Aamir Khan: ಮಿಸ್ಟರ್ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್ ಆಮೀರ್ ಖಾನ್(Aamir Khan)ಮೊದಲ ಬಾರಿ ಮನಬಿಚ್ಚಿ ಮಾತನಾಡಿದ್ದಾರೆ. ಡಿಪ್ರೆಶನ್ ಹೋಗಿದ್ದೆ ಎಂದಿದ್ದಾರೆ. ಆ ನೋವನ್ನು ಮರೆಸಿದ್ದು ಯಾವ ಟ್ರೀಟ್‌ಮೆಂಟ್ ಅಲ್ಲವಂತೆ. ಆ ಒಂದು ಶೋ ಅಂತೆ. ನೋವಲ್ಲಿದ್ದ ಆಮೀರ್‌ನನ್ನು ಆ ಶೋ ಮನಬಿಚ್ಚಿ ನಗಿಸಿತ್ತಂತೆ. ಹೀಗೆ ಮನಬಿಚ್ಚಿ ಮಾತನಾಡಿದ್ದು ತನ್ನನ್ನು ನಗಿಸಿದ್ದ ಆ ಶೋನಲ್ಲಿಯೇ ಅನ್ನೋದು ವಿಶೇಷ.
ಹೌದು,, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್‌ರನ್ನು ಡಿಪ್ರೆಶನ್ ಭಾಧಿಸಿತಂತೆ. ಆಗ ಮೊರೆ ಹೋಗಿದ್ದು ಜನಪ್ರಿಯ ಕಾಮಿಡಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋಗೆ. ಹೀಗೆಂದು ಸ್ವತಃ ಆಮೀರ್(Aameer Khan) ಹೇಳಿಕೊಂಡಿದ್ದಾರೆ. ಅದು ತನ್ನ ನೆಚ್ಚಿನ ಶೋನಲ್ಲೇ ಈ ಮಾತು ಹೇಳಿಕೊಂಡು ಕಾರಣ ತಿಳಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಮೀರ್ ಶೋ ಆರಂಭವಾಗಿ 11 ವರ್ಷವಾಗಿದೆ. ಇಷ್ಟು ವರ್ಷದಲ್ಲಿ ಇದೇ ಮೊದಲು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರೋದು. ಇದಕ್ಕೆ ಕಾರಣ ಕಳೆದ ಎರಡು ಎರಡುವರೆ ವರ್ಷ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ತೀರಾ ಕಷ್ಟದ ದಿನಗಳನ್ನು ಅನುಭವಿಸಿದ್ದೆ ಆ ಸಮಯದಲ್ಲಿ ನನಗೆ ನಗು ತರಿಸಿದ್ದು, ನೋವನ್ನು ನಿವಾರಿಸಿದ್ದು ಕಪಿಲ್ ಶೋ ಎಂದು ಹೇಳಿದ್ದಾರೆ.
ಮಾನಸಿಕವಾಗಿ, ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದ ಸಮಯದಲ್ಲಿ ಕಪಿಲ್ ಶರ್ಮಾ ಕಾರ್ಯಕ್ರಮ ನೋಡುತ್ತಿದ್ದೆ. ಇದು ನನಗೆ ನೋವಿಂದ ಆಚೆ ಬರಲು ತುಂಬಾ ಸಪೋರ್ಟ್ ಮಾಡಿತ್ತು. ನೀವು ನನ್ನನ್ನು ಕಷ್ಟದ ದಿನಗಳಲ್ಲಿ ನಗಿಸಿದ್ದೀರಿ ಎಂದು ಮುಕ್ತ ಕಂಠದಿಂದ ಕಪಿಲ್ ಶರ್ಮಾ ತಂಡವನ್ನು ಹಾಡಿ ಹೊಗಳಿದ್ದಾರೆ ಆಮೀರ್ ಖಾನ್(Aameer Khan). ಇದೇ ಸಮಯದಲ್ಲಿ ಮಕ್ಕಳು ತಮ್ಮ ಸಲಹೆ ತೆಗೆದುಕೊಳ್ಳದರ ಬಗ್ಗೆ, ಸಿನಿಮಾ ಸೋಲಿನ ಬಗ್ಗೆ, ಅವಾರ್ಡ್ ಫಂಕ್ಷನ್‌ಗಳಲ್ಲಿ ಪಾಲ್ಗೊಳ್ಳದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸದ್ಯ ಆಮೀರ್ ‘ಸಿತಾರೆ ಜಮೀನ್ ಪರ್’ ಸಿನಿಮಾಗಾಗಿ ಸಿದ್ದರಾಗುತ್ತಿದ್ದಾರೆ. ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ.