Aadujeevitham: ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್(Prithviraj Sukumarn) ಅಭಿನಯದ ʻಆಡು ಜೀವಿತಂʼ(Aadujeevitham) ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ಕಳೆದ ವಾರ ತೆರೆಕಂಡ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿರುವ ಈ ಈ ಚಿತ್ರ 100 ಕೋಟಿ ಗಳಿಕೆಯತ್ತ ಸಾಗಿದೆ.
ಪೃಥ್ವಿರಾಜ್ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಸಿ(Blessy) ಕಾಂಬಿನೇಶನ್‌ನಲ್ಲಿ ಮೂಡಿಬಂದ ಬಹು ನಿರೀಕ್ಷಿತ ಸಿನಿಮಾವಿದು. ನಿರೀಕ್ಷೆಯಂತೆ ಬಹು ದೊಡ್ಡ ಯಶಸ್ಸನ್ನು ಗಳಿಸಿದೆ. ಪೃಥ್ವಿರಾಜ್ ಸುಕುಮಾರನ್(Prithviraj Sukumarn) ನಟನೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ವೃತ್ತಿ ಜೀವನದ ಶ್ರೇಷ್ಠ ಸಿನಿಮಾ ಎನಿಸಿಕೊಂಡಿರುವ ಈ ಚಿತ್ರದ ಅಭಿನಯಕ್ಕೆ ಆಸ್ಕರ್ ನೀಡಬೇಕೆಂದು ನೆಟ್ಟಿಗರು ಕ್ಯಾಂಪೈನ್ ಶುರು ಮಾಡಿದ್ದಾರೆ. ವರ್ಲ್ಡ್ ವೈಡ್ ಸಿನಿ ಪ್ರಿಯರ ಮನಗೆದ್ದ ಸಿನಿಮಾ ಒಂದು ವಾರದಲ್ಲಿ 88 ಕೋಟಿ ಗಳಿಕೆ ಕಂಡಿದೆ. ಚಿತ್ರಮಂದಿರದಲ್ಲಿ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿರುವ ಈ ಚಿತ್ರ ವಾರಾಂತ್ಯದಲ್ಲಿ 100 ಕೋಟಿ ಗಳಿಕೆ ಕಾಣೋದು ಪಕ್ಕಾ ಎನ್ನಲಾಗ್ತಿದೆ.
ಒಂದು ವೇಳೆ `ಆಡು ಜೀವಿತಂ’(Aadujeevitham) ಸಿನಿಮಾ 100ಕೋಟಿ ಕ್ಲಬ್ ಸೇರಿದರೆ, ನೂರು ಕೋಟಿ ಗಳಿಕೆ ಕಂಡ ಮೂರನೇ ಮಾಲಿವುಡ್ ಸಿನಿಮಾ ಖ್ಯಾತಿ ಈ ಚಿತ್ರದ್ದಾಗುತ್ತದೆ. 2016ರಲ್ಲಿ ತೆರೆಕಂಡ ಮೋಹನ್ ಲಾಲ್ ʻಪುಲಿ ಮುರುಗನ್ʼ ಸಿನಿಮಾ ನೂರು ಕೋಟಿ ಗಳೀಕೆ ಕಂಡಿತ್ತು, ಮಂಜುಮ್ಮೆಲ್ ಬಾಯ್ಸ್ʼ(Manjummel Boys) ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿದ್ದು, ಇದೀಗ ಈ ಲಿಸ್ಟ್ ಗೆ ಪೃಥ್ವಿರಾಜ್ ಸುಕುಮಾರನ್ ಸಿನಿಮಾವೂ ಸೇರಿಕೊಳ್ಳಲಿದೆ.