Aameer Khan: ಕಿಂಗ್ ಖಾನ್(King Khan), ಆಮೀರ್ ಖಾನ್(Aameer Khan), ಸಲ್ಮಾನ್ ಖಾನ್(Salman Khan) ಈ ಮೂವರು ಖಾನ್‌ಗಳು ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ರೆ ಹೇಗ್ ಇರುತ್ತೆ. ಈ ಆಲೋಚನೆಯೇ ಇಷ್ಟು ಥ್ರಿಲ್ ನೀಡುತ್ತಿರುವಾಗ ಮೂವರು ಒಂದಾಗಿ ಸಿನಿಮಾ ಮಾಡಿದ್ರೆ ಅಥವಾ ಒಂದೇ ಸಿನಿಮಾಲ್ಲಿದ್ರೆ ಆ ಕ್ರೇಜ಼್ ಹೇಗಿರುತ್ತೆ. ಇದು ಇವ್ರ ಅಭಿಮಾನಿ ಬಳಗದ, ವರ್ಲ್ಡ್ ವೈಡ್ ಫ್ಯಾನ್ಸ್‌ಗಳ ಮಿಲಿಯನ್ ಡಾಲರ್ ಕನಸೂ ಕೂಡ ಹೌದು. ಇದು ನೆರವೇರುತ್ತಾ ಅನ್ನೋದ್ರ ಬಗ್ಗೆ ರೀಸೆಂಟ್ ಆಗಿ ಮೂವರು ಖಾನ್ ತ್ರಯರ ಪೈಕಿ ಒಬ್ಬರು ಆನ್ಸರ್ ಮಾಡಿದ್ದಾರೆ.
ಬಹು ಕಾಲದ ನಂತರ ಕಪಿಲ್ ಶರ್ಮಾ ಕಾಮಿಡಿ ಶೋ ನಲ್ಲಿ ಭಾಗವಹಿಸಿದ ಬಿಟೌನ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aameer Khan) ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು, ಸಕ್ಸಸ್, ಫೆಲ್ಯೂರ್‌ಗಳನ್ನು ತೆರೆದಿಟ್ಟಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಆಮೀರ್‌ಗೆ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ. ಶಾರೂಕ್(Shah Rukh Khan), ಸಲ್ಮಾನ್(Salman Khan) ಹಾಗೂ ನೀವು ಒಟ್ಟಿಗೆ ಸಿನಿಮಾ ಮಾಡೋದು ಯಾವಾಗ ಎಂದು. ಇದಕ್ಕೆ ಆಮೀರ್ ಖುಷಿಯಿಂದಲೇ ಉತ್ತರಿಸಿದ್ದಾರೆ. ಈ ಬಗ್ಗೆ ಶಾರೂಕ್ ಹಾಗೂ ಸಲ್ಮಾನ್ ಬಳಿ ನಾನು ಮಾತನಾಡಿದ್ದೇನೆ. ‘ನಾವು ಮೂವರು ಇಷ್ಟು ವರ್ಷ ಚಿತ್ರರಂಗದಲ್ಲಿದ್ದೇವೆ, ಸಿನಿ ಕೆರಿಯರ್‌ನಲ್ಲಿ ಮೂವರು ಒಟ್ಟಿಗೆ ಒಂದು ಸಿನಿಮಾ ಮಾಡದೇ ಇರುವುದು ಪ್ರೇಕ್ಷಕರಿಗೆ ಅನ್ಯಾಯ ಮಾಡಿದ್ದಂತೆ’ ಎಂದು ಹೇಳಿದ್ಧೇನೆ ಎಂದಿದ್ದಾರೆ ಆಮೀರ್ ಖಾನ್.
ಅಲ್ಲಿಗೆ ಮೂವರು ಬಿಟೌನ್ ಸೂಪರ್ ಸ್ಟಾರ್‌ಗಳು ಒಟ್ಟಿಗೆ ನಟಿಸಲು ಆಮೀರ್ ಸಮ್ಮತಿ ಇದೆ ಎಂದಾಯಿತು. ಇಬ್ಬರು ಖಾನ್‌ಗಳು ಒಟ್ಟಿಗೆ ನಟಿಸೋ ಬಗ್ಗೆ ಸಮ್ಮತಿಸಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್ ಅವಶ್ಯಕತೆ ಇದೆ. ಅದನ್ನು ಮೊದಲು ಹುಡುಕಬೇಕು, ಒಳ್ಳೆಯ ನಿರ್ದೇಶಕರು, ಒಳ್ಳೆಯ ಕಥೆ ಸಿಗಲಿ ಎಂದು ಭರವಸೆ ಇಟ್ಟುಕೊಳ್ಳೋಣ ಎಂದಿದ್ದಾರೆ ಆಮೀರ್(Aameer Khan).
ಈ ಹಿಂದೆ ಶಾರೂಕ್(Shah Rukh Khan) ಬಳಿ ಈ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಮೂವರು ಖಾನ್‌ಗಳನ್ನು ಒಟ್ಟಿಗೆ ಸೇರಿಸಬೇಕು ಎಂದರೆ ನಿರ್ಮಾಪಕರು ಕೊನೆಗೆ ಚಡ್ಡಿ, ಬನಿಯನ್ ಮಾರಬೇಕಾಗುತ್ತೆ. ಇದು ಬಹಳ ಕಷ್ಟದ ಕೆಲಸ. ನಿರ್ಮಾಪಕರು ನಮ್ಮನ್ನು ಆಫರ್ಡ್ ಮಾಡಲು ಕಷ್ಟವಾಗುತ್ತೆ, ಮೂವರಿಗೂ ಸಿನಿಮಾ ಒಪ್ಪಿಗೆಯಾಗಬೇಕು, ಸ್ಕ್ರಿಪ್ಟ್ ಓಕೆಯಾಗಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಮೂವರನ್ನು ಸಹಿಸಿಕೊಳ್ಳೋ ಶಕ್ತಿ ಇರಬೇಕು. ಇದೆಲ್ಲಾ ಸಾಧ್ಯವಾದರೆ ಸಿನಿಮಾ ಮಾಡಬಹುದು ಎಂದಿದ್ದರು.