ನೀವ್ಯಾರು ಸಿತಾರಾ ಯಾರು ಅಂತ ನಮಗೆ ಗೊತ್ತೇಯಿಲ್ಲ ಅನ್ನೋದಕ್ಕೆ ಚಾನ್ಸೇ ಇಲ್ಲ. ಯಾಕಂದ್ರೆ, ಪ್ರತಿದಿನ ನೀವು ನಿಮ್ಮನೆಯ ಪುಟ್ಟ ಪರದೆಯ ಮೇಲೆ ಆಕೆಯನ್ನ ನೋಡಿರ್ತೀರಾ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಆಕೆ ನಿಮ್ಮನೆಗೆ ಬರುತ್ತಿದ್ದಾರೆ. ಈಗ ಪಾರು ಸೀರಿಯಲ್‍ನಲ್ಲಿ ದಾಮಿನಿಯಾಗಿ ನಿಮ್ಮೆಲ್ಲರನ್ನೂ ರಂಜಿಸುತ್ತಿದ್ದಾರೆ. ತೆರೆಮೇಲೆ ಈಕೆಯದ್ದು ಖಳನಾಯಕಿ ಪಾತ್ರವೇನೋ ಹೌದು, ಆದರೆ, ನಿಜಜೀವನದಲ್ಲಿ ಈಕೆ ಹೃದಯ ಶ್ರೀಮಂತಿಕೆಯುಳ್ಳ ಹೆಣ್ಣುಮಗಳು. ಅಷ್ಟಕ್ಕೂ, ನಾವು ಇವತ್ತು ಈ ನಟಿಯ ಬಗ್ಗೆ ಹೇಳುತ್ತಿರುವುದಕ್ಕೆ ಕಾರಣಯಿದೆ. ಇವತ್ತಿಗೆ ಕನ್ನಡ ಕಿರುತೆರೆಯ ಸ್ಟಾರ್ ಕಲಾವಿದೆಯಾಗಿ ಗುರ್ತಿಸಿಕೊಂಡಿರುವ ಸಿತಾರಾ, ಸವೆಸಿದ ಕಲ್ಲುಮುಳ್ಳಿನ ಹಾದಿ ಇದೆಯಲ್ಲ ಅದು ಸಾಮಾನ್ಯವಾದದಲ್ಲ. ಇಲ್ಲಿತನಕ ಅದೆಷ್ಟೋ ವೈಯಕ್ತಿಕ ವಿಚಾರಗಳನ್ನ ಸಿತಾರಾ ತಮ್ಮ ಒಡಲಲ್ಲೇ ಇಟ್ಕೊಂಡು ಒಬ್ಬರೇ ನೋವು ಅನುಭವಿಸಿದ್ದರು. ಆದ್ರೆ ಇದೇ ಮೊದಲ ಭಾರಿಗೆ ಜನಪ್ರಿಯ ಯೂಟ್ಯೂಬ್ ಚಾನಲ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನುಭವಿಸಿದ ನರಕಯಾತೆಯೆಲ್ಲವನ್ನೂ ಒಂದೊಂದಾಗಿ ಹರವಿಟ್ಟಿದ್ದಾರೆ.
ಸಿತಾರಾ ಮೂಲತಃ ದಾವಣಗೆರೆಯ ದೊಡ್ಡಮಾಗಡಿಯವರು. ಅಪ್ಪ, ಅಮ್ಮನ ಆಶ್ರಯವಿಲ್ಲದೇ ಮಠದಲ್ಲಿ ಬೆಳೆದು ದೊಡ್ಡವಳಾದ ಹೆಣ್ಣುಮಗಳು. ಆದರೆ, ಬದುಕು ಕಟ್ಟಿಕೊಂಡಿದ್ದು ನಿನಾಸಂ ಅಂಗಳದಲ್ಲಿ. 2000ನೇ ಇಸವಿಯಲ್ಲಿ ರಂಗಭೂಮಿಯಲ್ಲಿ ನಟನಾ ತರಭೇತಿ ಪಡೆದು ಬೆಂಗಳೂರು ಬಸ್ ಹತ್ತಿದ ಸಿತಾರಾ, ಇವತ್ತು ಸಿನಿಮಾ ಹಾಗೂ ಸೀರಿಯಲ್‍ಗಳ ಮೂಲಕ ಕರುನಾಡಿನ ಮೂಲೆ ಮೂಲೆ ತಲುಪಿದ್ದಾರೆ. ಅಪಾರ ಅಭಿಮಾನಿ ಬಳಗ ಸಂಪಾದನೆ ಮಾಡಿಕೊಂಡು ಸಾಧಕಿಯಾಗಿ ಬೆಳೆದು ನಿಂತಿದ್ದಾರೆ. ಈ ಮಟ್ಟಿಗೆ ಬೆಳೆದು ನಿಲ್ಲುವ ಹಾದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದಾರೆ. ದುರಂತ ಅಂದರೆ ಒಂಟಿ ಹೆಣ್ಣು ಎನ್ನುವ ಕಾರಣಕ್ಕೆ ಈಕೆಯನ್ನ ಕೆಟ್ಟದಾಗಿ ಬಳಸಿಕೊಳ್ಳುವುದಕ್ಕೆ ಹಲವರು ಪ್ರಯತ್ನಿಸಿದ್ದಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಆ ಕೆಟ್ಟ ಘಟನೆಗಳ ಬಗ್ಗೆ ಕಣ್ಣೀರಾಕುತ್ತಲೇ ನಟಿ ಸಿತಾರಾ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಮಕ್ಕಳನ್ನು ರಂಗಭೂಮಿಗೆ ಕಳಿಸಲು ಪೋಷಕರು ಭಯ ಬೀಳ್ತಾರೆ,ಅದಕ್ಕೆ ಕಾರಣಗಳಿವೆ. ನಾನೇ ಅದನ್ನು ಅನುಭವಿಸಿದ್ದೇನೆ ಎಂದು ತಮ್ಮ ನೀನಾಸಂ ಹಾಗು ತಿರುಗಾಟದ ನಾಟಕದ ಸಂದರ್ಭದಲ್ಲಿ ನಡೆದ ಘಟನೆಯ ಎಳೆ ಬಿಚ್ಚಿಟ್ಟಿದ್ದಾರೆ.ಸಾಣೇಹಳ್ಳಿ ಮಠದ ಆಶ್ರಯದಲ್ಲಿದ್ದ ತನ್ನನ್ನು ಒಬ್ಬ ವ್ಯಕ್ತಿ ಬೆಂಗಳೂರಿಗೆ ಓದಿಸುವುದಾಗಿ ಹೇಳಿ,ನಂಬಿಸಿ ಕರೆತಂದರು.ಆ ವ್ಯಕ್ತಿಯ ಹೆಸರನ್ನ ನಾನು ಹೇಳಲು ಇಷ್ಟ ಪಡೋದಿಲ್ಲ.ಮೆಜೆಸ್ಟಿಕ್ ನಲ್ಲಿ ನನ್ನನ್ನ ಬಿಟ್ಟು ಹೋದರು, ೩ ದಿನ ಅಲ್ಲೇ ಮಲಗಿದ್ದೆ. ಒಂದು ದಿನ ಸರ್ಕಾರಿ ಬಸ್ ಕಂಡಕ್ಟರ್ ಬಳಿ ಮಾತನಾಡಿ ಗುರು ಪ್ರಸಾದ್ ಅಣ್ಣ ಅವರನ್ನು ಸಂಪರ್ಕ ಮಾಡಿ ಅಲ್ಲಿಂದ ಬಸ್‌ನಲ್ಲಿ ಅವರ ಮನೆ ಕಡೆ ಮುಖ ಮಾಡಿದ ನಾನು ಅವರ ಮನೆಯಲ್ಲಿ 15 ದಿನ ಉಳಿದುಕೊಂಡೆ. ನನ್ನ ಬೇಸಿಕ್ ನೀಡ್ಸ್ ಕೊಡಿಸಿ, ನನ್ನ ಜೀವನಕ್ಕೆ ಆಧಾರಕ್ಕೆ ಏನಾದ್ರು ಮಾಡುವಂತೆ ಸ್ಪೂರ್ತಿ ತುಂಬಿ ನಿನಾಸಂ ಗೆ ಕಳಿಸಿದ್ರು. ಅಲ್ಲಿಂದ ನನ್ನ ನಿನಾಸಂ ಪಯಣ ಶುರುವಾಯ್ತು.ಸಾಕಷ್ಟು ಕಲಿತೆದ್ದೇನೆ. ನನ್ನ ಜೀವನದಲ್ಲಿ ದುಡಿದು ಅನ್ನ ತಿನ್ನುತ್ತಿರುವೆ ಅಂದ್ರೆ ಅದಕ್ಕೆ ನೀನಾಸಂ ಕಾರಣ. ಅಲ್ಲಿಗೆ ಹೋದ ಮೇಲೆ ಜೀವನಕ್ಕೆ ಯಾವ ತೊಂದರೆ ಕೂಡ ಎದುರಾಗಲಿಲ್ಲ’ ಎಂದು ಸಿತಾರಾ ಹೇಳಿದ್ದಾರೆ.\
‘ನೀನಾಸಂ ನಲ್ಲಿದ್ದಾಗ ಮತ್ತು ತಿರುಗಾಟ ನಾಟಕ ಮಾಡುವಾಗ ನನಗೆ ಕೆಲವೊಂದು ಕೆಟ್ಟ ಅನುಭವಗಳು ಆಗಿವೆ ಎಂದು ಮತ್ತೆ ಕಣ್ಣೀರು ಹರಿಸುತ್ತಾ ಮಾತು ಮುಂದುವರೆಸಿದ ನಟಿ, ಜಾಗ ಮತ್ತು ವ್ಯಕ್ತಿ ಹೆಸರು ಹೇಳುವುದಕ್ಕೆ ಆಗಲ್ಲ ಆದರೆ ಆ ವ್ಯಕ್ತಿಗಳು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆ ಘಟನೆಗಳನ್ನು ವಿವರಿಸುವುದಕ್ಕೆ ಕಷ್ಟ ಆಗುತ್ತೆ. ಒಂಟಿ ಹುಡುಗಿ ಹೇಳೋರು ಕೇಳೋರು ಯಾರೂ ಇಲ್ಲ ಅಂದ್ರೆ They behave like a hell. ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಕೆಲವರು ನಡೆದುಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಈ ಕಾರಣಕ್ಕೆ ನಾನು ಜನರ ಜೊತೆ ತುಂಬಾ ರಫ್ ಆಗಿರುತ್ತಿದ್ದೆ. ಹಾಗಾಗಿ ನಾನು ತುಂಬಾ ಜೋರು ಅನ್ಕೋತಾರೆ. ಹುಡುಗರು ಮತ್ತು ಟೀಚರ್ಸ್‌ಗಳ ಜೊತೆ ಮಾತನಾಡುವುದಕ್ಕೆ ಇಷ್ಟನೇ ಆಗುತ್ತಿರಲಿಲ್ಲ ಫ್ರೆಂಡ್ಸ್‌ಗಳ ಜೊತೆ ಮಾತನಾಡಲು ಆಗುತ್ತಿರಲಿಲ್ಲ…ಹುಡುಗರು ಅಂದ್ರೆನೇ ಕೈಕಾಲು ನಡುಕ ಬರುತ್ತಿತ್ತು. ತುಂಬಾ ಕೆಟ್ಟದಾಗಿ ನಡೆದುಕೊಂಡಿರುವ ವ್ಯಕ್ತಿಗಳ ಹೆಸರು ಹೇಳುವುದಕ್ಕೆ ಇಷ್ಟವಿಲ್ಲ ಒಂದು ವೇಳೆ ನಾನು ಹೇಳಿದರೂ ಅವರ ಕುಟುಂಬ ಬೀದಿಗೆ ಬರುತ್ತದೆ. ಈಗ ನನ್ನ ಬುದ್ಧಿ ಮೆಚ್ಯೂರ್ ಆಗಿ ಅವರ ಹೆಸರು ಹೇಳಬಾರದು ಅನ್ನೋ ಸೆನ್ಸ್ ಕೂಡ ನನಗಿದೆ’
‘ಆದರೆ ಆ ಸಮಯದಲ್ಲಿ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದರು, ಜೊತೆಯಲ್ಲಿ ನಾಟಕ ಮಾಡುತ್ತಿದ್ದವರು ವೇದಿಕೆ ಮೇಲೆ ಕಾಟ ಕೊಡುತ್ತಿದ್ದರು. ಈ ವ್ಯಕ್ತಿ ನನ್ನ ಜೊತೆ ಈ ರೀತಿ ವರ್ತಿಸುತ್ತಿದ್ದಾರೆ ಅಂತ ಹೇಳಿದರೂ ಯಾರೂ ನಂಬುತ್ತಿರಲಿಲ್ಲ. ಗ್ರೀನ್ ರೂಮ್ ನಲ್ಲಿದ್ದರೆ ಅಲ್ಲಿಗೆ ಬರುತ್ತಿದ್ದರು. ಸ್ನಾನ ಮಾಡ್ತಿದ್ದರೂ ಬಾತ್‌ರೂಮ್‌ಗೆ ಬರುತ್ತಿದ್ದರು. ಮಲ್ಕೊಂಡಿದ್ದರೆ ನೆಮ್ಮದಿಯಾಗಿ ಮಲಗಲು ಸಹ ಬಿಡುತ್ತಿರಲಿಲ್ಲ . ಬಸ್‌ನಲ್ಲಿ ನೆಮ್ಮದಿಯಾಗಿರಲು ಬಿಡುತ್ತಿರಲಿಲ್ಲ ಎಲ್ಲೆಲ್ಲಿ ಕೈ ಹಾಕಬಾರದು ಅಲ್ಲಿ ಕೈ ಹಾಕುತ್ತಿದ್ದರು. ಬಾಯಿ ಜೋರಿದ್ದರೆ ನಾವೇ ಮೈ ಮೇಲೆ ಬೀಳುತ್ತೀವಿ ಅಂತ ಅಂದುಕೊಳ್ಳುತ್ತಾರೆ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದರು. ಮುಟ್ಟಬಾರದ ಜಾಗಕ್ಕೆ ಕೈ ಹಾಕಿ ಮುಟ್ಟುತ್ತಿದ್ದರು ಇದನ್ನು ಯಾರಿಗೂ ಹೇಳಲು ಅಗಲ್ಲ. ಈಗ ಅವರೆಲ್ಲ ದೊಡ್ಡ ಹೆಸರು ಪಡೆದು ಒಳ್ಳೆಯವರಂತೆ ಬದುಕುತ್ತಿದ್ದಾರೆ. ನಮ್ಮ ಟೈಮ್ ನಲ್ಲಿ ಇಷ್ಟೆಲ್ಲಾ ಆಗ್ತಿತ್ತು. ಹಾಗಾಗಿ ರಂಗಭೂಮಿಗೆ ಕಳುಹಿಸಲು ಜನರು ಹೆದರಿಕೊಳ್ಳುತ್ತಾರೆ’ . ಈಗ ಹಾಗಿಲ್ಲ ತುಂಬಾ ಅಪ್ಡೇಟ್ ಆಗಿದೆ ಎಂದಿದ್ದಾರೆ ಸಿತಾರಾ.
ಕೆಟ್ಟ ದಿನಗಳು ಕಳೀತು, ಒಳ್ಳೆ ದಿನಗಳಲ್ಲಿ ಜೀವಿಸುವಂತಾಯ್ತ ಎನ್ನುವಷ್ಟರಲ್ಲಿ ವೈಯಕ್ತಿಕ ಬದುಕು ಹಳಿತಪ್ಪಿದೆ. ಸಿತಾರಾ ದಾಂಪತ್ಯ ಜೀವನ ಮುರಿದುಬೀಳುವ ಹಂತದಲ್ಲಿದೆ. ಈಗಾಗಲೇ ಪತಿ-ಪತ್ನಿ ನಡುವೆ ವೈಮನಸ್ಸು ಮೂಡಿದ್ದು, ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರಂತೆ. ಅಷ್ಟಕ್ಕೂ, ಅದ್ಯಾವ ಕಾರಣಕ್ಕೆ ಸಿತಾರಾ ಸಂಸಾರದಲ್ಲಿ ಸುನಾಮಿ ಎದ್ದಿದೆ ಅನ್ನೋ ವಿಚಾರ ಬಹಿರಂಗವಾಗಿಲ್ಲ. ನಟಿ ಸಿತಾರಾ ಆ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲ. ಬದಲಾಗಿ ಕಣ್ತುಂಬಿಕೊಂಡು ಬಿಗಿದ ಗಂಟಲಿನಿಂದ ಒಂದೊಂದೇ ಮಾತುಗಳನ್ನ ಹೊರಹಾಕುತ್ತಾ, ಹೊಂದಾಣಿಕೆಯಾಗಲಿಲ್ಲ ಎನ್ನುವ ಸತ್ಯ ಬಿಚ್ಚಿಟ್ಟರು. ಇದೇ ವರ್ಷ ಡಿವೋರ್ಸ್ ಪಡೆಯೋದಾಗಿ ಹೇಳಿಕೊಂಡರು.