ಕೆಜಿಎಫ್ ಬಂದ್ಮೇಲೆ ಸಿನಿದುನಿಯಾದಲ್ಲಿ ಕಾಂಪಿಟೇಷನ್ ಜೋರಾಗಿದ್ದು, ನಾವು `ಕೆಜಿಎಫ್’ ಥರ ಒಂದು ಮೂವೀ ತೆಗಿಬೇಕು ಅಂತ ಕೆಲವರು ಹೊರಟಿದ್ದು ಕಣ್ಣಮುಂದಿರುವ ಸತ್ಯ. ಅಟ್ ದಿ ಸೇಮ್ ಟೈಮ್ ನಮ್ಮ ಸಿನಿಮಾದಲ್ಲಿ ರಾಕಿಭಾಯ್ ಕೈಲಿಡಿದ ಕಲಾಶ್ನಿಕಾವೋ ಗನ್ ಇರಬೇಕು, ಸಾಧ್ಯ ಆದರೆ ದೊಡ್ಡಮ್ಮನ್ನ ತಂದು ನಮ್ಮ ಮೂವೀ ಅಖಾಡದಲ್ಲಿ ನಿಲ್ಲಿಸಬೇಕು ಅಂತ ಅದೆಷ್ಟೋ ನಿರ್ದೇಶಕರು, ನಿರ್ಮಾಪಕರು ಪ್ರಯತ್ನ ಪಟ್ಟರು. ಇದೀಗ, ಬಾಲಿವುಡ್‍ನ ಬಹುನಿರೀಕ್ಷಿತ `ಅನಿಮಲ್’ ಸಿನಿಮಾದಲ್ಲಿ ಕೆಜಿಎಫ್ ದೊಡ್ಡಮ್ಮನನ್ನೂ ಮೀರಿಸಿದ ಗನ್ ಬಳಕೆ ಮಾಡಲಾಗಿದೆ. ರಾಕ್‍ಸ್ಟಾರ್ ರಣಬೀರ್ ಕೈಗೆ ದೊಡ್ಡ ಗನ್ ಕೊಟ್ಟು ಅಖಾಡಕ್ಕೆ ಇಳಿಸಲಾಗಿದೆ.
ಯಸ್, ನಿನ್ನೆಯಷ್ಟೇ ಹೈವೋಲ್ಟೇಜ್ ಆ್ಯಕ್ಷನ್-ಥ್ರಿಲ್ಲರ್ `ಅನಿಮಲ್’ ಸಿನಿಮಾದ ಟ್ರೇಲರ್ ಹೊರಬಿದ್ದಿದೆ. ಚಾಕಲೇಟ್ ಬಾಯ್ ರಣಬೀರ್ ಕಪೂರ್ ಕ್ಲಾಸ್ ಅಂಡ್ ಮಾಸ್ ಎರಡು ಲುಕ್‍ನಲ್ಲಿ ಕಿಕ್ಕೇರಿಸಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಖದರ್ ತೋರಿಸೋಕೆ ಹೊರಟಿರೋ ರಣಬೀರ್, ದೊಡ್ಡಮ್ಮನಗಿಂತ ದೊಡ್ಡ ಗನ್ ಇಡ್ಕೊಂಡು ಬಂದು ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿದ್ದಾರೆ. ಇದೇ ಮೊದಲ ಭಾರಿಗೆ ಮಚ್ಚು, ಕೊಡಲಿ, ಗನ್ನು ಇಡ್ಕೊಂಡು ಸಿಕ್ಕಾಪಟ್ಟೆ ವೈಲೆಂಟ್ ಆಗಿರೋ ರಣಬೀರ್ ನ ನೋಡಿ, ಫ್ಯಾನ್ಸ್ ಮಾತ್ರವಲ್ಲ ಸಿನಿಮಾ ಮಂದಿ ಕೂಡ ದಂಗಾಗಿದ್ದಾರೆ. `ಅನಿಮಲ್’ ಮಿನಿಮಲ್ ಸಿನಿಮಾ ಅಲ್ಲ ನೆಕ್ಸ್ಟ್ ಲೆವೆಲ್ ಸಿನಿಮಾ ಅಂತ ಮಾತನಾಡಿಕೊಳ್ತಿದ್ದಾರೆ. ಇನ್ನೂ ಯೂಟ್ಯೂಬ್ ಲೋಕದಲ್ಲಿ ಅನಿಮಲ್ ಟ್ರೇಲರ್ ಧೂಳೆಬ್ಬಿಸುತ್ತಿದ್ದು, 24 ಗಂಟೇಲಿ 50 ಮಿಲಿಯನ್ ವೀವ್ಸ್ ರೀಚ್ ಆಗಿದೆ.

ಅಂದ್ಹಾಗೇ, `ಅನಿಮಲ್’ ಚಿತ್ರ ತಂದೆ-ಮಗನ ಸಂಬಂಧದ ಮೇಲೆ ಸಾಗುವ ಸಿನಿಮಾ. ಬ್ಯಾಕ್ ಡ್ರಾಪ್ ನಲ್ಲಿ ಅಂಡರ್ ವಲ್ರ್ಡ್ ಲಿಂಕ್ ಮಾಡಿ ಫಾದರ್ ಅಂಡ್ ಸನ್ ರಿಲೇಷನ್ ಶಿಪ್ ನ ಎಕ್ಸ್ ಪ್ಲೋರ್ ಮಾಡಿದ್ದಾರೆ. ತಂದೆಗಾಗಿ ಏನು ಬೇಕಾದರೂ ಮಾಡುವ ಮಗ, ತಂದೆ ಮೇಲೆ ದಾಳಿ ನಡೆದರೆ ಸುಮ್ಮನಿರುತ್ತಾನಾ? ಆತ ಮೃಗದಂತೆ ತಿರುಗಿ ಬಿದ್ದರೆ ಏನಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಹೇಳುವಂತೆ ಕಾಣುತ್ತಿದೆ. ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್ ಹಾಗೂ ಆತನ ಮಗ ಅರ್ಜುನ್ ಸಿಂಗ್ ಆಗಿ ರಣ್ಬೀರ್ ನಟಿಸಿದ್ದಾರೆ. ಬಾಬಿ ಡಿಯೋಲ್ ಖಡಕ್ ವಿಲನ್ನಾಗಿ ಧಗಧಗಿಸಿದ್ದಾರೆ. ಸುರೇಶ್ ಓಬೆರಾಯ್, ಪ್ರೇಮ್ ಚೋಪ್ರಾ, ರವಿ ಗುಪ್ತಾ, ಶಕ್ತಿಕಪೂರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ನಂತರ ಸಂದೀಪ್ ರೆಡ್ಡಿ ವಾಂಗ ಡೈರೆಕ್ಟ್ ಮಾಡಿರೋ ಈ ಚಿತ್ರ ಹ್ಯಾಟ್ರಿಕ್ ಬಾರಿಸೋ ಲಕ್ಷಣ ಟ್ರೇಲರ್‍ನಿಂದಾನೆ ಸಿಗ್ತಾಯಿದೆ. ರೊಮ್ಯಾಂಟಿಕ್ ಹೀರೋ ರಣಬೀರ್ ಹಾಗೂ ರಶ್ಮಿಕಾ ಜೋಡಿ ಕ್ಲಿಕ್ ಆಗೋದು ಪಕ್ಕಾ ಆದಂತಿದೆ.

ಬಹಳ ಅದ್ಧೂರಿಯಾಗಿ ‘ಅನಿಮಲ್’ ಸಿನಿಮಾ ನಿರ್ಮಾಣವಾಗಿದೆ. ಟೀ-ಸೀರಿಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ 1 ಸ್ಟುಡಿಯೋ ಸಂಸ್ಥೆಗಳು ಬಂಡವಾಳ ಹೂಡಿವೆ. ಚಿತ್ರದ ರನ್ ಟೈಮ್ ಬರೋಬ್ಬರಿ 3 ಗಂಟೆ 21 ನಿಮಿಷ ಎಂದು ಚಿತ್ರತಂಡವೇ ಘೋಷಿಸಿದೆ. ಇಷ್ಟು ದೊಡ್ಡ ಸಿನಿಮಾವನ್ನು ಪ್ರೇಕ್ಷಕರು ತಾಳ್ಮೆಯಿಂದ ನೋಡುತ್ತಾರಾ ಎನ್ನುವ ಚರ್ಚೆ ಕೂಡ ನಡೀತಿದೆ. ಟ್ರೈಲರ್ ನೋಡಿದ ಮೇಲೆ ಕಂಡಿತ ಚಿತ್ರ ಗೆಲ್ಲುತ್ತೆ ಎನ್ನುವ ಮಾತುಗಳು ಶುರುವಾಗಿದೆ. ಏಳೆಂಟು ಜನ ಸಂಗೀತ ನಿರ್ದೇಶಕರು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಹರ್ಷವರ್ಧನ್, ರಾಮೇಶ್ವರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಟ್ರೈಲರ್ ಬಿಜಿಎಂ, ವಿಷ್ಯುವಲ್ಸ್, ರಣ್ಬೀರ್, ರಶ್ಮಿಕಾ, ಅನಿಲ್ ಕಪೂರ್ ಪರ್ಫಾರ್ಮನ್ಸ್ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಕೆಜಿಎಫ್-2’ ಚಿತ್ರದಲ್ಲಿ ಯಶ್ ‘ದೊಡ್ಡಮ್ಮ’ ಎಂದು ದೊಡ್ಡ ಗನ್ ಹಿಡಿದು ಅಬ್ಬರಿಸಿದ್ದರು. ‘ಅನಿಮಲ್’ ಚಿತ್ರದ ಸನ್ನಿವೇಶವೊಂದರಲ್ಲಿ ರಣ್ಬೀರ್ ಅದಕ್ಕಿಂತ ದೊಡ್ಡ ಗನ್ ಹಿಡಿದು ವೈಲೆನ್ಸ್ ಸೃಷ್ಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾಗಿದ್ದು, ಭರದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಇದೇ ಡಿಸೆಂಬರ್ 1 ರಂದು ಅನಿಮಲ್ ಅಖಾಡಕ್ಕಿಳಿಯುತ್ತಿದೆ. ಪಠಾಣ್, ಜವಾನ್, ಗದರ್-2 ನಂತೆ `ಅನಿಮಲ್’ ಸಿನಿಮಾ ಕೂಡ ಈ ವರ್ಷ ಬ್ಲಾಕ್‍ಬಸ್ಟರ್ ಹಿಟ್ ಆಗುತ್ತಾ? ಬಾಲಿವುಡ್‍ಗೆ ಬಲ ತುಂಬುತ್ತಾ ಅನ್ನೋದನ್ನ ಕಾದುನೋಡಬೇಕಿದೆ





