ಗುರುವಾರ, ಜುಲೈ 23, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಯಶ್-19 ಬಗ್ಗೆ ಸ್ವತಃ ಯಶ್ ಕೊಟ್ಟರು ಅಪ್ಡೇಟ್!

Vishalakshi Pby Vishalakshi P
23/11/2023
in Majja Special
Reading Time: 1 min read
ಯಶ್-19 ಬಗ್ಗೆ ಸ್ವತಃ ಯಶ್ ಕೊಟ್ಟರು ಅಪ್ಡೇಟ್!

`ಯಶ್-19′ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿ ಕಾಯ್ತಿರೋ ಸಿನಿಮಾ. ಆದರೆ, ಆ ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಸುಳಿವೇ ಕೊಡ್ತಿಲ್ಲ. ಕೆಜಿಎಫ್ ಚಾಪ್ಟರ್2 ರಿಲೀಸ್ ಆಗಿ ಒಂದೂವರೆ ವರ್ಷಗಳು ಕಳೀತಾ ಬಂತು ಆದ್ರಿನ್ನು ಕೂಡ ಕೆಜಿಎಫ್ ಕಿಂಗ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಿಲ್ಲ. ಬಟ್, ಯಶ್-19 ಬಗ್ಗೆ ದಿನಕ್ಕೊಂದು ಅಪ್ಡೇಟ್ ಗಾಸಿಪ್ ಖಾಲಂನಲ್ಲಿ ಚರ್ಚೆಯಾಗುತ್ತಲೇ ಇದೆ. ಇಂಟ್ರೆಸ್ಟಿಂಗ್ ಅಂದರೆ ಇವತ್ತು ಸ್ವತಃ ಯಶ್ ತಮ್ಮಅಪ್ ಕಮ್ಮಿಂಗ್ ಪ್ರಾಜೆಕ್ಟ್ ಅಪ್ಡೇಟ್ ಕೊಟ್ಟರು. ಲಂಡನ್ನಿಂದ ಬೆಂಗಳೂರಿಗೆ ಬಂದು ಬಿಜಿಎಸ್ ಉತ್ಸವದಲ್ಲಿ ಪಾಲ್ಗೊಂಡ ರಾಕಿಭಾಯ್ ತಮ್ಮ ಬಹುನಿರೀಕ್ಷಿತ ಮುಂದಿನ ಚಿತ್ರದ ಬಗ್ಗೆ ಈ ರೀತಿ ಹೇಳಿಕೊಂಡರು. ಏನ್ ಹೇಳಿದರು ಮಾನ್‍ ಸ್ಟರ್ ಅಂತೀರಾ? ಕಂಪ್ಲೀಟ್ ಆಗಿ ಈ ಸ್ಟೋರಿ ನೋಡಿ

`ಯಶ್-19’ಗಾಗಿ ಇಡೀ ಚಿತ್ರಜಗತ್ತು ಚಾತಕ ಪಕ್ಷಿಯಂತೆ ಕಾಯುತ್ತಿದೆ. ಧೀರ ಸುಲ್ತಾನ ಘೋಷಿಸಲಿರುವ ಅಪ್ ಕಮ್ಮಿಂಗ್ ಸಿನಿಮಾಗಾಗಿ ಕಣ್ಣರಳಿಸಿ ಕೂತಿದೆ. ಸೆಲ್ಫ್ ಮೇಡ್ ಷೆಹಜಾದನ ಮುಂದಿನ ಸಿನಿಮಾ ಹೇಗಿರಬಹುದು? ಅದ್ಯಾರ ಜೊತೆ ಕೈ ಜೋಡಿಸಬಹುದು? ಅದೆನಿಂತಾ ಸಿನಿಮಾ ಮಾಡಬಹುದು ಅಂತ ಬೆರಗುಗಣ್ಣಿನಿಂದ ನೋಡುತ್ತಲೇ ಒಂದೂವರೆ ವರ್ಷ ಕಳೆದಿದ್ದಾರೆ. ಮಾನ್ ಸ್ಟರ್ ಮೊದಲ ನೋಟ ಕಣ್ತುಂಬಿಕೊಳ್ಳಲು ಕಣ್ಣಿಗೆ ಎಣ್ಣೆಬಿಟ್ಟುಕೊಳ್ಳುತ್ತಲೇ ಇದ್ದಾರೆ. ಯುಗಾದಿ, ವರಮಹಾಲಕ್ಮಿ, ಗೌರಿ ಗಣೇಶ, ದಸರಾ, ದೀಪಾವಳಿ ಎಲ್ಲಾ ಹಬ್ಬಗಳು ಮುಗಿದ್ವು. ಇನ್ಯಾವ ಹಬ್ಬಕ್ಕೆ ರಾಕಿಂಗ್ ಸ್ಟಾರ್ ರಾಕಿಂಗ್ ಸುದ್ದಿ ಕೊಡಬಹುದು ಎನ್ನುವ ಪ್ರಶ್ನೆ ಹಾಕ್ಕೊಂಡು ಬೇಸರಗೊಳ್ಳುತ್ತಿರುವ ಹೊತ್ತಲ್ಲೇ ಕಾದು ಕುಳಿತಿರುವ ಚಿತ್ರಪ್ರೇಮಿಗಳಿಗೆ ಕುತೂಹಲ ತಣಿಸಲು ಕೋಟಿ ಕನಸುಗಳ ಸರದಾರ ಸನ್ನದ್ದರಾಗಿದ್ದಾರೆ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ದುಬೈ, ಶ್ರೀಲಂಕಾ, ಮಲೇಷಿಯಾ ಸುತ್ತಿ ಲಂಡನ್ ನಲ್ಲಿ ಟೆಂಟ್ ಹಾಕಿದ್ದಾರೆನ್ನುವ ಸುದ್ದಿ ಇತ್ತೀಚೆಗಷ್ಟೇ ಫ್ಲೈಟ್ ಹತ್ಕೊಂಡು ಗಾಂಧಿನಗರಕ್ಕೆ ಬಂದಿಳಿದಿತ್ತು. ಆದ್ರೀಗ ಸ್ವತಃ ಯಶ್ ಫ್ಲೈಟ್ ಏರಿ ಲಂಡನ್ ನಿಂದ ರಿಟರ್ನ್ ಆಗಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅವರು ಏನ್ ಹೇಳಿದ್ದಾರೆ ಇಲ್ಲಿದೆ ಓದಿ

ಬಿಜಿಎಸ್ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಣ್ತಮ್ಮ “ಹೊಸಬರು ಸಾಕಷ್ಟು ಜನ ಚಿತ್ರರಂಗಕ್ಕೆ ಬರ್ತಿದ್ದಾರೆ. ಎಲ್ಲರ ಸಿನಿಮಾಗಳನ್ನು ನೋಡಿ ಬೆನ್ನುತಟ್ಟಿ. ನಮ್ಮ ಸಿನಿಮಾಗಳನ್ನು ನೋಡಿ ಬೆನ್ನುತಟ್ಟಿದ್ದಕ್ಕೆ ನಾವು ಇಲ್ಲಿದ್ದೀವಿ. ನನಗೆ ಗೊತ್ತು ನೀವೆಲ್ಲಾ ಮುಂದಿನ ಸಿನಿಮಾ ಅಪ್ಡೇಟ್ ಕೇಳ್ತಾ ಇದ್ದೀರಾ. ಒಂದಂತು ಹೇಳ್ತೀನಿ. ನಾನು ಕೂತಿದ್ದೀನಿ ಅಂದ್ರೆ ನೀವು ಕೊಟ್ಟ ಧೈರ್ಯದಿಂದ. ಹಾಗಂತ ರಿಲ್ಯಾಕ್ಸ್ ಆಗಿ ನಾನು ಕೂತಿಲ್ಲ” “ನೀವು ಕೊಟ್ಟ ಸಕ್ಸಸ್ ಜವಾಬ್ದಾರಿ ಅಂತ ತಿಳ್ಕೊಂಡು ಇನ್ನು ಮುಂದೆ ಹೋಗಿ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೆ ನಾನು ಸಿದ್ಧನಾಗುತ್ತಿದ್ದೀನಿ. ಕೆಲಸ ಮಾಡ್ತೀನಿ. ನನಗೆ ಗೊತ್ತು. ತಾಳ್ಮೆ ಇರಲಿ. ನಾನು ಯಾವತ್ತೂ ಅನೌನ್ಸ್ಮೆಂಟ್ ಅಂತ ಹೇಳಲಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗ ಈ ತಿಂಗ್ಳು ಅಪ್ಡೇಟು, ಈ ತಿಂಗ್ಳು ಅಪ್ಡೇಟ್ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಕಮ್ಮಿ ಆಗ್ತಿದೆ. ತಪ್ಪು ಸಂದೇಶ ರವಾನೆಯಾಗ್ತಿದೆ.” “ನಾನೇ ಹೇಳ್ತೀನಿ. ಸರಿಯಾಗಿ ಅಡಿಗೆ ಬೆಂದಮೇಲೆ ಬಡಿಸ್ಬೇಕು. ಮುಂಚೇನೆ ಮಾಡೋದು ನನಗೆ ಇಷ್ಟವಿಲ್ಲ. ತಾಳ್ಮೆ ಇಟ್ಕೊಳ್ಳಿ. ಕಂಡಿತ ನೀವೆಲ್ಲ ಇಷ್ಟಪಡುವಂತಹ ಕೆಲಸ ಆಗುತ್ತದೆ” ಎಂದು ನಟ ಯಶ್ ಹೇಳಿದ್ದಾರೆ.

He spoke about #Yash19

Wait continues !!!!!!!@TheNameIsYash #YashBosspic.twitter.com/5IxlnLeRY8

— MNV Gowda (@MNVGowda) November 23, 2023

ಅಲ್ಲಿಗೆ, ಜಗದಗಲದ ನಿರೀಕ್ಷೆಯನ್ನ ತಣಿಸೋಕೆ ಮಾನ್ಸ್ಟರ್ ದೊಡ್ಡಮಟ್ಟದ ಮಾಸ್ಟರ್ ಪ್ಲ್ಯಾನ್ ಮಾಡಿರೋದಂತೂ ಸತ್ಯ. ಅದೇನು? ಅವರ ಮುಂದಿನ ಸಿನಿಮಾ ಹೇಗಿರಲಿದೆ?ಅದರ ಸಾರಥಿ ಯಾರು? ಯಾವ ಜಾನರ್ನ ಸಿನಿಮಾ? ಎಷ್ಟು ಕೋಟಿ ಬಜೆಟ್? ತಾರಾಗಣದಲ್ಲಿ ಯಾರೆಲ್ಲಾ ಇರ್ತಾರೆ? ನಿರ್ಮಾಣ ಸಂಸ್ಥೆ ಯಾವುದು? ಯಶ್ ನಟನೆಯ ಜೊತೆಗೆ ನಿರ್ಮಾಪಕರು ಆಗ್ತಾರಾ? ಹೀಗೆ ಒಂದಿಷ್ಟು ಪ್ರಶ್ನೆಗಳು ಕಾಡೋದಕ್ಕೆ ಶುರುವಾಗುತ್ತವೆ. ಅದೆಲ್ಲದಕ್ಕೂ ಸದ್ಯಕ್ಕೆ ಉತ್ತರವಿಲ್ಲವಾದ್ರೂ ಕೂಡ `ಯಶ್-19′ ಬಗ್ಗೆ ಬಜಾರ್ನಲ್ಲಿ ಹೀಗೊಂದಿಷ್ಟು ಸುದ್ದಿ ಹರಿದಾಡ್ತಿದೆ.

ಹೌದು, `ಯಶ್-19′ ಸಿನಿಮಾ ಡ್ರಗ್ ಮಾಫಿಯಾ ಕುರಿತಾಗಿರುವ ಸಿನಿಮಾ ಎನ್ನುವ ಬಗ್ಗೆ ಟಾಕ್ ಇದೆ. ಕಡಲ ತಡಿಯ ಪುಟ್ಟ ದ್ವೀಪದಲ್ಲಿ ನಡೆಯುವ ದಂಧೆಯನ್ನು ಬಯಲು ಮಾಡಲು ಕೋಲಾರ್ ಗೋಲ್ಡ್ ಕಿಂಗ್ ಶಪಥ ಕೈಗೊಂಡಿದ್ದು, ಗೋವಾದಿಂದ ಎಲ್ಲೆಲ್ಲಿಗೆ ಡ್ರಗ್ಸ್ ಸಪ್ಲೈ ಆಗ್ತಿದೆಯೋ ಅಲ್ಲೆಲ್ಲಾ ಕಡೆ ಚಿತ್ರೀಕರಣ ನಡೆಸಬೇಕು ಅಂತ ಪ್ಲ್ಯಾನ್ ಮಾಡಿದ್ದಾರಂತೆ. ಹೀಗಾಗಿಯೇ ಯಶ್ ಆಸ್ಟ್ರೇಲಿಯಾದಿಂದ ಮಲೇಷಿಯಾ ತನಕ ಫಾರಿನ್ ಟ್ರಿಪ್ ಮಾಡಿದ್ದು ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಫ್ಯಾಮಿಲಿ ಟ್ರಿಪ್ ಎನಿಸಿದರೂ ಕೂಡ ಲೋಕೇಷನ್ ಹಂಟಿಂಗ್ ರಹಸ್ಯ ರಾಕಿಂಗ್ ವಿದೇಶಿ ಪಯಣದಲ್ಲಿ ಅಡಗಿದೆಯಂತೆ. ಇದಕ್ಕೆ ಸಾಕ್ಷಿಯಾಗಿ ಹಿಂದೊಮ್ಮೆ ಶ್ರೀಲಂಕಾ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ದಿನೇಶ್ ವೀರಕ್ಕೋಡಿಯವರ ಟ್ವೀಟು ವೈರಲ್ ಆಗಿತ್ತು. ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಯಶ್ ಅನುಮತಿ ಪಡೆದಿದ್ದಾರೆನ್ನುವ ಮ್ಯಾಟ್ರು ಹಲ್ಚಲ್ ಎಬ್ಬಿಸಿತ್ತು. ಇದೀಗ ಒಂದಕ್ಕೊಂದು ಲಿಂಕ್ ಸಿಗುತ್ತಿದೆ. ಗೋವಾ ಸಿಎಂ ಅವ್ರನ್ನ ಭೇಟಿಯಾಗಿದ್ದು, ಗ್ಲೋಬಲ್ ಸ್ಟಾರ್ ಆದ್ಮೇಲೆ ಇಡೀ ಜಗತ್ತು ಸುತ್ತಿಬಂದಿದ್ದು, ಗೋವಾದ ಕಡಲತಡಿಯಿಂದಲೇ ತೂಫಾನ್ ಎಬ್ಬಿಸಲಿಕ್ಕಾ ಎನ್ನುವ ಅನುಮಾನ ಈಗೀಗ ದಟ್ಟವಾಗುತ್ತಿದೆ.

`ಯಶ್-19′ ಚಿತ್ರಕ್ಕೆ ಮಲೆಯಾಳಂ ನಿರ್ದೇಶಕಿ ಆ್ಯಕ್ಷನ್ ಕಟ್ ಹೇಳಿರೋದು ಪಕ್ಕಾ ಎನಿಸ್ತಿದೆ. ಜೆಜೆ ಪೆರ್ರಿ ಆ್ಯಕ್ಷನ್ ಬ್ಲಾಕ್ ಕಂಪೋಸ್ ಮಾಡ್ತಾರೆನ್ನುವುದಕ್ಕೆ ಲಂಡನ್ ಭೇಟಿಯ ಫೋಟೋವೇ ಸಾಕ್ಷಿಯಾಗ್ತಿದೆ. ಕೆವಿಎನ್ ಸಂಸ್ಥೆ ಜೊತೆ ಈ ಭಾರಿ ನಿರ್ಮಾಣಕ್ಕೂ ಕೈ ಜೋಡಿಸುವ ಮೂಲಕ ಪ್ರೊಡ್ಯೂಸರ್ ಕಮ್ ಆ್ಯಕ್ಟರ್ ಆಗಿ ಕಣಕ್ಕಿಳಿದಿದ್ದಾರಂತೆ. ಒಟ್ನಲ್ಲಿ ನಾನೆಲ್ಲೂ ಹೋಗಲ್ಲ, ಎಲ್ಲರನ್ನೂ ಇಲ್ಲಿಯೇ ಕರೆಸ್ತೀನಿ ಎಂದಿರುವ ಅಣ್ತಮ್ಮ, ಯಾರ್ಯಾರನ್ನ ಎಲ್ಲೆಲ್ಲಿಂದ ಕರೆಸಿ ಲಂಡನ್ನಲ್ಲಿ ಶೂಟಿಂಗ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ, ಚಿತ್ರೀಕರಣ ಶುರು ಎನ್ನುತ್ತಿದೆ ಗಾಸಿಪ್ ಲೋಕ. ಒಂದ್ವೇಳೆ ಈ ಸುದ್ದಿ ನಿಜವಾದರೆ ಲಕ್ಕಿ ತಿಂಗಳು ಡಿಸೆಂಬರ್ನಲ್ಲಿ `ಯಶ್-19′ ಘೋಷಣೆಯಾಗಬಹುದು. ಟೀಸರ್ ಜೊತೆಗೆ ಟೈಟಲ್ ಹೊರಬೀಳಬಹುದು. ಇಲ್ಲವೇ ಶೂಟಿಂಗ್ ಮುಗಿಸಿ ನೇರವಾಗಿ ಸಿನಿಮಾ ರಿಲೀಸ್ ಡೇಟ್ನ ಅನೌನ್ಸ್ ಮಾಡಬಹುದು. ಅಣ್ತಮ್ಮನ ಹುಟ್ಟುಹಬ್ಬಕ್ಕೆ ಸಿನಿಮಾ ಪ್ಯಾನ್ ವಲ್ರ್ಡ್ ಲಗ್ಗೆ ಇಡಬಹುದು. ಈ ಎಲ್ಲಾ ಕುತೂಹಲಕ್ಕೆ ಕೆಜಿಎಫ್ ಕಿಂಗ್ ಉತ್ತರ ಕೊಡಬೇಕು. ಈ ಬಗ್ಗೆ ಸ್ವತಃ ಯಶ್ ಅವ್ರೇ ಮಾತನಾಡಬೇಕು.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
‘ಒನ್ ಅಂಡ್ ಆಫ್’ ಸಿನಿಮಾಗೆ  ಕೆಂಡಸಂಪಿಗೆ ಚೆಲುವೆ ಮಾನ್ವಿತಾ ಹೀರೋಯಿನ್!

‘ಒನ್ ಅಂಡ್ ಆಫ್’ ಸಿನಿಮಾಗೆ ಕೆಂಡಸಂಪಿಗೆ ಚೆಲುವೆ ಮಾನ್ವಿತಾ ಹೀರೋಯಿನ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.