Chandini: ಉಪೇಂದ್ರ(Upendra) ಅಭಿನಯದ ಸಾರ್ವಕಾಲಿಕ ದಾಖಲೆ ಬರೆದ ‘ಎ’(A) ಸಿನಿಮಾ ಕಳೆದ ವಾರ ಮರು ಬಿಡುಗಡೆಯಾಗಿದೆ. 26 ವರ್ಷದ ನಂತರ ಈ ಚಿತ್ರ ಮರು ಬಿಡುಗಡೆಯಾಗಿರೋದು ಈ ಸಿನಿಮಾದ ನಾಯಕಿ ಚಾಂದಿನಿಗೆ ಹರುಷ ತಂದಿದೆ. ಆ ಖುಷಿಯಲ್ಲೇ ಬೆಂಗಳೂರಿಗೆ ಬಂದಿಳಿದ ಚಾಂದಿನಿ ಹಲವು ಇಂಟ್ರಸ್ಟಿಗ್ ವಿಚಾರ ಬಿಚ್ಚಟ್ಟಿದ್ದಾರೆ.
‘ಎ’(A) ಸಿನಿಮಾ ಚಾಂದಿನಿ ಸಿನಿ ಕೆರಿಯರ್ನ ಮೊಟ್ಟ ಮೊದಲ ಸಿನಿಮಾ. ಸಿನಿಮಾಗೆ ಬರುವ ಆಲೋಚನೆ ಇಲ್ಲದೇ ಇದ್ದಾಗ ಅಚಾನಕ್ ಆಗಿ ಬಂದ ಆಫರ್ ‘ಎ’. ಸಿನಿಮಾ ಅಂದ್ರೆ ಏನೇನೋ ಇಮ್ಯಾಜಿನೇಶನ್ ಮಾಡಿಕೊಂಡಿದ್ದ ನನಗೆ ಮೊದಲ ಸಿನಿಮಾದಲ್ಲಿ ಮೇಕಪ್ ಮಾಡಿಕೊಳ್ಳಲೂ ಅವಕಾಶವಿರಲಿಲ್ಲ. ಉಪೇಂದ್ರ ಸಿನಿಮಾ ಮಾಡೋ ರೀತಿಗೆ ಈ ಸಿನಿಮಾ ಹಿಟ್ ಆಗುತ್ತಾ ಎಂದು ನನನ್ನೇ ಡೌಟ್ ಕಾಡಿತ್ತು. ಆದ್ರೆ ಮುಂದೆ ಆದದ್ದೆಲ್ಲಾ ಇತಿಹಾಸ. ಮೊದಲ ಸಿನಿಮಾದಲ್ಲೇ ನನಗೆ ಖ್ಯಾತಿ ಸಿಕ್ತು ಎಂದು ಸಿನಿಮಾ, ಉಪೇಂದ್ರ ಹಾಗು ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ.
‘ಎ’ ಹಾಗೂ ‘AK47’ ನಂತರ ಬೇರೆ ಬೇರೆ ಭಾಷೆಯಲ್ಲಿ 20 ಸಿನಿಮಾಗಳನ್ನು ಮಾಡಿದ್ದೇನೆ. ಪೋಷಕರು ಓದಿನ ಕಡೆ ಗಮನ ಹರಿಸಲು ಹೇಳದ್ರಿಂದ ಚಿತ್ರರಂಗ ತೊರೆದೆ. ಈಗ ಮತ್ತೆ ಬಣ್ಣ ಹಚ್ಚಲು ತೀರ್ಮಾನಿಸಿದ್ದೇನೆ. ಒಳ್ಳೆಯ ಪಾತ್ರಗಳನ್ನು ಮಾಡಲು ನಿರ್ಧರಿಸಿದ್ದೇನೆ. ಕರ್ನಾಟಕದೊಂದಿಗೆ ನನಗೆ ವಿಶೇಷ ಕನೆಕ್ಷನ್ ಇದೆ. ಅದಕ್ಕೆಂದೇ ಮತ್ತೆ ಮರಳಿ ಬಂದಿದ್ದೇನೆ ಎಂದು ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ಚಾಂದಿನಿ ತಿಳಿಸಿದ್ದಾರೆ. ಸಿನಿಮಾ, ವಿದ್ಯಾಭ್ಯಾಸ, ಪ್ರೊಫೆಷನಲ್ ಕೆರಿಯರ್ ನಡುವೆ ಮದುವೆಯತ್ತ ಗಮನ ಕೊಡಲಿಲ್ಲ. ಆದ್ರೀಗ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇನೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ಹಂಚಿಕೊಳ್ಳೋದಾಗಿ ಚಾಂದಿನಿ ತಿಳಿಸಿದ್ದಾರೆ.