇಮ್ ಚೇಂಜರ್’ ಕ್ಯಾಪ್ಚರ್ ಆಗ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಒಂದು ಹಾಡಿಗೆ ಬರೋಬ್ಬರಿ 90 ಕೋಟಿ ಎತ್ತಿಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ನಾಟು ನಾಟು ಹಾಡಿನ ದಾಖಲೆನಾ ಮುರಿಯೋದು ಪಕ್ಕಾ ಎನ್ನುವ ನ್ಯೂಸ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೇ ಹೊತ್ತಿಗೆ ಡಿಜಿಟಲ್ ರೈಟ್ಸ್ ದುಬಾರಿ ಮೊತ್ತಕ್ಕೆ ಸೇಲ್ ಆದ ಸುದ್ದಿಯೂ ಹೊರಬಿದ್ದಿತ್ತು. `ಜೀ5′ ಸಂಸ್ಥೆ ಭರ್ತಿ 270 ಕೋಟಿ ಕೊಟ್ಟು ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡಿದೆ ಎನ್ನುವ ಖಬರ್ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದರೆ, ಫಿಲ್ಮ್ ಟೀಮ್ ಕಡೆಯಿಂದ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ರಿವೀಲ್ ಆಗಿಲ್ಲ.

ಸದ್ಯ, ಮೈಸೂರಿನಲ್ಲಿ `ಗೇಮ್ ಚೇಂಜರ್’ ಶೂಟಿಂಗ್ ಅಂತೂ ನಡೀತಿದೆ. ದಿಲ್ ರಾಜು ನಿರ್ಮಾಣದಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ತಮನ್ ಸಂಗೀತ ಸಿನಿಮಾಗಿದ್ದು, ಕ್ರಿಷ್-3, ಜನತಾ ಗ್ಯಾರೇಜ್, ಆಚಾರ್ಯ, ಪೆಟ್ಟಾ ಸೇರಿದಂತೆ ಹಲವು ಬ್ಲಾಕ್‍ಬಸ್ಟರ್ ಸಿನಿಮಾಗಳಿಗೆ ಕ್ಯಾಮೆರಾ ಕೈಚಳಕ ತೋರಿರೋ ತಿರ್ರು `ಗೇಮ್ ಚೇಂಜರ್’ಗೆ ಫ್ರೇಮ್ ಇಟ್ಟಿದ್ದಾರೆ. ಕಾರ್ತಿಕ್ ಸುಬ್ಬರಾಜು ಕಥೆ ಕೆತ್ತಿದ್ದು, ಎಸ್ ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ 26 ವರ್ಷಗಳ ನಂತರ ಇಂಡಿಯನ್ ಸೀಕ್ವೆಲ್‍ಗೆ ಕೈ ಹಾಕಿದ್ದು ಇತ್ತೀಚೆಗೆ ಇಂಡಿಯನ್-2 ಇಂಟ್ರೋ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಹೊರಬಿದ್ದಿರೋ ಇಂಡಿಯನ್-2 ಇಂಟ್ರೋಗೆ ಗ್ರ್ಯಾಂಡ್ ರೆಸ್ಪಾನ್ಸ್ ಸಿಕ್ಕಿದ್ದು, ಬೆಳ್ಳಿಪರದೆ ಮೇಲೆ ಸೇನಾಪತಿ ಸುನಾಮಿ ನೋಡೋದಕ್ಕೆ ಸಿನಿಮಾ ಪ್ರೇಮಿಗಳು ಕಾತುರರಾಗಿದ್ದಾರೆ. ಅಟ್ ದಿ ಸೇಮ್ ಟೈಮ್ ಮಗಧೀರನ ಗೇಮ್ ಚೇಂಜರ್ ಆಟ ನೋಡೋದಕ್ಕೆ ವಲ್ಡ್‍ವೈಡ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಡಾಲಿ ಸಾಥ್… ‘ಲಿಡ್ಕರ್‌’ಗೆ ಡಾಲಿ ಧನಂಜಯ ರಾಯಭಾರಿ!

ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಡಾಲಿ ಸಾಥ್... 'ಲಿಡ್ಕರ್‌'ಗೆ ಡಾಲಿ ಧನಂಜಯ ರಾಯಭಾರಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.