ನಾ ಸಾಮಿ..ರಾರಾ ಸಾಮಿ ಎನ್ನುತ್ತಾ ಶ್ರೀವಲ್ಲಿ ನ್ಯಾಷನಲ್ ಕ್ರಷ್ ಆಗಿದ್ದನ್ನ ನಾವೆಲ್ಲರೂ ಕಣ್ಣಾರೆ ಕಂಡಿದ್ದೀವಿ. ಅದೇ ರೀತಿ ಸ್ಯಾಂಡಲ್‍ವುಡ್‍ನ ಮಿಲ್ಕಿಬ್ಯೂಟಿ ಆಶಿಕಾ ರಂಗನಾಥ್ `ಸಾಮಿ ಸಾಮಿ’ ಎನ್ನುತ್ತಾ ದಕ್ಷಿಣ ಭಾರತದ ಕ್ರಷ್ ಆಗ್ತಾರಾ? ಹೀಗೊಂದು ಕುತೂಹಲದ ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣ `ನಾ ಸಾಮಿ ರಂಗ’ ಸಿನಿಮಾ. ಟಾಲಿವುಡ್ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಈ ಚಿತ್ರದ ಹೀರೋ. ಇವರ ಹುಟ್ಟುಹಬ್ಬಕ್ಕೆ ಸ್ಪೆಷಲ್ಲಾಗಿ ಈ ಸಿನಿಮಾ ಅನೌನ್ಸ್ ಆಗಿದೆ. ಇವರಿಗೆ ಜೋಡಿಯಾಗಿ ನಟಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಫೋಟೋಶೂಟ್ ನಡೆದಿದೆ ಎಂದು ತಿಳಿದು ಬಂದಿದೆ. ಆಶಿಕಾ ಅವರು ಸಖತ್ ಗ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ತೆಲುಗು ಭಾಷೆಯ ಮೇಲೆ ಹಿಡಿತ ಇದೆ. ನಟನೆಯಲ್ಲೂ ಅವರು ಪಳಗಿದ್ದಾರೆ. ಈ ಕಾರಣದಿಂದ ಆಶಿಕಾ ಅವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.
ಸದ್ಯ ಪರಭಾಷಾ ಅಂಗಳದಲ್ಲಿ ಕನ್ನಡತಿಯರದ್ದೇ ಕಾರುಬಾರು. ಅದರಲ್ಲೂ ರಶ್ಮಿಕಾ ಮತ್ತು ಶ್ರೀಲೀಲಾ ಬಹುಬೇಡಿಕೆಯ ನಟಿಯರಾಗಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಪ್ತಮಿ ತೆಲುಗಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಪಟ್ಟತ್ತು ಅರಸನ್ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಲಗ್ಗೆ ಇಟ್ಟಿದ್ದ ಪಟಾಕಿ ಪೋರಿ, ಅಮಿಗೋಸ್ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಆದರೆ, ಡೆಬ್ಯೂ ಸಿನಿಮಾದಿಂದ ಅಷ್ಟೇನು ಸಕ್ಸಸ್ ಸಿಗಲಿಲ್ಲ. ಇದೀಗ ಮತ್ತೆ ತೆಲುಗು ಸಿನಿಮಾಗೆ ಸೆಲೆಕ್ಟ್ ಆಗಿರುವ ವಿಚಾರಕ್ಕೆ ಮಿಲ್ಕಿಬ್ಯೂಟಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಒಂದ್ವೇಳೆ ಈ ಸುದ್ದಿ ನಿಜ ಆದರೆ ತೆಲುಗಿನ ಎವರ್ ಗ್ರೀನ್ ಹೀರೋಗೆ ಜೋಡಿಯಾಗಿ ಅದೃಷ್ಟ ಪರೀಕ್ಷೆ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಮುಗುಳುನಗೆ ಸುಂದರಿಯ ಅಭಿಮಾನಿಗಳು.
ಅಂದ್ಹಾಗೇ, ನಟಿ ಆಶಿಕಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದಾರೆ. ಕ್ರೇಜಿಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಈಕೆ, ಶಿವಣ್ಣ, ಸುದೀಪ್, ಗಣೇಶ್, ಶ್ರೀ ಮುರುಳಿ ಸೇರಿದಂತೆ ಹಲವು ತಾರೆಯರೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ರೆಮೋ ಚಿತ್ರದ ನಂತರ 02† ಸಿಂಪಲ್‌ಸುನಿ ನಿರ್ದೇಶನದ ಗತವೈಭವ ಚಿತ್ರ ಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮಧ್ಯೆ . ʻನಾ ಸಾಮಿ ರಂಗʼ ಸಿನಿಮಾದ ಭಾಗವಾಗಿರೋ ಬಗ್ಗೆ ಬಜಾರ್‍ನಲ್ಲಿ ಶೈನ್ ಆಗ್ತಿದ್ದಾರೆ.
ʻನಾ ಸಾಮಿ ರಂಗʼ ಚಿತ್ರವನ್ನು ವಿಜಯ್ ಬಿನ್ನಿ ನಿರ್ದೇಶನ ಮಾಡುತ್ತಿದ್ದಾರೆ, ಶ್ರೀನಿವಾಸ ಚಿತ್ತುರಿ ನಿರ್ಮಾಣ ಮಾಡುತ್ತಿದ್ದಾರೆ. ಮಾಸ್ ಲುಕ್‍ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿರೋ ನಾಗಾರ್ಜುನ್ ಗಾರು, ಈ ಭಾರಿ ಹಬ್ಬದೂಟ ಗ್ಯಾರಂಟಿ ಅನ್ನೋದನ್ನ ಫಸ್ಟ್ ಲುಕ್ ಟೀಸರ್ ಮೂಲಕವೇ ಸಾಬೀತುಪಡಿಸಿದ್ದಾರೆ. ಎಂ.ಎಂ ಕೀರವಾಣಿ ಸಂಗೀತ ಚಿತ್ರಕ್ಕಿರಲಿದ್ದು ಮ್ಯೂಸಿಕ್ ಟ್ರೀಟ್ ಭರ್ಜರಿಯಾಗಿರಲಿದೆ. ಸದ್ಯ ನಾಗಾರ್ಜುನ ಅವರು ಬಿಗ್ ಬಾಸ್ ತೆಲುಗು ಸೀಸನ್ 7 ಹೋಸ್ಟ್ ಮಾಡುತ್ತಿದ್ದು, ʻನಾ ಸಾಮಿ ರಂಗʼ ಸಿನಿಮಾ ಮತ್ತು ಬಿಗ್ ಬಾಸ್ ಚಿತ್ರೀಕರಣವನ್ನು ಏಕಕಾಲದಲ್ಲಿ ನಡೆಸಿಕೊಂಡು ಹೋಗಬೇಕಿದೆ.