ರಾಕಿಂಗ್ ಸ್ಟಾರ್ ಯಶ್ (Yash) ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಇವತ್ತಿಗೆ ಒಬ್ಬಿಬ್ಬರ ಕನಸಾಗಿಲ್ಲ. ಬಿಟೌನ್ ಹಾಟ್ ಬ್ಯೂಟಿ ಕರೀನಾ ಕಪೂರ್ ಅವರಿಂದ ಹಿಡಿದು ದೊಡ್ಡ ದೊಡ್ಡ ತಾರೆಯರು ಮತ್ತು ಇವತ್ತಿನ ಯಂಗ್‌ಸ್ಟರ್ಸ್ ಗಳು ಕೂಡ ಕೆಜಿಎಫ್ ಕಿಂಗ್ ಜೊತೆ ತೆರೆಹಂಚಿಕೊಳ್ಳಲು ಬಯಸ್ತಿದ್ದಾರೆ. ಹೀಗಿರುವಾಗಲೇ ರಾಕಿಭಾಯ್ ನಟನೆಯ ಮೋಸ್ಟ್ ಅವೈಟೆಡ್ ಚಿತ್ರ ಟಾಕ್ಸಿಕ್ (Toxic) ನಿಂದ ಕಾಸ್ಟಿಂಗ್ ಕಾಲ್ ಮಾಡಲಾಗಿದೆ. ಮಾನ್‌ಸ್ಟರ್ ಯಶ್ (Yash) ಜೊತೆ ನಟಿಸುವ ಸುವರ್ಣಾವಕಾಶವನ್ನ ಕಲ್ಪಿಸಿಕೊಡ್ತಿದೆ.
ಟಾಕ್ಸಿಕ್ (Toxic) ಚಿತ್ರಕ್ಕೆ ಮಾನ್‌ಸ್ಟರ್ ಕ್ರಿಯೇಷನ್ಸ್ ಜೊತೆ ಜಂಟಿಯಾಗಿ ಬಂಡವಾಳ ಹೂಡ್ತಿರುವ ಕೆವಿಎನ್ (Kvn) ಸಂಸ್ಥೆ ಆಡಿಷನ್‌ಗೆ ಕರೆಕೊಟ್ಟಿದೆ. 25 ರಿಂದ 75 ವರ್ಷದ ಪುರುಷರು, 12 ರಿಂದ 16 ವಯಸ್ಸಿನ ಮಕ್ಕಳು, 23 ರಿಂದ 65 ವಯಸ್ಸಿನ ಮಹಿಳೆಯರು ಆಡಿಶನ್ ಕೊಡಬಹುದಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆವಿಎನ್ (kvn) ಸಂಸ್ಥೆ ಪೋಸ್ಟ್ ಹಂಚಿಕೊಂಡಿದೆ. ಯಾವುದೇ ಭಾಷೆಯಲ್ಲಾದರೂ ಸರೀ ಒಂದು ನಿಮಿಷದ ಇಂಟ್ರುಡಕ್ಷನ್ ವಿಡಿಯೋ ಕಳುಹಿಸಿಕೊಡಲು ತಿಳಿಸಿದ್ದು, ಮಾರ್ಚ್ 25 ಕೊನೆಯ ದಿನಾಂಕವಾಗಿರುತ್ತೆ. ಅಷ್ಟರಲ್ಲಿ ಆಸಕ್ತರು ಟಾಕ್ಸಿಕ್ (Toxic) ಸಿನಿಮಾ ಟೀಮ್‌ಗೆ ವಿಡಿಯೋ ಕಳುಹಿಸಿಕೊಡಬಹುದು.
ಈಗಾಗಲೇ ಟಾಕ್ಸಿಕ್ (Toxic) ಚಿತ್ರತಂಡ ಗೋವಾದಲ್ಲಿ ಬೀಡುಬಿಟ್ಟಿದೆ. ಮೊನ್ನೆಯಷ್ಟೇ ನಿರ್ದೇಶಕಿ ಗೀತು ಮೋಹನ್ ದಾಸ್ (Geetu Mohandas) ಹಾಗೂ ರಾಕಿಭಾಯ್ (Yash) ತಮ್ಮ ಟೀಮ್ ಜೊತೆ ಗೋವಾ ಕಡಲ ತೀರದಲ್ಲಿ ಶೂಟಿಂಗ್ ಪ್ಲಾನ್ ಮಾಡ್ತಿರೋ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದ್ವು. ಇವತ್ತು ರಾಧಿಕಾ ಪಂಡಿತ್ (Radhikapandit) ಅವ್ರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ರಾಧಿಕಾ ಹಾಗೂ ಯಶ್ ಇಬ್ಬರು ಕಾಣಿಸಿಕೊಂಡಿದ್ದು, ಐರಾ ಫೋಟೋ ಕ್ಲಿಕ್ಕಿಸಿದ್ದಾಳೆ. ವಿಶೇಷ ಅಂದರೆ ಈ ಫೋಟೋ ಗೋವಾ ಕಡಲ ತಡಿಯಲ್ಲಿ ಕ್ಲಿಕ್ಕಿಸಿರುವುದು. ಅಲ್ಲಿಗೆ ಗೋವಾ ಬೀಚ್‌ನಲ್ಲಿ ಟಾಕ್ಸಿಕ್ (Toxic) ಶೂಟಿಂಗ್ ಆರಂಭವಾಗಿರೋದು ಖಚಿತ ಅಲ್ಲವೇ.
ಇಷ್ಟು ದಿನ ಪ್ರಿಪ್ರೊಡಕ್ಷನ್ ವರ್ಕ್‌ನಲ್ಲಿ ಪಿನ್ ಟು ಪಿನ್ ವರ್ಕ್ ಮಾಡಿ ಫೀಲ್ಡ್‌ಗಿಳಿದಿರೋ ಟಾಕ್ಸಿಕ್ (Toxic) ತಂಡ ಇನ್ಮೇಲೆ ಬ್ಲಾಕ್‌ಬಸ್ಟರ್ ಅಪ್‌ಡೇಟ್‌ಗಳನ್ನ ನೀಡುತ್ತಾ ಬೆರಗುಗೊಳಿಸೋದ್ರಲ್ಲಿ ನೋ ಡೌಟ್. ಅಷ್ಟಕ್ಕೂ, ಟಾಕ್ಸಿಕ್‌ನಲ್ಲಿ ಯಾರೆಲ್ಲಾ ಇದ್ದಾರೆ. ಯಾರೆಲ್ಲಾ ಘಟಾನುಘಟಿ ತಾರೆಯರು ಸುಲ್ತಾನ್‌ಗೆ ಸಾಥ್ ನೀಡ್ತಿದ್ದಾರೆ. ಮಾನ್‌ಸ್ಟರ್ ಸಿನಿಮಾಗೆ ಯಾವೆಲ್ಲಾ ಟೆಕ್ನಿಷಿಯನ್ಸ್‌ಗಳು ವರ್ಕ್ ಮಾಡ್ತಿದ್ದಾರೆ ಅನ್ನೋದನ್ನ ಚಿತ್ರತಂಡ ಗೌಪ್ಯವಾಗಿರಿಸಿದೆ. ಅಂದ್ಹಾಗೇ, ಟಾಕ್ಸಿಕ್ (Toxic) ಬಹುಕೋಟಿ ವೆಚ್ಚದ ಸಿನಿಮಾ. ಗೋವಾದ ಡ್ರಗ್ ಮಾಫಿಯಾ ಕಥೆಯುಳ್ಳ ಚಿತ್ರ ಇದಾಗಿದ್ದು, ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ಆಕ್ಷನ್ ಕಟ್ ಹೇಳ್ತಿದ್ದಾರೆ.ಕೆವಿಎನ್ ಹಾಗೂ ಮಾನ್‌ಸ್ಟರ್ ಕ್ರಿಯೇಷನ್ಸ್ ಜಂಟಿಯಾಗಿ ಟಾಕ್ಸಿಕ್ (Toxic) ಚಿತ್ರ ನಿರ್ಮಾಣ ಮಾಡ್ತಿದೆ. ಮೂಲಗಳ ಪ್ರಕಾರ ಗೀತು ಮೋಹನ್‌ದಾಸ್ ಪತಿಯೇ ಈ ಸಿನಿಮಾಗೆ ಕ್ಯಾಮೆರಾ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಫಿಕ್ಸಾದ ಡೇಟ್‌ಗೆ ಅಂದರೆ ಏಪ್ರಿಲ್ 10 2025ಕ್ಕೆ ಟಾಕ್ಸಿಕ್ (Toxic) ತೆರೆಮೇಲೆ ಅನಾವರಣಗೊಳ್ಳಲಿದೆ.