ಕನ್ನಡದ ಮೋಸ್ಟ್ ಎಕ್ಸ್ ಪೆಕ್ಡೆಡ್ ಸಿನಿಮಾಗಳ ಪೈಕಿ ಮಾರ್ಟಿನ್ ಮೊದಲ ಸಾಲಲ್ಲಿ ನಿಂತಿದೆ. ಕನ್ನಡಿಗರನ್ನ ಮಾತ್ರವಲ್ಲ ಅಖಂಡ ಸಿನಿಮಾ ಪ್ರೇಮಿಗಳನ್ನು ಕಣ್ಣರಳಿಸಿ ಕಾಯುವಂತೆ ಮಾಡಿರೋ ಮಾರ್ಟಿನ್ ಈಗ ಸ್ಪೆಷಲ್ ಸಾಂಗ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಮೂರೂವರೆ ಕೋಟಿ ಸೆಟ್ ಹಾಕಿ, 350 ಜನ ಫಾರಿನ್ ಡ್ಯಾನ್ಸರ್‍ನ ಇಂಪೋರ್ಟ್ ಮಾಡಿಕೊಂಡಿರೋ ಮಾರ್ಟಿನ್ ಟೀಮ್, ಬಹದ್ದೂರ್ ಗಂಡಿನ ಮುಂದೆ ಬೆಲ್ಲಿ ಡ್ಯಾನ್ಸ್ ಮಾಡೋದಕ್ಕೆ ಇಟಲಿ ಬ್ಯೂಟಿನಾ ಕರೆತಂದಿದೆ. ಹಾಗಾದ್ರೆ, ಬೆಂಕಿಚೆಂಡಿನ ಜೊತೆ ಬೆರಗು ಮೂಡಿಸಲು ಬಂದ ಆ ಚೆಲುವಿ ಯಾರು? ನಿಮ್ಮಿ ಕುತೂಹಲದ ಕೋಲಾಹಲಕ್ಕೆ ಉತ್ತರ ಜಾರ್ಜಿಯಾ ಆಂಡ್ರಿಯಾನಿ
ಜಾರ್ಜಿಯಾ ಆಂಡ್ರಿಯಾನಿ ಯುರೋಪ್ ಕಂಟ್ರಿಯ ಕುವರಿ. ಮಾಡೆಲ್, ಡ್ಯಾನ್ಸರ್, ಆ್ಯಕ್ಟರ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿರೋ ಜಾರ್ಜಿಯಾ, ಇತ್ತೀಚೆಗೆ ಬಾಲಿವುಡ್‍ನ ನಾನ್‍ಸ್ಟಾಪ್ ಧಮಾಲ್ ಸಿನಿಮಾದ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಇದೇ ಮೊದಲ ಭಾರಿಗೆ ಸೌತ್ ಸಿನಿಮಾ ಮಾಡ್ತಿದ್ದಾರೆ. ಮಾರ್ಟಿನ್ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿರುವ ಇಟಲಿ ಬೆಡಗಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಹೈದ್ರಬಾದ್‍ನಲ್ಲಿ ಸುಮಾರು 3.5 ಕೋಟಿ ಕಾಸ್ಟ್ಲೀ ಸೆಟ್ ಹಾಕಿ, 350 ಜನ ಫಾರಿನ್ ಡ್ಯಾನ್ಸರ್‍ಗಳನ್ನ ಬಳಸಿಕೊಂಡು ಸ್ಪೆಷಲ್ ಸಾಂಗ್ ಶೂಟ್ ಮಾಡಲಾಗಿದೆಯಂತೆ. ಇರ್ಮಾನ್ ಸರ್ದಾರಿಯಾ ಕಂಪೋಸಿಷನ್‍ನಲ್ಲಿ, ಸತ್ಯ ಹೆಗ್ಡೆ ಸಿನಿಮಾಟೋಗ್ರಫಿಯಲ್ಲಿ ಮಾರ್ಟಿನ್ ಹಾಡು ಮಜವಾಗಿ ಮೂಡಿಬಂದಿದ್ದು, ಡ್ಯಾನ್ಸ್ ಕಣದಿಂದ ಅದೊಂದು ಫೋಟೋ ವೈರಲ್ ಆಗಿದೆ.
ಹೌದು, ಬ್ಯಾಗ್ರೌಂಡ್‍ನಲ್ಲಿ ಫಾರಿನ್ ಡ್ಯಾನ್ಸರ್‍ಗಳು ವಿವಿಧ ಭಂಗಿಯಲ್ಲಿ ನಿಂತು ಪೋಸು ಕೊಟ್ಟಿದ್ದಾರೆ. ಈ ಮಧ್ಯೆ ಬಹದ್ದೂರ್ ಗಂಡು ಸಿಂಹಾಸನ ಅಲಂಕರಿಸಿದ್ದು, ಧರೆಗಿಳಿದ ರಂಭೆಯಂತಿರೋ ರೋಮ್ ಸುಂದರಿ ಜಾರ್ಜಿಯಾನ ತೊಡೆ ಮೇಲೆ ಕೂರಿಸಿಕೊಂಡಿದ್ದಾರೆ. ಈ ಫೋಟೋ ಬರೀ ವಿಐಪಿಗಳನ್ನ ಮಾತ್ರ ಹುಚ್ಚೆಬ್ಬಿಸಿಲ್ಲ ಬದಲಾಗಿ ಸಮಸ್ತ ಸಿನಿಮಾ ಪ್ರೇಮಿಗಳನ್ನು ಹಾಗೂ ಸಲ್ಮಾನ್ ಸಹೋದರ ಅರ್ಬಾಜ್ ಖಾನ್‍ರನ್ನೂ ಕಣ್ಣುಜ್ಜಿಕೊಂಡು ನೋಡುವಂತೆ ಮಾಡಿದೆ. ಅರ್ರೇ, ಇಲ್ಯಾಕೆ ಅರ್ಬಾಜ್ ಖಾನ್ ಎಂಟ್ರಿ ಅಂತೀರೋ? ಅದಕ್ಕೆ ಕಾರಣ ಇದೆ. ಅದೇನಂದರೆ ಅರ್ಬಾಜ್ ಹಾಗೂ ಜಾರ್ಜಿಯಾ ನಡುವೆ ಕುಚ್ ಕುಚ್ ಹೋತಾ ಹೈ ಅನ್ನೋದು ಬಿಟೌನ್ ಗಲ್ಲಿಯಲ್ಲಿ ಕೇಳಿಬರುತ್ತಿದೆ. ಹೀಗಿರುವಾಗ, ನಕಶಿಖಾಂತ ನಶೆಯೇರಿಸೋ ನಟಿ ಮತ್ತೊಬ್ಬ ಹೀರೋ ತೊಡೆಯೇರಿ ಕುಳಿತಾಗ ಕಣ್ಣು ಊರಗಲವಾಗೋದು ಖರ್ರೇ ಅಲ್ಲವೇ?
ಅದೇನೇ ಇರಲಿ ಮಾರ್ಟಿನ್ ಅಖಾಡ ಒಂದಿಲ್ಲೊಂದು ಕಾರಣಕ್ಕೆ ರಂಗೇರುತ್ತಿದೆ. ಅದ್ದೂರಿ ಕಾಂಬಿನೇಷನ್‍ನಲ್ಲಿ ಬರುತ್ತಿರುವ `ಮಾರ್ಟಿನ್’ ಸಿನಿಮಾ ಭರ್ಜರಿಯಾಗೇ ತಯ್ಯಾರಾಗುತ್ತಿದೆ. ಸಾಂಗ್ಸ್ ಹಾಗೂ ಪ್ಯಾಚ್ ವರ್ಕ್ ಬಾಕಿಯಿದ್ದು, ಅಕ್ಟೋಬರ್ 07ರ ಒಳಗೆ ಶೂಟಿಂಗ್ ಮುಗಿಸುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಮಣಿಶರ್ಮಾ ಸಂಗೀತ ಸಿನಿಮಾಗಿದ್ದು, ರವಿಬಸ್ರೂರ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ರಾಮ್-ಲಕ್ಷ್ಮಣ್ ಹಾಗೂ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಜೊತೆ ವೈಭವಿ ಶಾಂಡಿಲ್ಯ, ಸುಕೃತ ವಾಗ್ಲೆ, ಅನ್ವೇಶಿ ಜೈನ್, ನವಾಬ್ ಷಾ, ರೋಹಿತ್ ಪಾಠಕ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.
ಎ.ಪಿ ಅರ್ಜುನ್ ನಿರ್ದೇಶನ, ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಮೂಡಿಬರ್ತಿರೋ ಈ ಚಿತ್ರದ ಮೇಲೆ ನಿರೀಕ್ಷೆ ತುಸು ಜಾಸ್ತಿನೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ವಿದೇಶಿ ಮೂಲದ ಖ್ಯಾತ ಬಾಡಿಬಿಲ್ಡರ್ಗಳ ಜೊತೆ ಧ್ರುವ ಹೊಡೆದಾಡಿದ್ದಾರೆ. ಅಷ್ಟಕ್ಕೂ, ಧ್ರುವ ಗ್ಯಾಂಗ್ ಸ್ಟರ್ರಾ ಅಥವಾ ಸೋಲ್ಜರ್ರಾ? ಈ ಕುತೂಹಲವನ್ನ ಬಿಟ್ಟುಕೊಡದ ಎ.ಪಿ ಅರ್ಜುನ್ `ಮಾರ್ಟಿನ್’ಗಾಗಿ ಇಂಡಿಯಾದ ಜೊತೆಗೆ ಪಾಕ್ ಕೂಡ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ.ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್ ಎಂಡಿಂಗ್‍ನಲ್ಲಿ `ಮಾರ್ಟಿನ್’ ಅಖಾಡಕ್ಕಿಳಿಯುವ ಸಾಧ್ಯತೆಯಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಮೇನಿಯಾ ಶುರುವಾಗಲಿದೆ.